N.R.Narayana Murthy: 70 ಗಂಟೆ ನಾರಾಯಣಮೂರ್ತಿ AI ಬಗ್ಗೆ ಹೇಳಿದ ಮಾತಿದು
N.R.Narayana Murthy: ಇನ್ಫೋಸಿಸ್ ಸಹ ಸಂಸ್ಥಾಪಕ ಎನ್‌ಆರ್ ನಾರಾಯಣ ಮೂರ್ತಿ ಅವರು ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲಿರುತ್ತಾರೆ. ಹಾಗೆಯೇ ಇದೀಗ ಟ್ರೆಂಡಿಂಗ್‌ನಲ್ಲಿರುವ ಎಐ ಬಗ್ಗೆ ಪ್ರತಿಕ್ರಿಯಿಸಿ ಇದರಿಂದ ಏನೆಲ್ಲಾ ಉಪಯೋಗಗಳಿವೆ ಹಾಗೂ ಇದು ಉದ್ಯೋಗಗಳನ್ನು ಹೇಗೆ ಸೃಷ್ಟಿಸುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ನೀಡಿದ್ದಾರೆ.
ಕೃತಕ ಬುದ್ಧಿಮತ್ತೆ ಉದ್ಯೋಗಗಳನ್ನು ಕಸಿದುಕೊಳ್ಳುವುದಿಲ್ಲ. ಬದಲಾಗಿ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಭಾರತದ ಐಟಿ ವಲಯದಲ್ಲಿ ಉತ್ಪಾದಕತೆಯನ್ನು ಹೆಚ್ಚಳ ಮಾಡುತ್ತದೆ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರು ಹೇಳಿದ್ದಾರೆ.

ಸಂವಾದವೊಂದರಲ್ಲಿ ಮಾತನಾಡಿದ ಅವರು, ಕಂಪನಿಗಳು ಎಐ ಅನ್ನು ಉದ್ಯೋಗಿಗಳ ಬದಲಿಗೆ ಸಹಾಯಕ ಸಾಧನವಾಗಿ ನೋಡಬೇಕೆಂದು ಒತ್ತಿ ಹೇಳಿದರು. ತಂತ್ರಜ್ಞಾನವು ಉದ್ಯೋಗಗಳನ್ನ ಕಿತ್ತುಕೊಳ್ಳುವುದಿಲ್ಲ. ಬದಲಾಗಿ ಬೇರೆ ರೀತಿಯ ಉದ್ಯೋಗಗಳನ್ನ ಸೃಷ್ಟಿ ಮಾಡುತ್ತದೆ ಎಂದು ಹೇಳಿದರು.
1970ರ ದಶಕದಲ್ಲಿ ಬ್ಯಾಂಕಿಂಗ್ ವಲಯದಲ್ಲಿ ತಾಂತ್ರಿಕ ಮುನ್ನಡೆ ಉದ್ಯೋಗಗಳನ್ನ ಸೃಷ್ಟಿಸಿತು. ಉದ್ಯೋಗಗಳನ್ನು ಕಿತ್ತುಕೊಳ್ಳಲಿಲ್ಲ. ನಾಶ ಮಾಡಲಿಲ್ಲ. ಕಂಪ್ಯೂಟರ್ ಬ್ಯಾಂಕಿಂಗ್ ಕ್ಷೇತ್ರಕ್ಕೆ ಲಗ್ಗೆ ಇಟ್ಟಾಗ ಉದ್ಯೋಗಗಳು ಹೋಗುತ್ತವೆಂದು ತುಂಬಾ ಜನ ಹೇಳಿದ್ದರು. ಆದರೆ, ಉದ್ಯೋಗಗಳ ಪ್ರಮಾಣ ಶೇಕಡ 40ರಿಂದ 50ರಷ್ಟು ಹೆಚ್ಚಳ ಆಗಿದೆ ಎಂದು ತಿಳಿಸಿದರು.
ಅಲ್ಲದೆ, ಇದೀಗ ಎಲ್ಲಾ ಐಟಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಚಾಟ್ ಜಿಪಿಟಿಯನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದರ ಬಳಕೆಯಿಂದ ತಮ್ಮ ಕೆಲಸದ ದಕ್ಷತೆ ಹೆಚ್ಚಾಗಿದೆ. ಉಪನ್ಯಾಸದ ಸಮಯ 25-30 ಗಂಟೆಗಳಿಂದ ಕೇವಲ 5 ಗಂಟೆಗಳಿಗೆ ಇಳಿಕೆಯಾಗಿದೆ. ನಾನು ನನ್ನ ಉತ್ಪಾದಕತೆಯನ್ನು 5 ಪಟ್ಟು ಹೆಚ್ಚಿಳ ಮಾಡಿಕೊಂಡಿದ್ದೇನೆ. ಎಐ ಮಾನವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಐಟಿ ವಲಯದಲ್ಲಿ ತುಂಬಾ ಬದಲಾವಣೆಗಳಾಗಲಿವೆ. ವೃತ್ತಿಪರರು ಹೆಚ್ಚು ಕಷ್ಟಕರ ಸಮಸ್ಯೆಗಳನ್ನ ಪರಿಹರಿಸಿಕೊಳ್ಳಲಿದ್ದಾರೆ. ನಮ್ಮ ಪ್ರೋಗ್ರಾಮರ್ ಮತ್ತು ವಿಶ್ಲೇಷಕರು ಉತ್ತಮ ಅವಶ್ಯಕತೆಗಳನ್ನ ವ್ಯಾಖ್ಯಾನಿಸುವಲ್ಲಿ ಚುರುಕಾಗಲಿದ್ದಾರೆ. ಆಗ ಅವರು ದೊಡ್ಡ ಸಮಸ್ಯೆಗಳನ್ನು ಆರಮಾಗಿ ಪರಿಹರಿಸುತ್ತಾರೆ ಎಂದು ಹೇಳಿದರು.
ಎಐ ಅನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಲು ಸರಿಯಾದ ಪ್ರಶ್ನೆಗಳನ್ನು ಕೇಳುವುದು ಮತ್ತು ನಿಖರವಾಗಿ ಅಗತ್ಯತೆಗಳನ್ನ ವ್ಯಾಖ್ಯಾನಿಸುವುದು ಮುಖ್ಯವಾಗಿದೆ. ಅಗತ್ಯವಿರುವ ವ್ಯಾಖ್ಯಾನವನ್ನು ನೀಡುವುದರಲ್ಲಿಯೇ ಜಾಣತನ ಇದೆ. ಸರಿಯಾದ ಪ್ರಶ್ನೆಯನ್ನು ಕೇಳುವುದರಲ್ಲಿಯೇ ಬುದ್ಧಿವಂತಿಕೆ ಅಡಗಿದೆ ಎಂದು ಹೇಳಿದರು.
ಈ ತಂತ್ರಜ್ಞಾನದಿಂದ ನಮ್ಮ ಉದ್ಯಮದ ಬೆಳವಣಿಗೆ ಹೆಚ್ಚಾದಂತಾಗಲಿದೆ. ಭಾರತದ ಐಟಿ ಉದ್ಯಮವು ಎಐ ಬಗ್ಗೆ ಚಿಂತಿಸುತ್ತಿದೆ. ಆದರೆ, ಎಐ ನಮ್ಮ ಉದ್ಯಮದ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಎಐ ಅನ್ನು ಸರಿಯಾಗಿ ಬಳಕೆ ಮಾಡಿದರೆ ಅದು ನಮಗೆ ಹೆಚ್ಚು ಲಾಭವಾಗಲಿದೆ ಎಂದು ಹೇಳಿದರು.
ದೈನಂದಿನ ಕೆಲಸಗಳಲ್ಲಿ ಸಮಯ ಉಳಿತಾಯ, ಸೂಚನೆಗಳನ್ನು ನೀಡಲು, ಪಾಠಗಳು ಮತ್ತು ಚಟುವಟಿಕೆಗಳನ್ನು ಸೃಜನಾತ್ಮಕ ರೀತಿಯಲ್ಲಿ ಬೋಧಿಸಲು ಎಐ ತುಂಬಾ ಸಹಕಾರಿಯಾಗಿದೆ ಎಂದು ಎಐಟಿ ಪ್ರಾಂಶುಪಾಲ ಡಾ.ಸಿ.ಟಿ.ಜಯದೇವ್ ಹೇಳಿದರು. ಎಐ ತಜ್ಞರು ಅಭಿವೃದ್ಧಿಪಡಿಸಿರುವ ಕೋರ್ಸ್ ಎಐ ಅಭ್ಯಾಸಕ್ಕೆ ಸಹಾಯ ಮಾಡುತ್ತದೆ ಎಂದು ಹೇಳಿದರು. ಹೀಗೆ ಎಐ ಬಗ್ಗೆ ಪ್ರತಿನಿತ್ಯವೂ ಕೂಡ ಚರ್ಚೆಗಳು ಜೋರಾಗಿಯೇ ನಡೆಯುತ್ತಿವೆ. ಅಲ್ಲದೆ, ಇದರಿಂದ ಏನೆಲ್ಲಾ ಉಪಯೋಗಗಳಿವೆ ಅಂತಲೂ ತಿಳಿಸುವ ಕೆಲಸವನ್ನು ತಜ್ಞರು ಮಾಡುತ್ತಿದ್ದಾರೆ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications