ಗೂಗಲ್ ಹೊಸ ಎಐ ಅಪ್‌ಡೇಟ್, ಹಾಡು ಹುಡುಕಾಟ ಇನ್ನಷ್ಟು ಸುಲಭ! Artificial Intelligence
ಗೂಗಲ್ ಸಂಸ್ಥೆಯು ಇಡೀ ಜಗತ್ತಿನ ಡಿಜಿಟಲ್ ತಂತ್ರಜ್ಞಾನವನ್ನು, ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತಿದೆ. ಡಿಜಿಟಲ್ ಲೋಕದಲ್ಲಿ ಗೂಗಲ್ ಸಂಸ್ಥೆ ನೀಡುವಷ್ಟು ಅಪ್‌ಡೇಟ್ ಬೇರೆ ಯಾವುದೇ ಸಂಸ್ಥೆ ಕೂಡ ನೀಡುವುದಿಲ್ಲ ಎನ್ನಬಹುದು. ಅದರಲ್ಲೂ ಜಗತ್ತಿನ ಅತಿದೊಡ್ಡ ಸರ್ಚ್ ಇಂಜಿನ್ ಎಂಬ ಹೆಗ್ಗಳಿಕೆ ಕೂಡ ಗೂಗಲ್ ಸಂಸ್ಥೆಗೆ ಇದೆ. ಹೀಗಿದ್ದಾಗ ಕೆಲವು ದಿನಗಳ ಹಿಂದಷ್ಟೇ ಎಐ ಬಗ್ಗೆ ಹೊಸ ಅಪ್‌ಡೇಟ್ ನೀಡಿ ಬಳಕೆದಾರರಿಗೆ ಗಿಫ್ಟ್ ಕೊಟ್ಟಿದ್ದ ಗೂಗಲ್ ಸಂಸ್ಥೆ, ಇದೀಗ ಹಾಡು ಕೇಳುವವರಿಗೂ ಹಬ್ಬದ ವಾತಾವರಣ ಸೃಷ್ಟಿಸಲು ಮುಂದಾಗಿದೆ.
ಅಂದಹಾಗೆ, ಆಂಡ್ರಾಯ್ಡ್ ಫೋನ್ ಬಳಕೆದಾರರು ಇನ್ನುಮುಂದೆ ಹಾಡುಗಳನ್ನ ಸರ್ಚ್ ಮಾಡೋದಕ್ಕೆ & ಹಾಡು ಕೇಳುವುದಕ್ಕೆ ಹೆಚ್ಚು ಕಷ್ಟಪಡುವ ಅಗತ್ಯತೆ ಇಲ್ಲ. ಯಾಕಂದ್ರೆ ಗೂಗಲ್ ತನ್ನ ಜೆಮಿನಿ ಅಪ್ಲಿಕೇಷನ್ ಅಪ್‌ಡೇಟ್ ಮಾಡಿದ್ದು, ಧ್ವನಿ ಆಧಾರಿತ ಅಂದ್ರೆ ವಾಯ್ಸ್ ಬೇಸ್ಡ್ ಸಾಂಗ್ ಸರ್ಚಿಂಗ್ ವೈಶಿಷ್ಟ್ಯ ಸೇರಿಸಿದೆ. ಹಾಗಾದ್ರೆ ಈ ಹೊಸ ಅಪ್‌ಡೇಟ್ ಮೂಲಕ ಬಳಕೆದಾರರಿಗೆ ಏನೆಲ್ಲಾ ಉಪಯೋಗ ಆಗಲಿದೆ? ಮುಂದೆ ಓದಿ.

ಗೂಗಲ್ ಸದಾ ಸಾಂಗ್ ಕೇಳುವವರಿಗೆ ಅಂದ್ರೆ ಹಾಡು ಕೇಳುವವರಿಗೆ ಹೊಸ ಹೊಸ ಅಪ್‌ಡೇಟ್ ನೀಡುತ್ತೆ. ಹೀಗಿದ್ದಾಗಲೇ ಹಾಡು ಕೇಳಲು ಇಷ್ಟಪಡುವವರು ಇನ್ನು ಮುಂದೆ ಟೆಕ್ಸ್ಟ್ ಅಂದ್ರೆ ಹಾಡಿನ ಹೆಸರು ಟೈಪ್ ಮಾಡಿ ಹುಡುಕುವ ಅಗತ್ಯತೆ ಇಲ್ಲ, ಬದಲಾಗಿ ವಾಯ್ಸ್ ಮೂಲಕ ಗೈಡ್ ಮಾಡಿದರೆ ಸಾಕು ಅವರಿಗೆಲ್ಲಾ ಇಷ್ಟವಿರುವ ಹಾಡು ಕೇಳಲು ಸಿದ್ಧವಿರುತ್ತದೆ. ಹಾಗೇ ಆಪಲ್ ಫೋನ್‌ಗಳಲ್ಲಿ ಇರುವ ಫೀಚರ್ ಅನ್ನೇ ಈ ಮೂಲಕ ನೆನಪು ಮಾಡುವಂತೆ ಇರುತ್ತದೆ ಹೊಸ ಅಪ್‌ಡೇಟ್ ಎನ್ನಲಾಗಿದೆ.
ಹಾಡು ಕೇಳುವವರೇ ಇಲ್ಲಿ ಗಮನಿಸಿ!
ಇನ್ನು ಹೊಸ ಫೀಚರ್ ಬಳಸಿ ಬಳಕೆದಾರರು ಹಾಡು ಸರ್ಚ್ ಮಾಡುವಾಗ, ತಮ್ಮ ಸುತ್ತಲೂ ಪ್ಲೇ ಆಗುತ್ತಿರುವ ಸಂಗೀತವನ್ನು ಗುರುತಿಸಲು ಅನುವು ಮಾಡಿಕೊಡುತ್ತೆ. ಇನ್ನು ಇದು ಗೂಗಲ್ ರಿಲೀಸ್ ಮಾಡುತ್ತಿರುವ ಹೊಸ ಜೆಮಿನಿ ಅಪ್ಲಿಕೇಷನ್ ಅಪ್‌ಡೇಟ್ ವರ್ಷನ್ ಆಗಿದೆ. ಈ ಹಿಂದೆ ಗೂಗಲ್‌ನ ಮುಖ್ಯ ಸರ್ಚಿಂಗ್ ವಿಭಾಗದಲ್ಲಿ ಮಾತ್ರ ಲಭ್ಯವಿದ್ದ ಆಯ್ಕೆಯನ್ನು ಇದೀಗ ಮತ್ತಷ್ಟು ಅಪ್‌ಡೇಟ್ ಮಾಡಿ ಜೆಮಿನಿ ಮೂಲಕ ಬಳಕೆದಾರರಿಗೆ ನೀಡಲು ಮುಂದಾಗಿದೆ ಟೆಕ್ ದೈತ್ಯ.
ಎಐ ವಾಯ್ಸ್ ತಂತ್ರಜ್ಞಾನ ಕೂಡ ಅಪ್‌ಡೇಟ್!
ಗೂಗಲ್ ಅಪ್ಲಿಕೇಷನ್‌ನಲ್ಲಿ ಕೆಲವು ದಿನಗಳ ಹಿಂದೆ ಎಐ ಮೂಡ್ ಎಂಬ ಹೊಸ ಆಯ್ಕೆಯನ್ನ ನೀಡಿದ್ದು, ಈ ಮೂಲಕ ಗೂಗಲ್ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿರುವ ಬಳಕೆದಾರರು ನೇರವಾಗಿ ಎಐ ಮೂಡ್ ಆಯ್ಕೆ ಮಾಡಿಕೊಂಡು ಅದರಿಂದ ಎಐ ವಾಯ್ಸ್ ತಂತ್ರಜ್ಞಾನ ಬಳಸಿಕೊಂಡು ಸರ್ಚಿಂಗ್ ಮಾಡಬಹುದು. ಇನ್ನು ಈ ಹಿನ್ನೆಲೆ ಹೊಸ ತಂತ್ರಜ್ಞಾನ ಮತ್ತಷ್ಟು ಕುತೂಹಲ ಕೆರಳಿಸಿತ್ತು. ಇದರ ಜೊತೆಗೆ ಹಾಡು ಇಷ್ಟಪಡುವವರಿಗೆ ಕೂಡ ಹೊಸ ಆಯ್ಕೆಯನ್ನ ನೀಡುತ್ತಿದೆ ಗೂಗಲ್ ಸಂಸ್ಥೆ. ಈ ಮೂಲಕ ಸಾಲು ಸಾಲು ಅಪ್‌ಡೇಟ್ ಈಗ ಜನರಿಗೆ ಸಿಗುವಂತೆ ಆಗಿದೆ.












Click it and Unblock the Notifications