ಎಐ ಲೋಕದಲ್ಲಿ ಹೊಸ ಯುಗ ಆರಂಭ, ವೆಬ್‌ಸೈಟ್‌ಗಳಿಗೆ ಸಿಗಲಿದೆ ಭರ್ಜರಿ ಬಂಪರ್! Artificial Intelligence
ಎಐ ಎಲ್ಲಾ ಕಡೆಯೂ ತನ್ನ ಹವಾ ತೋರಿಸುತ್ತಿದ್ದು, ಈಗಾಗಲೇ ಹಲವು ವಿಭಾಗದಲ್ಲಿ ಸಂಪೂರ್ಣವಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮೂಲಕವೇ ಕೆಲಸ ಮಾಡಿಸಲಾಗುತ್ತಿದೆ. ಇದೇ ಕಾರಣಕ್ಕೆ ಹಲವರ ಕೆಲಸ ಕೂಡ ಹೋಗಿದೆ ಅನ್ನೋ ಆರೋಪ ಇದ್ದರೂ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂದ್ರೆ ಎಐ ಇಲ್ಲದೆಯೇ ಏನೂ ಆಗಲ್ಲ ಅನ್ನೋದು ಇಡೀ ಜಗತ್ತಿಗೆ ಗೊತ್ತಾಗಿದೆ. ಇಂತಹ ಸಮಯದಲ್ಲೇ ವೆಬ್‌ಸೈಟ್‌ಗಳಿಗೆ ಕೂಡ, ಹೊಸ ರೂಪ ನೀಡಲು ಇದೀಗ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಾಟ್ ಎಂಟ್ರಿ ಕೊಡುತ್ತಿದೆ.
ಹೌದು, ತಮ್ಮ ಅನುಮತಿ ಇಲ್ಲದೆಯೇ ಯಾವುದೇ ಬಾಹ್ಯ ಶಕ್ತಿ ತಮ್ಮ ವೆಬ್‌ಸೈಟ್ ವಿಷಯ ಬಳಸದಂತೆ ಇದೀಗ ಜಗತ್ತಿನ ದೊಡ್ಡ ದೊಡ್ಡ ವೆಬ್‌ಸೈಟ್‌ಗಳು ಮಹತ್ವದ ಕ್ರಮ ಕೈಗೊಂಡಿವೆ. ಈ ಮೂಲಕವಾಗಿ ಎಐ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲು ಮುಂದಾಗಿವೆ ಪ್ರಪಂಚದ ಪ್ರಸಿದ್ಧ ವೆಬ್‌ಸೈಟ್‌ಗಳು. ಇದು ಭವಿಷ್ಯದ ದೃಷ್ಟಿಯಿಂದ ಕೂಡ ಭಾರಿ ಗಮನ ಸೆಳೆದಿದ್ದು, ಮುಂದಿನ ದಿನಗಳಲ್ಲೂ ಹಲವು ಅಪಾಯಗಳಿಂದ ಕೂಡ ಎಐ ಕಾಪಾಡಲಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.

ಪಾರದರ್ಶಕ ವ್ಯವಸ್ಥೆ ರೂಪಿಸಲು ಕ್ರಮ
ಸದ್ಯಕ್ಕೆ ಜಗತ್ತಿನ ಅತ್ಯಂತ ಫೇಮಸ್ ವೆಬ್‌ಸೈಟ್ ಆಗಿರುವ ಸ್ಕೈ ನ್ಯೂಸ್, ದಿ ಅಸೋಸಿಯೇಟೆಡ್ ಪ್ರೆಸ್ ಮತ್ತು ಬಜ್‌ಫೀಡ್ ಸೇರಿ ಲಕ್ಷಾಂತರ ವೆಬ್‌ಸೈಟ್‌ಗಳು ಈಗ ಕೃತಕ ಬುದ್ಧಿಮತ್ತೆ (AI) ಬಾಟ್ ಬಳಕೆ ಮಾಡಲು ಹೊಸ ತೀರ್ಮಾನ ಕೈಗೊಂಡಿವೆ. ಈ ಮೂಲಕ ತಮ್ಮ ವಿಷಯವನ್ನು ಅನುಮತಿ ಇಲ್ಲದೆಯೇ ಯಾರು ಕೂಡ ಬಳಕೆ ಮಾಡಲು ಆಗದಂತೆ ಕ್ರಮ ಕೈಗೊಂಡಿವೆ.
ಅಂದಹಾಗೆ ಹಲವು ವರ್ಷಗಳಿಂದ ಪ್ರಮುಖ ಬರಹಗಾರರು, ಕಲಾವಿದರು, ಸಂಗೀತಗಾರರು ಮತ್ತು ನಟರು AI ಸಂಸ್ಥೆಗಳು ಅನುಮತಿ ಅಥವಾ ಪಾವತಿ ಇಲ್ಲದೆ ತಮ್ಮ ಕೆಲಸದ ಮೇಲೆ ತರಬೇತಿ ವ್ಯವಸ್ಥೆಗಳನ್ನ ಹೊಂದಿವೆ ಎಂದು ಆರೋಪಿಸಿದ್ದರು. ಇದೀಗ ಎಲ್ಲಾ ವ್ಯವಸ್ಥೆಯನ್ನೂ ಪಾರದರ್ಶಕ ಮಾಡಲು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಜಾಗತಿಕ ಮಟ್ಟದಲ್ಲಿ ಕೂಡ ಈ ನಿರ್ಧಾರ ಸಾಕಷ್ಟು ಗಮನ ಸೆಳೆಯುತ್ತಿದೆ.












Click it and Unblock the Notifications