Artificial Intelligence: ಪ್ರತಿಯೊಂದು ಕಚೇರಿಯಲ್ಲೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹವಾ ಮತ್ತಷ್ಟು ಜೋರು!
ಮನುಷ್ಯ ಸಿಕ್ಕಾಪಟ್ಟೆ ವೇಗದಲ್ಲಿ ಮುಂದುವರಿದು ಇದೀಗ ಹೊಸ ಹೊಸ ತಂತ್ರಜ್ಞಾನ ಅಭಿವೃದ್ಧಿ ಮಾಡಿ ಭವಿಷ್ಯ ರೂಪಿಸುವ ತವಕದಲ್ಲಿ ಇದ್ದಾನೆ. ಅದೇ ರೀತಿಯಾಗಿ ಇದೀಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹವಾ ಮತ್ತಷ್ಟು ಜೋರಾಗಿದೆ. ಎಲ್ಲೆಲ್ಲೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಈ ಸಮಯದಲ್ಲೇ ಕೋಟಿ ಕೋಟಿ ಉದ್ಯೋಗಗಳು ಕಟ್ ಆಗುವ ಭಯ ಕೂಡ ಆವರಿಸಿದೆ. ಭವಿಷ್ಯದ ಪೀಳಿಗೆ ಕೂಡ ಈ ವಿಚಾರದಲ್ಲಿ ಚಿಂತೆ ಮಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇಂತಹ ಸಮಯದಲ್ಲೇ ಜಾಗತಿಕ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಂಸ್ಥೆಯ ಸಿಇಒ ಏನು ಹೇಳಿದ್ದಾರೆ ಗೊತ್ತಾ?
ಅಂದಹಾಗೆ ಪ್ರತಿಯೊಂದು ಕಚೇರಿ ಅರ್ಥಾತ್ ಆಫೀಸ್ ಎಐ ಕಡೆಗೆ ವಾಲುತ್ತಿದೆ. ಬಹುತೇಕ ಎಲ್ಲಾ ಆಫೀಸ್ ಬಾಸ್‌ಗಳು ತಮ್ಮ ತಮ್ಮ ಕಚೇರಿ ಉದ್ಯೋಗಿಗಳಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕಲಿಯಲು ಸಲಹೆ ಕೂಡ ನೀಡುತ್ತಿದ್ದಾರೆ. ಅಕಸ್ಮಾತ್ ಸ್ಕಿಲ್ ಡೆವಲಪ್ ಆಗದೇ ಇದ್ದರೆ ಅಂತಹ ಉದ್ಯೋಗಿ ಮನೆಗೆ ಹೋಗುವುದು & ಕೆಲಸ ಕಳೆದುಕೊಳ್ಳುವುದು ಕೂಡ ಗ್ಯಾರಂಟಿ ಆಗಿದೆ. ಇಂತಹ ಸಮಯದಲ್ಲೇ ಇಲ್ಲೊಬ್ಬರು ಸಿಇಒ ಕಚೇರಿ ಒಳಗೆ ಎಐ ಹವಾ ಹೇಗೆ ಇರಲಿದೆ? ಅನ್ನೋದನ್ನ ವಿವರಿಸಿದ್ದಾರೆ.

ಕಾಮೆಟ್ ಬ್ರೌಸರ್ ಮೂಲಕ ಕ್ರಾಂತಿ!
ಅಂದಹಾಗೆ ಪರ್ಪ್ಲೆಕ್ಸಿಟಿ ಎಐ ಸಂಸ್ಥೆ ಸಹ ಸಂಸ್ಥಾಪಕ & ಸಿಇಒ ಅರವಿಂದ್ ಶ್ರೀನಿವಾಸ್, ಕಾಮೆಟ್ ಬ್ರೌಸರ್‌ನ ಮೂಲಕ ಭವಿಷ್ಯದಲ್ಲಿ ಪ್ರತಿಯೊಂದು ಆಫಿಸ್‌ನಲ್ಲಿ ದೊಡ್ಡ ಮಟ್ಟಿಗೆ ಬದಲಾವಣೆ ಆಗಲಿದೆ ಅಂತಾ ಇದೀಗ ಬಿಗ್ ಅಪ್‌ಡೇಟ್ ನೀಡಿದ್ದಾರೆ. ಅದರಲ್ಲೂ, ವೈಟ್ ಕಾಲರ್ ಜಾಬ್‌ಗಳಿಗೆ ಭಾರಿ ದೊಡ್ಡ ಪೆಟ್ಟು ಬೀಳುವ ಸಾಧ್ಯತೆ ಇದ್ದು & ನೇಮಕಾತಿ ಮತ್ತು ಆಡಳಿತ ಸಹಾಯಕರ ಹುದ್ದೆಗಳಿಗೆ ಕೂಡ ಇದೇ ಎಐ ಬಂದು ಕೂರುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ಅದರಲ್ಲೂ ಕಾಮೆಟ್ ಬ್ರೌಸರ್ ಮತ್ತು ಪ್ರಗತಿಶೀಲ ಭಾಷಾ ಮಾದರಿಗಳನ್ನು ಸಮಗ್ರವಾಗಿ ಬಳಸಿಕೊಂಡು ಪ್ರಸ್ತಾಪಿಸಿರುವ ಹುದ್ದೆಗಳಲ್ಲಿ ದೊಡ್ಡ ಕ್ರಾಂತಿಕಾರಿ ಬದಲಾವಣೆ ತರಲು ಸಾಧ್ಯತೆ ಇದೆ ಎಂದಿದ್ದಾರೆ.
ಹಲವರ ಕೆಲಸ ಹೋಗುವುದು ಪಕ್ಕಾ?
ಹಾಗೇ ಭವಿಷ್ಯದಲ್ಲಿ ಕಾಮೆಟ್ ಬ್ರೌಸರ್ & ಪ್ರಗತಿಶೀಲ ಭಾಷಾ ಮಾದರಿಗಳ ಮೂಲಕ ಅಚ್ಚುಕಟ್ಟಾಗಿ ಎಲ್ಲಾ ಹುದ್ದೆಗಳ ಕೆಲಸಗಳನ್ನು ಕೂಡ ನಿರ್ವಹಣೆ ಮಾಡಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ. ಹೀಗೆ, ಪರ್ಪ್ಲೆಕ್ಸಿಟಿ ಎಐ ಸಂಸ್ಥೆ ಸಹ ಸಂಸ್ಥಾಪಕ & ಸಿಇಒ ಅರವಿಂದ್ ಶ್ರೀನಿವಾಸ್ ಅವರು ನೀಡಿರುವ ಮಾಹಿತಿ ಈಗ ಭಾರಿ ದೊಡ್ಡ ಸಂಚಲನ ಸೃಷ್ಟಿ ಮಾಡುವ ಜೊತೆಗೆ ಜಾಗತಿಕ ಮಟ್ಟದಲ್ಲಿ ಹ್ಯೂಮನ್ ರಿಸೋರ್ಸ್ ಹಾಗೂ ವೈಟ್‌ಕಾಲರ್ ಹುದ್ದೆಗಳು ಸೇರಿದಂತೆ ಆಡಳಿತ ಸಹಾಯಕರ ಹುದ್ದೆಗಳು ಕಡಿತವಾಗುವ ಆತಂಕ ಕೂಡ ಈಗ ಎದುರಾಗಿದೆ.
ಒಟ್ನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಲ್ಲೆಲ್ಲೂ ಸಂಚಲನ ಸೃಷ್ಟಿ ಮಾಡುವ ಜೊತೆಗೇ, ಕೋಟ್ಯಂತರ ಹುದ್ದೆಗಳಿಗೆ ಕಂಟಕ ಅನ್ನೋ ಮಾತು ಕೂಡ ಕೇಳಿಬರ್ತಿದೆ. ಆದರೆ ಭವಿಷ್ಯದಲ್ಲಿ ಇದೆಲ್ಲಾ ಬದಲಾಗುತ್ತಾ? ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕ ಹೊಸ ಕ್ರಾಂತಿಯೇ ಸೃಷ್ಟಿಯಾಗಿ, ಬದಲಾವಣೆಗು ಕೂಡ ಅದು ನಾಂದಿ ಹಾಡುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ. ಇಷ್ಟೆಲ್ಲದರ ನಡುವೆ ಹಲವರು ಈಗಾಗಲೇ ಎಐ ಕಾರಣಕ್ಕೆ ತಮ್ಮ ತಮ್ಮ ಕೆಲಸ ಕಳೆದುಕೊಂಡು ಬೇರೆ ಬೇರೆ ಜಾಬ್ ಹುಡುಕುವಂತೆ ಆಗಿದೆ.












Click it and Unblock the Notifications