ನೀವು ಗೂಗಲ್ ಬಳಸುತ್ತಿದ್ದೀರಾ ಹಾಗಾದರೆ ಇಲ್ಲಿದೆ ಭರ್ಜರಿ ಎಐ ಗುಡ್‌ನ್ಯೂಸ್!
ಎಐ ತಂತ್ರಜ್ಞಾನವು ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು. ಇದೀಗ ಗೂಗಲ್ ಬಳಕೆದಾರರಿಗೆ ಮತ್ತೊಂದು ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ಗೂಗಲ್‌ಗೂ ಎಐ ತಂತ್ರಜ್ಞಾನ ಮೊದ ಮೊದಲು ಸವಾಲಾಗಿತ್ತು. ಇದೇ ಕಾರಣಕ್ಕೆ ದೈತ್ಯ ಗೂಗಲ್ ಕಂಪನಿಯಲ್ಲೂ ಸಾವಿರಾರು ಜನ ಉದ್ಯೋಗಗಳನ್ನು ಕಳೆದುಕೊಂಡು ದಿಕ್ಕುತೋಚದಂತೆ ಆಗಿದ್ದರು. ಇದೀಗ ಗೂಗಲ್ ಪುಟಿದೇಳುತ್ತಿದೆ. ಇದರ ಭಾಗವಾಗಿ ಜಗತ್ತಿನಲ್ಲಿ ಅದರಲ್ಲೂ ಎಐ ಜಗತ್ತಿನಲ್ಲಿ ಬದಲಾಗುತ್ತಿರುವ ಹಲವು ಹೊಸ ಅಂಶಗಳನ್ನು ಗೂಗಲ್ ಸಹ ಅಳವಡಿಸಿಕೊಳ್ಳುತ್ತಿದೆ. ಹೀಗಾಗಿ ಇದರ ಲಾಭ ಗೂಗಲ್ ಬಳಕೆದಾರರಿಗೂ ಸಿಗುತ್ತಿದೆ. ಇದೀಗ ಗೂಗಲ್ ಬಳಕೆದಾರರಿಗೆ ಒಳ್ಳೆಯ ಟೂಲ್ ಹಾಗೂ ಭರ್ಜರಿ ಗುಡ್‌ನ್ಯೂಸ್ ನೀಡಲಾಗಿದೆ. ಅದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಎಐ ತಂತ್ರಜ್ಞಾನ ಬಂದ ಮೇಲೆ ಗೂಗಲ್ ಸಹ ಸಾಕಷ್ಟು ಬದಲಾಗಿದೆ. ಇದೀಗ ಗೂಗಲ್ ಸಹ ಎಐನ ಆಧುನಿಕ ತಂತ್ರಾಂಶಗಳನ್ನು ಅಳವಡಿಸಿಕೊಳ್ಳುತ್ತಿದೆ ಮೊದಲೆಲ್ಲಾ ನೀವು ಯಾವುದಾರೂ ನ್ಯೂಸ್‌ಗಳನ್ನು ಅಳವಡಿಸಿಕೊಂಡರೆ ಸಾಮಾನ್ಯವಾಗಿ ಆ ಸುದ್ದಿಯ ಲಿಂಕ್‌ಗಳು ಓಪನ್ ಆಗುತ್ತಿದ್ದವು. ಆದರೆ ಇದೀಗ ಲಿಂಕ್‌ನ ಬದಲಾಗಿ ಆ ಸುದ್ದಿಗಳ ಸಾರಾಂಶ ಬರುತ್ತದೆ. ಹೀಗಾಗಿ ನೀವು ಆ ಸುದ್ದಿಗೆ ಹೋಗಿ ಓದಬೇಕು ಎಂದೇನು ಇಲ್ಲ. ಇದರಿಂದ ಸುದ್ದಿಯ ಸಾರಾಂಶ ಬೇಗ ಸಿಗುವುದು ಮಾತ್ರವಲ್ಲ. ನಿಮ್ಮ ಸಮಯವೂ ಉಳಿತಾಯವಾಗುತ್ತದೆ. ಹೆಚ್ಚಿನ ಮಾಹಿತಿಯ ಅವಶ್ಯಕತೆ ಏರ್ಪಟ್ಟಾಗ ನೀವು ಸುದ್ದಿಯ ಲಿಂಕ್‌ನ ಮೇಲೆ ಕ್ಲಿಕ್ ಮಾಡಿಕೊಳ್ಳಬಹುದು. ಇನ್ನು ಗೂಗಲ್ ಎಐ ತಂತ್ರಾಂಶವನ್ನು ಬಳಸಿಕೊಂಡು ಜನರಿಗೆ ಹೇಗೆಲ್ಲ ಹತ್ತಿರವಾಗುತ್ತಿದೆ ಎನ್ನುವುದನ್ನು ನೋಡೋಣ.

ಜನರ ಆನ್‌ಲೈನ್ ಹುಡುಕಾಟವನ್ನು ಗೂಗಲ್ ಇನ್ನಷ್ಟು ಸರಳೀಕರಣ ಮಾಡಿದೆ. ಹೌದು ಗೂಗಲ್ ಇದೀಗ ಯಾವುದಾದರೂ ಸರ್ಚ್‌ಗೂ ಎಐ ತಂತ್ರಜ್ಞಾನವನ್ನು ಬಳಸುತ್ತಿದ್ದು ಇನ್ಮುಂದೆ ನೀವು ಕೇಳುವ ಪ್ರಶ್ನೆಗಳಿಗೆ ಉತ್ತರ ಸಂಭಾಷಣೆಯ ರೂಪದಲ್ಲೂ ಸಿಗಲಿದೆ. ಉದಾ: ನೀವೇನಾದರೂ ಒಂದು ಪ್ರಶ್ನೆ ಕೇಳಿದರೆ ಟೆಕ್ಟ್‌ನಲ್ಲಿ ಅದರ ಉತ್ತರ ಬರುತ್ತಿತ್ತು. ಆದರೆ ಇನ್ಮುಂದೆ ವೈಯ್ಸ್‌ನಲ್ಲಿ ಉತ್ತರ ಬರಲಿದೆ. ಜನರ ಆನ್‌ಲೈನ್ ಹುಡುಕಾಟವನ್ನು ಗೂಗಲ್ ಸರಳೀಕರಣ ಮಾಡಿದೆ. ಗೂಗಲ್‌ನ ಎಐ ಟೂಲ್ ಜೆಮಿನಿ AI ಮಾದರಿಯಲ್ಲಿ ಪ್ರಶ್ನೆಗಳಿಗೆ ಉತ್ತರ ವಾಯ್ಸ್ ರೂಪದಲ್ಲಿ ಸಿಗಲಿದೆ.
ನಾವು ಹೊಸ ಬದಲಾವಣೆಯನ್ನು ಮಾಡಿಕೊಳ್ಳುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನೀವು ಇನ್ನಷ್ಟು ಕಲಿಯುವುದಕ್ಕೆ ಅಥವಾ ಹೊಸತನ್ನು ಹುಡುಕುವುದಕ್ಕೆ ಈ ತಂತ್ರಾಂಶವು ಅನುಕೂಲ ಮಾಡಿಕೊಡಲಿದೆ ಎಂದು ಹೇಳಲಾಗಿದೆ. ಈ ವಿಚಾರವಾಗಿ ಗೂಗಲ್ ಬ್ಲಾಗ್ ಪೋಸ್ಟ್ ಮಾಹಿತಿ ಹಂಚಿಕೊಂಡಿದೆ. ಭಾರತೀಯ ಹಾಗೂ ಗೂಗಲ್‌ನ ಸಿಇಒ ಸುಂದರ್ ಪಿಚೈ ಅವರು ಗೂಗಲ್ ಹುಡುಕಾಟದಲ್ಲಿ ಹೊಸ AI ಮೋಡ್ ತಂತ್ರಾಂಶವನ್ನು ಬಿಡುಗಡೆ ಮಾಡಿದ್ದರು. ಬಳಕೆದಾರರ ಸಂಖ್ಯೆಯಲ್ಲಿ ಹೆಚ್ಚಳ: ಇನ್ನು ಗೂಗಲ್ ತಂತ್ರಾಂಶವು ಎಐ ಬಳಕೆ ಮಾಡಲು ಪ್ರಾರಂಭಿಸಿದ ಮೇಲೆ ಎಐ ತಂತ್ರಜ್ಞಾನದ ಬಗ್ಗೆ ಹುಡುಕುವವರು ಹಾಗೂ ಎಐ ಬಳಕೆದಾರರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ ಎಂದು ಹೇಳಲಾಗುತ್ತಿದೆ.












Click it and Unblock the Notifications