Googleನ AIನಲ್ಲಿ ಹಲವು ಫೀಚರ್: ಇನ್ಮುಂದೆ ತಾಸುಗಟ್ಟಲೆ ಹುಡುಕಬೇಕಿಲ್ಲ!
Googleನ AI: ಎಐ ಈಗ ಜನಸಾಮಾನ್ಯರ ಬಳಿಗೂ ತಲುಪುವುದಕ್ಕೆ ಪ್ರಾರಂಭವಾಗಿದೆ. ಹೌದು ಎಐ ಎಂದರೇನು ಹಾಗೂ ಅದು ಹೇಗೆ ಬಳಸಿಕೊಳ್ಳಬಹುದು ಎನ್ನುವ ಬಗ್ಗೆ ಜನ ಸಾಮಾನ್ಯರಲ್ಲಿ ಕೆಲವೊಂದು ಗೊಂದಲಗಳು ಸೃಷ್ಟಿಯಾಗಿದ್ದವು. ಆದರೆ ಇದೀಗ ಗೂಗಲ್ ಎಐ ಬಳಕೆಯನ್ನು ಸರಳೀಕರಣ ಮಾಡಿದೆ. ಗೂಗಲ್ ತನ್ನ ಮುಖ್ಯ ಅಪ್ಲಿಕೇಶನ್‌ಗಳಲ್ಲಿ ಎಐ ಮಾದರಿಯನ್ನು ಪರಿಚಯಿಸಿದೆ. ಗೂಗಲ್‌ನಲ್ಲಿ ಎಐ ಶಾರ್ಟ್ ಕಟ್ ಫೀಚರ್ ಕೊಟ್ಟಿದೆ. ಇನ್ಮುಂದೆ ಆಂಡ್ರಾಯ್ಡ್ ಬಳಕೆದಾರರು ತಮಗೆ ಏನಾದರೂ ವಿಷಯಗಳನ್ನು ಹುಡುಕುವುದಿದ್ದರೆ. ಸರಳ ಹಾಗೂ ಸುಲಭಗೊಳಿಸುತ್ತಿದೆ. ಕೆಲವರಷ್ಟೇ ಈ ಫೀಚರ್ ಬಳಸುತ್ತಿದ್ದರು. ಇದೀಗ ದೈನಂದಿನ ಬಳಕೆಗೂ ಎಐ ಅನುಕೂಲವನ್ನುಂಟು ಮಾಡುತ್ತಿದೆ.
ಜನ ಇದೀಗ ಗೂಗಲ್‌ನಲ್ಲಿ ಹುಡುಕುವುದಕ್ಕಿಂತಲೂ ಎಐನಲ್ಲಿ ಹುಡುಕುವುದು ಹೆಚ್ಚಾಗುತ್ತಿದೆ. ಗೂಗಲ್‌ಗಿಂತಲೂ ಎಐ ನಿಖರವಾಗಿ ಹಾಗೂ ಸರಳವಾಗಿ ಎಲ್ಲಾ ಮಾಹಿತಿಯನ್ನೂ ಒಂದೇ ಜಾಗದಲ್ಲಿ ಕೊಡುತ್ತಿದೆ. ಇದರಿಂದ ಜನ ಎಐ ಬಳಕೆ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಜನರು ವೇಗವಾಗಿ ಹಾಗೂ ಸ್ಪಷ್ಟವಾಗಿ ಹುಡುಕಲು ಸಹಾಯ ಮಾಡುತ್ತಿದೆ. Google ಸಹ ಜನ ಸರ್ಚ್ ಮಾಡುವುದಕ್ಕೆ ಸುಲಭ ಆಯ್ಕೆಗಳನ್ನು ಕೊಡುತ್ತಿದೆ. ಇದಕ್ಕೂ ಮೊದಲು ಗೂಗಲ್‌ನಲ್ಲಿ ಏನಾದರೂ ಹುಡುಕಬೇಕಾದರೆ, ಹಲವು ಆರ್ಟಿಕಲ್ ಅಥವಾ ಲಿಂಕ್‌ಗಳು ಓಪನ್ ಆಗುತ್ತಿದ್ದವು. ಇದೀಗ ನಿಮಗೆ ಗೂಗಲ್‌ನ ಎಐನಿಂದಲೇ ಸಾರಾಂಶ ಅಂದರೆ ಒಂದೇ ಕಡೆ ಎಲ್ಲಾ ಮಾಹಿತಿಯೂ ಲಭ್ಯವಾಗಲಿದೆ.

AI ಮೋಡ್ ಶಾರ್ಟ್‌ಕಟ್‌ನೊಂದಿಗೆ ಹುಡುಕಾಟದ ಪ್ರಕ್ರಿಯೆಯು ಹೆಚ್ಚು ಸುಲಭವಾಗುತ್ತಿದೆ. ಈ ಶಾರ್ಟ್‌ಕಟ್‌ನ ಮೂಲಕ ಗೂಗಲ್‌ನ ಬಳಕೆದಾರರು ಎಐ ವೈಶಿಷ್ಟ್ಯಗಳನ್ನು ಬಳಸುತ್ತಿದ್ದಾರೆ. ಇದರಲ್ಲಿ ಒಂದು ನಿರ್ದಿಷ್ಟ ವಿಷಯದ ಬಗ್ಗೆ ಸಾರಾಂಶಗಳು, ಸಲಹೆಗಳು ಸೇರಿವೆ. ಅಲ್ಲದೇ ಕಠಿಣ ಪ್ರಶ್ನೆಗಳಿಗೆ ಉತ್ತರಗಳನ್ನು ಸಹ ನೀಡುವುದು ಸೇರಿದೆ. ಇವೆಲ್ಲವೂ Google ನ AI ತಂಡದ ಇತ್ತೀಚಿನ ಪ್ರಗತಿ ಎಂದು ಹೇಳಲಾಗಿದೆ.
Googleನ AI ಮಾದರಿ ಹೇಗಿದೆ: ಬಳಸುವುದು ಹೇಗೆ ?
ಜಗತ್ತಿನಲ್ಲಿ ಎಐ ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಬಳಕೆದಾರರು ಕಡಿಮೆ ಟೈಮ್‌ನಲ್ಲಿ ಅವರಿಗೆ ಬೇಕಾದ ಎಲ್ಲಾ ಮಾಹಿತಿಯನ್ನು ಒಂದೇ ಲಿಂಕ್‌ನಲ್ಲಿ ಪಡೆದುಕೊಳ್ಳಬಹುದು. ಜೆಮಿನಿಯಲ್ಲಿ ನೀವು ಹೋಗಿ ಹುಡುಕುವುದು ಅಥವಾ ಇನ್ಯಾವುದೋ ಎಐ ಮಾದರಿಗಿಂತಲೂ ಸುಲಭವಾಗಿದೆ ಎಂದೇ ಹೇಳಬಹುದು. ಸಾಮಾನ್ಯವಾಗಿ ಹುಡುಕುವ ಕೀವರ್ಡ್-ಆಧಾರಿತ ಹುಡುಕಾಟಕ್ಕಿಂತಲೂ ಇದು ಹೆಚ್ಚಿನ ಮಾಹಿತಿಯನ್ನು ನೀಡುತ್ತದೆ. ಡೀಪ್ ಸರ್ಚ್ ಹೆಚ್ಚು ಮುಖ್ಯಾಂಶಗಳ ಮಾಹಿತಿಯನ್ನು ನೀಡುತ್ತದೆ.
ಸಮಯದ ಉಳಿತಾಯ ಮತ್ತು ಸುಲಭ ಮಾಹಿತಿ: ಇನ್ನು ಎಐ ಬಂದ ಮೇಲೆ ಜನ ಗಂಟೆ ಗಟ್ಟಲೆ ಗೂಗಲ್‌ನಲ್ಲಿ ಹುಡುಕಾಡುವುದಕ್ಕೆ ಬ್ರೇಕ್ ಬಿದ್ದಂತೆ ಆಗಿದೆ. ಅಲ್ಲದೇ ಇದರಿಂದ ಸಮಯದ ಉಳಿತಾಯ, ನಿಖರ ಮಾಹಿತಿ ಹಾಗೂ ಸಂಪೂರ್ಣ ಮಾಹಿತಿ ಲಭ್ಯವಾಗುತ್ತಿದೆ ಎಂದೇ ಹೇಳಲಾಗುತ್ತಿದೆ. ಒಂದು ವಿಷಯಕ್ಕೆ ಸಂಬಂಧಿಸಿದಂತೆ ಮೂರ್ನಾಲ್ಕು ಕಡೆ ಹುಡುಕುವುದು ತಪ್ಪುತ್ತಿದೆ.












Click it and Unblock the Notifications