AI ತಂತ್ರಜ್ಞಾನದ ಸ್ಪರ್ಶದಿಂದ ತಾಯ್ತನದ ಭಾಗ್ಯ: ದಂಪತಿಗೆ 18 ವರ್ಷಗಳ ಕನಸು ನನಸು
ಬೆಂಗಳೂರು, ಜುಲೈ 08: ಇಂದು ತಂತ್ರಜ್ಞಾನ ಯುಗ ಎನ್ನುವುದಕ್ಕಿಂತ ನೇರವಾಗಿ AI (ಕೃತಕ ಬುದ್ಧಿಮತ್ತೆ) ಯುಗವೆಂದರೆ ತಪ್ಪಾಗಲಾರದು. ಮನುಷ್ಯನೇ ಕಂಡು ಹಿಡಿದ ಈ ಕೃತಕ ಬುದ್ಧಿ ಮತ್ತೆ ಇಂದು ಮನುಷ್ಯನಿಗೆ ಅಪಾರ ವಿಧದಲ್ಲಿ ನೆರವಾಗುತ್ತಿದೆ. ಶಿಕ್ಷಣ, ವಾಣಿಜ್ಯ, ಸಾರಿಗೆ ಸಂಪರ್ಕ, ವೈದ್ಯಕೀಯ, ಬಾಹ್ಯಾಕಾಶ ಸಂಶೋಧನೆ, ಆಟೋ ಮೊಬೈಲ್ ಹೀಗೆ ಪ್ರತಿ ಕ್ಷೇತ್ರವನ್ನು ಆವರಿಸುತ್ತಿರುವ ಕೃತಕ ಬುದ್ಧಿಮತ್ತೆ (AI) ಇಂದು ಮಕ್ಕಳ ಭಾಗ್ಯ ಕರುಣಿಸಿದೆ. ಅಚ್ಚರಿ ಎನ್ನಿಸಿದರೂ ಈ ಮಾತು ಸತ್ಯ. ಮಗು ಆಗಲು ಬೇಕಾದ ವಿರ್ಯವನ್ನು ಪುರಷನಲ್ಲಿ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಎಐ ತಂತ್ರಜ್ಞಾನ ವೈದ್ಯಕೀಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ
ಕಂಡ ಕಂಡ ಆಸ್ಪತ್ರೆಗಳನ್ನು ಅಲೆದರು ತಾಯ್ತನದ ಭಾಗ ಸಿಕ್ಕಿರಲಿಲ್ಲ ಎಂದು ದಂಪತಿಗೆ ಮಕ್ಕಳು ಪಡೆಯುವ ಭಾಗ ಕನಸು ಕನಸಾಗಿಯೇ ಉಳಿದಿತ್ತು. 18 ವರ್ಷಗಳ ಫಲವತ್ತತೆ ಕೊರತೆಯಿಂದಾಗಿ ದಂಪತಿಗೆ ಮಕ್ಕಳು ಆಗಿರಲಿಲ್ಲ. ಅವರ ನೆರವಿಗೆ ಬಂದಿದ್ದೇ ಈ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ. ಪತಿಯಲ್ಲಿ ವಿರ್ಯ ಹೆಚ್ಚಿನ ಪ್ರಮಾಣದಲ್ಲಿ ಇರಲಿಲ್ಲ ಎನ್ನಲಾಗಿದೆ. ಈ ಕಾರಣದಿಂದ ಅವರು ಮಕ್ಕಳು ಆಗಿರಲಿಲ್ಲ. ಆಸ್ಪತ್ರೆ ಅಲೆದಾಡಿದ್ದರು. ಕೊನೆಗೆ ಎಐ ತಂತ್ರಜ್ಞಾನವು ಪತಿಯಲ್ಲಿನ ವಿರ್ಯ ಪತ್ತೆ ಮಾಡುವ ಮೂಲಕ ಆ ದಂಪತಿಗೆ ಮಕ್ಕಳ ಭಾಗ್ಯ ಕರುಣಿಸಿದೆ.

ಈ ದಂಪತಿ ಮಗು ಆಗದ್ದಕ್ಕೆ ಸುಮಾರು 18 ವರ್ಷಗಳ ಕಾಲ ವಿವಿಧ ಐವಿಎಫ್ ಕೇಂದ್ರಗಳಲ್ಲಿ ಪರಿಹಾರ ಸಿಗದಿದ್ದಕ್ಕೆ ಕೊಲಂಬಿಯಾ ವಿಶ್ವವಿದ್ಯಾಲಯ ಫಲವತ್ತತೆ ಕೇಂದ್ರಕ್ಕೆ ಭೇಟಿ ನೀಡಿದ್ದರು. ತಜ್ಞರೊಂದಿಗೆ ಸಮಾಲೋಚಿಸಿದ್ದರು. ತಜ್ಞರ ವೈದ್ಯರನ್ನು ಕಂಡಿದ್ದರು. ಆಗ ಪತಿಯು ವಿರ್ಯ ಕೊರತೆ, ಕಡಿಮೆ ವಿರ್ಯ ಸಮಸ್ಯೆಯಿಂದ ಬಳಲುತ್ತಿರುವುದು ಪತ್ತೆ ಆಯಿತು. ಇದರಿಂದ ಮಕ್ಕಳ ಪಡೆಯುವ ಕನಸು ಕನಸಾಗಿಯೇ ಉಳಿದಿತ್ತು.
ಸದ್ಯ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಕೇವಲ ಒಂದೇ ಒಂದು ಗಂಟೆಯಲ್ಲಿ ವಿರ್ಯ ಕೊರತೆ ಎದುರಿಸುತ್ತಿದ್ದ ಪತಿಯಲ್ಲಿನ ಮಕ್ಕಳು ಆಗಲು ಅಗತ್ಯವಾಗಿದ್ದ ಒಟ್ಟು 44 ವಿರ್ಯವನ್ನು ಪತ್ತೆ ಮಾಡಿದೆ. ಇದರಿಂದ ಆ ದಂಪತಿಗೆ ಮಕ್ಕಳು ಭಾಗ್ಯ ಲಭಿಸಿದೆ. ಇಷ್ಟು ವರ್ಷಗಳ ನಿರಂತರ ಪ್ರಯತ್ನದ ಬಳಿಕ ಎಐ ತಂತ್ರಜ್ಞಾನ ಪ್ರತಿಫಲವಾಗಿ ಮಕ್ಕಳ ಕಾಣುವ ಅವಕಾಶ ಸಿಕ್ಕಿದೆ. ದಂಪತಿಗಳು ತಂತ್ರಜ್ಞಾನ ಕುರಿತು ಹರ್ಷ ವ್ಯಕ್ತಪಡಿಸಿದ್ದಾರೆ.












Click it and Unblock the Notifications