ಶೀಘ್ರದಲ್ಲೇ 'ವೆಬ್ ಬ್ರೌಸರ್' ಬಿಡುಗಡೆ ಮಾಡಲಿದೆ OpenAI: ಮಾಹಿತಿ, ವಿವರ
OpenAI ಶೀಘ್ರದಲ್ಲೇ ತನ್ನದೇ ಆದ ಎಐ ಚಾಲಿತ ವೆಬ್ ಬ್ರೌಸರ್ ಬಿಡುಗಡೆ ಮಾಡಲು ಸಜ್ಜಾಗಿದೆ. ಪರ್ಪ್ಲೆಕ್ಸಿಟಿಯ 'ಕಾಮೆಟ್' ಬ್ರೌಸರ್ ಬಿಡುಗಡೆಯಾದ ಮರುದಿನವೇ ಓಪನ್ ಎಐನಿಂದ ಈ ಮಾಹಿತಿ ಹೊರಬಿದ್ದಿದೆ. ಓಪನ್ ಎಐನಿಂದ ಬಿಡುಗಡೆಯಾಗಲಿರುವ ಎಐ ಚಾಲಿತ ಬ್ರೌಸರ್ ಈಗಾಗಲೇ ಲಭ್ಯವಿರುವ ಬ್ರೌಸರ್‌ಗಳಿಗೆ ಹೊಸ ಸವಾಲನ್ನು ತಂದೊಡ್ಡಲಿದೆ ಎಂದು ಸುದ್ದಿಸಂಸ್ಥೆ ರಾಯಟರ್ಸ್ ವರದಿ ಮಾಡಿದೆ.
ChatGPT ತಯಾರಕ ಸಂಸ್ಥೆಯಾದ ಓಪನ್ ಎಐ, ತನ್ನ ಬ್ರೌಸರ್ ಅನ್ನು ಮುಂಬರುವ ಕೆಲ ವಾರಗಳಲ್ಲಿ ಬಿಡುಗಡೆ ಮಾಡುವ ಉದ್ದೇಶ ಹೊಂದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪರ್ಪ್ಲೆಕ್ಸಿಟಿಯ ಕಾಮೆಟ್ ಮತ್ತು ದಿ ಬ್ರೌಸರ್ ಕಂಪನಿಯ ಡಿಯಾ ಬ್ರೌಸರ್‌ಗಳಂತೆ, ಓಪನ್ ಎಐ ಬ್ರೌಸರ್ ಕೂಡ ಎಐ ಚಾಲಿತವಾಗಿರಲಿದೆ. ಬಳಕೆದಾರರು ವೆಬ್‌ನ್ನು ಹೇಗೆ ಬ್ರೌಸ್ ಮಾಡುತ್ತಾರೆ ಎಂಬುದನ್ನು ಪರಾಮರ್ಶಿಸಿ ಎಐ ಅನ್ನು ಅಳವಡಿಸಲಾಗುತ್ತದೆ ಎಂದು ಕಂಪನಿಯು ತಿಳಿಸಿದೆ.

ಈ ಬ್ರೌಸರ್ ಬಳಕೆದಾರರ ಕೆಲ ಸಂವಹನಗಳನ್ನು (user interaction) ವೆಬ್‌ಸೈಟ್‌ಗಳಿಗೆ ಲಿಂಕ್ ಮಾಡುವ ಬದಲು ನೇರವಾಗಿ ChatGPT ಒಳಗೇ ಇಟ್ಟುಕೊಳ್ಳಲಿದೆ. ರಾಯಿಟರ್ಸ್ ವರದಿಯ ಪ್ರಕಾರ, OpenAI ಬ್ರೌಸರ್‌ನಲ್ಲಿ ಆಪರೇಟರ್ ಎಂಬ ವೆಬ್ ಬ್ರೌಸಿಂಗ್ ಎಐ ಏಜೆಂಟ್ ಕಾರ್ಯನಿರ್ವಹಿಸಲಿದೆ. ಇದು ಈ ಬ್ರೌಸರ್‌ನ ಪ್ರಮುಖ ವೈಶಿಷ್ಟ್ಯವೆಂದೂ ಹೇಳಲಾಗುತ್ತಿದೆ.
ಎಐ ಚಾಲಿತ ಸಂವಾದಾತ್ಮಕ ಬ್ರೌಸಿಂಗ್
ChatGPT ರೀತಿಯ ಸಂವಾದಾತ್ಮಕ ಇಂಟರ್ಫೇಸ್ (conversational interface) ಅನ್ನು ಓಪನ್ಎಐ ಬ್ರೌಸರ್ ಒಳಗೊಂಡಿರುತ್ತದೆ. ಇದರ ಮೂಲಕ ಬಳಕೆದಾರರು ಯಾವುದೇ ಪ್ರಶ್ನೆಗಳನ್ನು ನೇರವಾಗಿ ಕೇಳಬಹುದು. ಉದಾಹರಣೆಗೆ 'ಈ ವಾರ ಹವಾಮಾನ ಹೇಗಿದೆ?' 'ಈ ಟಿಕೆಟ್ ಬುಕ್ ಮಾಡು', 'ಈ ಫಾರ್ಮ್ ತುಂಬು' ಎಂಬ ಆದೇಶಗಳನ್ನು ಮಾಡಿದರೆ, ಎಐ ಚಾಲಿತ ಬ್ರೌಸರ್ ಈ ಎಲ್ಲ ಕೆಲಸಗಳನ್ನು ಮಾಡಲಿದೆ.
ಕ್ರೋಮಿಯಮ್ ಆಧಾರಿತ ಎಂಜಿನ್
ಈ ಬ್ರೌಸರ್ ಕ್ರೋಮಿಯಮ್ ಆಧಾರಿತ ಎಂಜಿನ್ ( ಕ್ರೋಮ್, ಎಡ್ಜ್ ಬಳಸುವ ಮೂಲ ತಂತ್ರಜ್ಞಾನ) ಆಗಿದೆ. ಇದು ತನ್ನದೇ ಆದ ವೇಗ, ಸ್ಥಿರತೆ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದೆ.
ಆಪರೇಟರ್ ಎಐ ಏಜೆಂಟ್
ಈ ಬ್ರೌಸರ್ ಬಳಕೆದಾರರಿಗೆ ಬೇಕಾಗಿರುವ ಫಾರ್ಮ್‌ಗಳನ್ನು ತುಂಬುವುದು, ವೆಬ್‌ಸೈಟ್‌ಗಳಲ್ಲಿ ನ್ಯಾವಿಗೇಟ್ ಮಾಡುವುದು, ಬುಕ್ಕಿಂಗ್ ಮಾಡುವುದು ಮುಂತಾದ ಕಾರ್ಯಗಳನ್ನು ಮಾಡುವ ಆಪರೇಟರ್ ಎಂಬ ಎಐ ಏಜೆಂಟ್ ಅನ್ನು ಒಳಗೊಂಡಿದೆ.












Click it and Unblock the Notifications