Get Updates
Get notified of breaking news, exclusive insights, and must-see stories!

AI ನಿರ್ಮಿತ ವಿಷಯಕ್ಕೆ ಲೇಬಲ್ ಹಾಕಲು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ವೈಶಿಷ್ಟ್ಯಗಳ ಪರಿಚಯ

ಇದೀಗ ಎಲ್ಲಿ ನೋಡಿದರೂ ಎಐನದ್ದೇ ಸದ್ದು ಜೋತಾಗಿದೆ. ಇದೀಗ AI ನಿರ್ಮಿತ ವಿಷಯಕ್ಕೆ ಲೇಬಲ್ ಹಾಕಲು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ವೈಶಿಷ್ಟ್ಯಗಳ ಪರಿಚಯಿಸಲಾಗಿದೆ. ಗೂಗಲ್‌ ಒಡೆತನದ ಯೂಟ್ಯೂಬ್, ಮೆಟಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಕೃತಕ ಬುದ್ಧಿಮತ್ತೆ (AI)ಯಿಂದ ರಚಿಸಲ್ಪಟ್ಟ ಅಥವಾ ತಿದ್ದುಪಡಿ ಮಾಡಲ್ಪಟ್ಟ ವಿಷಯಕ್ಕೆ ಲೇಬಲ್ ಮಾಡಲು ಅವಕಾಶ ನೀಡುವ ವೈಶಿಷ್ಟ್ಯಗಳನ್ನು ಪರಿಚಯಿಸಿವೆ.

ಕೃತಕ ಬುದ್ಧಿಮತ್ತೆ ಆಧಾರಿತ ಡೀಪ್‌ಫೇಕ್‌ಗಳ ಹೆಚ್ಚುತ್ತಿರುವ ಬೆದರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಕಳೆದ ತಿಂಗಳು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೈತಿಕ ಸಂಹಿತೆ) ನಿಯಮಗಳು, 2021ರ ತಿದ್ದುಪಡಿ ಕರಡು ಪ್ರಕಟಿಸಿದ ನಂತರ ಜಾರಿಗೊಂಡಿರುವ ಕ್ರಮವಾಗಿದೆ.

Social Media Platforms Introduce New Features to Label AI-Generated Content

AI ಮೂಲಕ ನಿರ್ಮಿಸಲ್ಪಟ್ಟ ಅಥವಾ ತಿದ್ದುಪಡಿ ಮಾಡಲ್ಪಟ್ಟ ವಿಷಯವನ್ನು ಪೋಸ್ಟ್ ಮಾಡುವಾಗ ಎಲ್ಲಾ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಘೋಷಣೆ ನೀಡುವುದು ಕಡ್ಡಾಯವಾಗುತ್ತದೆ. ಇಂತಹ ವಿಷಯಗಳನ್ನು ಪರಿಶೀಲಿಸಲು ತಂತ್ರಜ್ಞಾನ ಅಳವಡಿಕೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದೆ.

ಅಧಿಕಾರಿಗಳು ಹೇಳುವ ಪ್ರಕಾರ, ಪ್ರಮುಖ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು (SSMI) ಲೇಬಲ್‌ ಇಲ್ಲದೆ ಪ್ರಕಟವಾಗುವ AI ವಿಷಯಗಳನ್ನು ಫಿಲ್ಟರ್ ಮಾಡಲು ಆಂತರಿಕ ವ್ಯವಸ್ಥೆಗಳನ್ನು ಅಳವಡಿಸುವ ಕೆಲಸದಲ್ಲಿ ತೊಡಗಿದ್ದಾರೆ. ಆರಂಭಿಕ ಗಮನವು ಉನ್ನತ SSMIಗಳು ಅಥವಾ ಭಾರತದಲ್ಲಿ 5 ಮಿಲಿಯನ್ ಅಥವಾ ಅದಕ್ಕಿಂತ ಹೆಚ್ಚು ನೋಂದಾಯಿತ ಬಳಕೆದಾರರನ್ನು ಹೊಂದಿರುವವರ ಮೇಲೆ. YouTube, Facebook ಮತ್ತು Instagram ಭಾರತದಲ್ಲಿ ಸರ್ಕಾರದ ನಿರ್ದೇಶನಕ್ಕೆ ಅನುಗುಣವಾಗಿ ವೈಶಿಷ್ಟ್ಯಗಳನ್ನು ಅನಾವರಣಗೊಳಿಸಿದ್ದಾರೆ ಎಂದು ಪ್ಲಾಟ್‌ಫಾರ್ಮ್‌ಗಳ ಪರಿಶೀಲನೆಯಿಂದ ತಿಳಿದುಬಂದಿದೆ.

ಯೂಟ್ಯೂಬ್‌ನಲ್ಲಿ ಕಟೆಂಟ್‌ ಕ್ರಿಯೆಟರ್ಸ್‌ ಈಗ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಅರ್ಥಪೂರ್ಣವಾಗಿ ತಿದ್ದುಪಡಿ ಮಾಡಲ್ಪಟ್ಟ ಅಥವಾ ಸಂಶ್ಲೇಷಿತವಾಗಿ ರಚಿಸಲಾದ ವಿಷಯವನ್ನು ಕಡ್ಡಾಯವಾಗಿ ಬಹಿರಂಗಪಡಿಸಬೇಕು ಎಂದು ಬಳಕೆದಾರರಿಗೆ ತಿಳಿಸಿದೆ. ಅದೇ ರೀತಿ, ಡಿಜಿಟಲ್ ಮೂಲಕ ರಚಿಸಲ್ಪಟ್ಟ ಅಥವಾ ತಿದ್ದುಪಡಿ ಮಾಡಲ್ಪಟ್ಟ ಫೋಟೋರಿಯಲಿಸ್ಟಿಕ್ ಆಡಿಯೋ ಮತ್ತು ವೀಡಿಯೋಗಳನ್ನು ಹೊಂದಿರುವ ವಿಷಯಕ್ಕೆ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಬಳಕೆದಾರರು ಲೇಬಲ್ ಹಾಕುವುದು ಈಗ ಮೇಟಾ ಕಡ್ಡಾಯ ಮಾಡಿದೆ ಎಂದು ಬಳಕೆದಾರರಿಗೆ ನೀಡಿದ ಸೂಚನೆಗಳಲ್ಲಿ ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+