ಭಾರತದಲ್ಲಿ ಗೂಗಲ್ ಬಳಕೆದಾರರಿಗೆ ಮತ್ತೊಂದು ಬಂಪರ್, ಬಂದಿದೆ ಎಐ ಅಪ್ಡೇಟ್! Artificial Intelligence
ಗೂಗಲ್ ಜಗತ್ತಿನ ಮೂಲೆ ಮೂಲೆಗೂ ಹಬ್ಬಿದ್ದು, ಗೂಗಲ್ ಜೊತೆಯಲ್ಲೇ ಜನರು ಪ್ರತಿನಿತ್ಯದ ಜೀವನವನ್ನ ಕೂಡ ನಡೆಸುವಂತೆ ಆಗಿದೆ. ಯಾಕಂದ್ರೆ ಆಧುನಿಕ ಜಗತ್ತಿನಲ್ಲಿ ಗೂಗಲ್ ಇಲ್ಲದೆ ಯಾವ ಕೆಲಸವೂ ಸುಲಭ ಅಲ್ಲ ಅನ್ನೋದು ಜಗತ್ತಿಗೆ ಗೊತ್ತಾಗಿದೆ. ಇದೇ ಕಾರಣಕ್ಕೆ ತನ್ನ ಬಳಕೆದಾರರನ್ನು ಗಮನದಲ್ಲಿ ಇಟ್ಟುಕೊಂಡು ಗೂಗಲ್ ಸಂಸ್ಥೆ ಕೂಡ ಸಾಲು ಸಾಲು ಅಪ್‌ಡೇಟ್ ಕೊಡುತ್ತಿದೆ. ಅದರಲ್ಲೂ ಭಾರತದಲ್ಲಿ ನೂರು ಕೋಟಿ ಬಳಕೆದಾರರನ್ನು ಹೊಂದಿರುವ ಗೂಗಲ್ ಸಂಸ್ಥೆ, ಇದೀಗ ಎಐ ವಿಚಾರದಲ್ಲಿ ಬಂಪರ್ ಗಿಫ್ಟ್ ಕೊಟ್ಟಿದೆ.
ಹೌದು, ಭಾರತದ ಬಳಕೆದಾರರಿಗೂ ಸರ್ಚಿಂಗ್ ಮಾಡಲು ಗೂಗಲ್ ಇದೀಗ ಎಐ ಅಂದ್ರೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಅಪ್‌ಡೇಟ್ ಕೊಟ್ಟಿದೆ. ಗೂಗಲ್ ಮೂಲಕ ಸರ್ಚಿಂಗ್ ಮಾಡುವವರು ಹೀಗೆ ಗೂಗಲ್ ಎಐ ಸಹಾಯ ಪಡೆಯಬಹುದಾಗಿದೆ, AI ಮೋಡ್ ಮೂಲಕ ಸರ್ಚಿಂಗ್ ಮಾಡಬಹುದಾಗಿದೆ. ಈ ಅವಕಾಶ ಇಷ್ಟುದಿನ ಯುರೋಪ್ ದೇಶಗಳು ಮತ್ತು ಅಮೆರಿಕ ಸೇರಿದಂತೆ ಕೆಲವೇ ಕೆಲವು ದೇಶಗಳಲ್ಲಿ ಇತ್ತು. ಆದರೆ ಇದೀಗ ಎಐ ಮೂಲಕ ಹೊಚ್ಚ ಹೊಸ ಅಪ್‌ಡೇಟ್ ನೀಡಿದೆ ಗೂಗಲ್ ಸಂಸ್ಥೆ. ಈ ಮೂಲಕ ಈಗ ಗೂಗಲ್ ಮೂಲಕ ಅತ್ಯಂತ ಕಷ್ಟಕರ ಪ್ರಶ್ನೆಗಳನ್ನು ಕೂಡ ಕ್ಷಣ ಮಾತ್ರದಲ್ಲಿ ಕೇಳಿ, ಉತ್ತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಅಮೆರಿಕದಲ್ಲಿ ಮೊದಲಿಗೆ ಪರೀಕ್ಷೆ ನಡೆದಿತ್ತು!
ಅಂದಹಾಗೆ ಜೆಮಿನಿ 2.5 ಕಸ್ಟಮ್ ವರ್ಷನ್ ಬಳಸುವ ಮಲ್ಟಿಮೋಡಲ್ ಸರ್ಚಿಂಗ್ ಡಿವೈಸ್, ಬಳಕೆದಾರರಿಗೆ ಸಂಕೀರ್ಣ & ಕ್ಲಿಷ್ಟಕರವಾದ ಪ್ರಶ್ನೆ ಕೇಳಲು ಮತ್ತು ವೆಬ್ ಲಿಂಕ್ & ಫಾಲೋ-ಅಪ್ ಸಾಮರ್ಥ್ಯ ಜೊತೆಯಲ್ಲೇ ಸಮಗ್ರ AI-ರಚಿತ ಪ್ರತಿಕ್ರಿಯೆ ಸ್ವೀಕರಿಸಲು ಅನುವು ಮಾಡಿಕೊಡಲಿದೆ. ಈ ಮೂಲಕ ಕಷ್ಟಕರ ಪ್ರಶ್ನೆಗಳನ್ನ ಇನ್ನುಮುಂದೆ ಸುಲಭವಾಗಿ ಹಾಗೂ ವೇಗವಾಗಿ, ಗೂಗಲ್ ಮೂಲಕ ಹುಡುಕಲು ಅವಕಾಶ ಕಲ್ಪಿಸಿದಂತೆ ಆಗಲಿದೆ. ಅಮೆರಿಕದಲ್ಲಿ ಇದರ ಪ್ರಾಯೋಗಿಕ ಪರೀಕ್ಷೆ ನಡೆಸಿದ ನಂತರ ಭಾರತದಲ್ಲಿ ಇದನ್ನು ಗೂಗಲ್ ಸಂಸ್ಥೆ ಜಾರಿಗೆ ತಂದಿದೆ.












Click it and Unblock the Notifications