Artificial intelligence: ಟಿವಿ ಸಿರೀಸ್ ಕಾರ್ಯಕ್ರಮದಲ್ಲಿ ಎಐ ಬಳಸಿದ ನೆಟ್‌ಫ್ಲಿಕ್ಸ್
Artificial intelligence:ಎಐ ತಂತ್ರಜ್ಞಾನ ಎಲ್ಲ ವಲಯಗಳನ್ನು ಕ್ರಮೇಣ ಆವರಿಸುತ್ತಿದೆ. ಇದೀಗ ಟಿವಿ ಕಾರ್ಯಕ್ರಮವನ್ನು ಆವರಿಸಿದೆ. ಹೌದು, ನೆಟ್‌ಫ್ಲಿಕ್ಸ್ ತನ್ನ ಟಿವಿ ಕಾರ್ಯಕ್ರಮಗಳ ಪೈಕಿ ಒಂದರಲ್ಲಿ ಮೊದಲ ಬಾರಿಗೆ 'ಜನರೇಟಿವ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ' ತಂತ್ರಜ್ಞಾನದಿಂದ ನಡೆಸಲ್ಪಡುವ ದೃಶ್ಯಗಳನ್ನು ಬಳಸಿದೆ. ಈ ಬಳಕೆ ಬಗ್ಗೆ ನೆಟ್‌ಫ್ಲಿಕ್ಸ್ ಒಪ್ಪಿಕೊಂಡಿದೆ. ಅದಲ್ಲದೇ ನೆಟ್‌ಫ್ಲಿಕ್ ಮನರಂಜನೆ ವಿಷಯ ರಚನೆಯಲ್ಲಿ AI ಬಳಕೆಯನ್ನು ಇದು ಸೂಚಿಸುತ್ತದೆ.
ನೆಟ್‌ಫ್ಲಿಕ್ಸ್ ಸಹ-ಸಿಇಒ ಟೆಡ್ ಸರಾಂಡೋಸ್ ಅವರು ಈ ಮಾಹಿತಿ ಬಹಿರಂಗಪಡಿಸಿದರು. ಕಳೆದ ವಾರ ಏಪ್ರಿಲ್‌ನಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡ ಅರ್ಜೆಂಟೀನಾದ ಸರಣಿ ದಿ ಎಟರ್ನಾಟ್, ಮೂಲ ಸರಣಿ ಅಥವಾ ಚಲನಚಿತ್ರದ ಪ್ರದರ್ಶನದಲ್ಲಿ ಮೊದಲ ಬಾರಿಗೆ GenAI ಬಳಕೆ ಕಾಣಿಸಿದೆ. ನೆಟ್‌ಫ್ಲಿಕ್ಸ್ ಆಂತರಿಕ ದೃಶ್ಯ ಪರಿಣಾಮಗಳ ಸ್ಟುಡಿಯೋ ಇದೆ. ಅದು AI-ಚಾಲಿತ ಪರಿಕರಗಳನ್ನು ಬಳಸಿಕೊಂಡಿದ್ದನ್ನು ಹಾಗೂ ಪ್ರದರ್ಶನಕ್ಕೆ ಸೃಜನಶೀಲ ಎಐ ಪಾಲುದಾರಿಕೆಯನ್ನು ಅವರು ವಿವರಿಸಿದರು.

ಈ ಟಿವಿ ಪರದೆ ಮೇಲೆ ಪ್ರದರ್ಶನಗೊಂಡ ಸರಣಿಯಲ್ಲಿ ಸಾಂಪ್ರದಾಯಿಕ VFX ದೃಶ್ಯ ಪರಿಣಾಮ ಪರಿಕರಗಳು ಬಳಸಿಲ್ಲ. ಬದಲಾಗಿ ಎಐ ತಂತ್ರಜ್ಞಾನ ಅವಳಡಿಕೆಯಿಂದ 10 ಪಟ್ಟು ವೇಗವಾಗಿ ಪೂರ್ಣಗೊಂಡಿದೆ ಎಂದು ನೆಟ್‌ಫ್ಲಿಕ್ಸ್ ತಿಳಿಸಿದೆ. ಸಾಂಪ್ರದಾಯಿಕ ತಾಂತ್ರಿಕ ವಿಧಾನಗಳ ಅಳವಡಿಕೆ ಸಿನಿಮಾ ಸಂಪಾದನೆಯಲ್ಲಿ ಮುಖ್ಯ ಪಾತ್ರವಹಿಸಿದೆ. ಈ ಜನರೇಟಿವ್ AI ನಿರ್ಮಾಣ ವೇಗದ ಕೆಲಸಕ್ಕೆ ಫೂರಕವಾಗಿದೆ. ಜೊತೆಗೆ ಕಡಿಮೆ ವೆಚ್ಚದಲ್ಲಿ ಅಗತ್ಯತೆಯನ್ನು ಪೂರೈಸಿಕೊಳ್ಳಬಹುದಾಗಿದೆ ಎಂದು ಕಂಪನಿ ನಂಬಿದೆ.
ಮನರಂಜನೆ ವಲಯದಲ್ಲಿ AI ಬಳಕೆಗೆ ಮಿಶ್ರ ಪ್ರತಿಕ್ರಿಯೆ ಸದ್ಯಕ್ಕಿದೆ. ಈ ತಂತ್ರಜ್ಞಾನ ಬಳಕೆ ಬಗ್ಗೆ ಚಿತ್ರ ವಿಮರ್ಶಕರ ವಿರೋಧವಿದೆ. ಒಪ್ಪಿಗೆ ಇಲ್ಲದೇ ಏನನ್ನು ಬೇಕಾದರ ರಚಿಸಬಹುದು. ಇದರಿಂದ ಮಾನವ ಉದ್ಯೋಗಕ್ಕೆ ಹೊಡೆತ ಬೀಳಲಿದೆ. ಸಿಬ್ಬಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. 2023 ರ ಹಾಲಿವುಡ್ ಬರಹಗಾರರ ಮುಷ್ಕರದ ಸಮಯದಲ್ಲಿ AI ಒಂದು ಪ್ರಮುಖ ವಿವಾದಾತ್ಮಕ ಅಂಶವಾಗಿತ್ತು. ಸಿನಿಮಾಗಾಗಿ ಬರಹಗಾರರು ಈಗಾಗಲೇ ಬರೆದಿರುವ ಸ್ಕ್ರಿಪ್ಟ್ ಬರೆಯಲು ಅಥವಾ ಎಡಿಟ್ ಮಾಡಲು ಎಐ ಬಳಕೆ ನಿಷೇಧಿಸಲಾಗಿದೆ.












Click it and Unblock the Notifications