ಹಿಟ್ ಅಂಡ್ ರನ್ ಪ್ರಕರಣ: 36 ಗಂಟೆಯಲ್ಲಿ ಆರೋಪಿ ಪತ್ತೆಹಚ್ಚಿದ AI: ಕಾರ್ಯಾಚರಣೆ ಹೇಗಿತ್ತು ಗೊತ್ತಾ?
ಇತ್ತೀಚೆಗೆ ಮಹಾರಾಷ್ಟ್ರದ ನಾಗ್ಪುರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದ ಬಳಿಕ ಆ ವ್ಯಕ್ತಿಗೆ ನಿಖರ ಮಾಹಿತಿಯ ಕೊರತೆ ಇತ್ತು. ನಾಗ್ಪುರದಲ್ಲಿ ತನ್ನ ಹೆಂಡತಿಗೆ ಡಿಕ್ಕಿ ಹೊಡೆದ ಟ್ರಕ್ ಮೇಲೆ ಕೆಂಪು ಗುರುತುಗಳಿದ್ದವು ಎಂಬುದು ಮಾತ್ರ. ಆದರೆ, ಡಿಕ್ಕಿ ಹೊಡೆದ ಟ್ರಕ್‌ನ ಗಾತ್ರ, ಬ್ರ್ಯಾಂಡ್ ಹಾಗೂ ನಂಬರ್ ಗುರುತಿಸಲು ಆ ವ್ಯಕ್ತಿಗೆ ಸಾಧ್ಯವಾಗಲಿಲ್ಲ. ಇಂತಹ ಕಷ್ಟದ ಪ್ರಕರಣವನ್ನು ಕೃತಕ ಬುದ್ಧಿಮತ್ತೆ ಅಥವಾ AI ಅನ್ನು ಬಳಸಿ ಕೇವಲ 36 ಗಂಟೆಯಲ್ಲಿ ಪೊಲೀಸರು ಬಗೆಹರಿಸಿದ್ದಾರೆ.
ಆಗಸ್ಟ್ 9 ರಂದು ರಕ್ಷಾ ಬಂಧನದಂದು, ಆ ವ್ಯಕ್ತಿ ಮತ್ತು ಅವನ ಹೆಂಡತಿಗೆ ನಾಗ್ಪುರದಲ್ಲಿ ವೇಗವಾಗಿ ಬಂದ ಟ್ರಕ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಯ ಆ ಮಹಿಳೆ ರಸ್ತೆಗೆ ಬಿದ್ದಳು. ಟ್ರಕ್ ಆಕೆಯ ಮೇಲೆ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿತ್ತು. ನಂತರ ಆ ವ್ಯಕ್ತಿ ತನ್ನ ಪತ್ನಿಯ ದೇಹವನ್ನು ತನ್ನ ಬೈಕ್‌ಗೆ ಕಟ್ಟಿಕೊಂಡು ತಮ್ಮ ಗ್ರಾಮಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದನು.ಈ ಘಟನೆಯ ಸಂಬಂಧಿಸಿದ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಇನ್ನೂ ಈ ಪ್ರಕರಣದ ಕುರಿತು ಆ ವ್ಯಕ್ತಿಯ ಬಳಿ ಬಹಳ ಕಡಿಮೆ ಮಾಹಿತಿ ಇತ್ತು ಹಿಟ್ ಅಂಡ್ ರನ್ ಮಾಡಿದ ಟ್ರಕ್ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಆ ವ್ಯಕ್ತಿಯ ಬಳಿ ಇರಲಿಲ್ಲ ಎಂದು ನಾಗ್ಪುರ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಹರ್ಷ ಪೊದ್ದಾರ್ ಎನ್‌ಡಿಟಿವಿಗೆ ತಿಳಿಸಿದ್ದಾರೆ. ಮಾಹಿತಿ ಕೊರತೆ ಇದ್ದರು ಹೇಗೆ ಆರೋಪಿಗಳನ್ನು ಪತ್ತೆಹಚ್ಚಲಾಯಿತು ಎಂದು ಪ್ರಶ್ನೆ ಮಾಡಿದಾಗ, ಸಿಸಿಟಿವಿ ಡೇಟಾವನ್ನು ಸಂಗ್ರಹಿಸಿ, ಕೃತಕ ಬುದ್ಧಿಮತ್ತೆಯ ಅಲ್ಲಾರಿದಮ್‌ಗಳ ಮೂಲಕ ಪತ್ತೆ ಹಚ್ಚಲಾಯಿತು ಎಂದು ತಿಳಿಸಿದ್ದಾರೆ.
ಈ ಪ್ರಕರಣ ತನಿಖೆಯಲ್ಲಿ ಪ್ರಮುಖವಾಗಿ ಮಾಡಿದ ಕೆಲಸ ಏನೆಂದರೆ, ಘಟನೆ ನಡೆದ 15 ರಿಂದ 20 ಕಿ.ಮೀ. ದೂರದಲ್ಲಿರುವ ಮೂರು ಪ್ರತ್ಯೇಕ ಟೋಲ್ ನಾಕಾಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ, ಎರಡು Al ಅಲ್ಲಾರಿದಮ್ ಗಳನ್ನು ಬಳಸಿಕೊಂಡು ವಿಶ್ಲೇಷಣೆ ಮಾಡಿದೆವು ಇವೆರಡೂ ಕಂಪ್ಯೂಟರ್ ವಿಷುಯಲ್ ಎಂಬ ತಂತ್ರಜ್ಞಾನವನ್ನು ಆಧರಿಸಿವೆ ಮೊದಲ ಅಲ್ಲಾರಿದಮ್ ಮಾಡಿದ್ದೇನೆಂದರೆ, ಕೆಂಪು ಗುರುತುಗಳನ್ನು ಹೊಂದಿರುವ ಟ್ರಕ್‌ಗಳನ್ನು ಹೊರತೆಗೆದು ಗುರುತಿಸಲು ಈ ಒಟ್ಟು ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಿತು.
ಎರಡನೆಯ ಅಲ್ಲಾರಿದಮ್, ಎಲ್ಲ ಟ್ರಕ್‌ಗಳ ಸರಾಸರಿ ವೇಗವನ್ನು ವಿಶ್ಲೇಷಿಸಿ, ಯಾವ ಟ್ರಕ್ ಇದರಲ್ಲಿ ಭಾಗಿಯಾಗಿರಬಹುದು ಎಂಬುದರ ಕುರಿತು ನಮಗೆ ಎಚ್ಚರಿಕೆ ನೀಡಿತು ಅದರ ಆಧಾರದ ಮೇಲೆ, ಒಂದು ಟ್ರಕ್ ಅನ್ನು ಗುರುತಿಸಲಾಯಿತು ನಿನ್ನೆ ನಾಗ್ಪುರ ಗ್ರಾಮೀಣ ಪೊಲೀಸರ ತಂಡವು ಆರೋಪಿಗಳನ್ನು ಬಂಧಿಸಿ, ನಾಗ್ಪುರದಿಂದ ಸುಮಾರು 700 ಕಿ ಮೀ ದೂರದಲ್ಲಿರುವ ಗ್ವಾಲಿಯರ್-ಕಾನ್ಸುರ್ ಹೆದ್ದಾರಿಯಲ್ಲಿ ಟ್ರಕ್ ಅನ್ನು ವಶಪಡಿಸಿಕೊಂಡಿದೆ ಮತ್ತು ನಾವು ಈಗ ಆರೋಪಿಗಳನ್ನು ಬಂಧಿಸಿದ್ದೇವೆ. Al ಬಳಸಿ 36 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಲಾಗಿದೆ ಎಂದು ಹರ್ಷ ಪೊದ್ದಾರ್ ಹೇಳಿದರು.












Click it and Unblock the Notifications