Artificial Intelligence: ಮಾನಸಿಕ ಆರೋಗ್ಯ ಸಮಸ್ಯೆ, ಗೊಂದಲ: ಎಐ ಮೊರೆ ಹೋದ ಭಾರತೀಯರು!
Artificial Intelligence: ದಿನದಿಂದ ದಿನಕ್ಕೆ ಎಐ ಬಳಕೆ ಹೆಚ್ಚಾಗುತ್ತಿದೆ. ಇದೀಗ ದೇಶದಲ್ಲಿ ಎಐ ಬಳಕೆಯು ಜನರಿಗೆ ಅದರಲ್ಲೂ ಭಾರತೀಯರಿಗೆ ವರದಾನವಾಗಿ ಪರಿಣಮಿಸಿದೆ. ಭಾರತದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆ ಹಾಗೂ ಮಾನಸಿಕ ಖಿನ್ನತೆ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗೆ ಸಂಬಂಧಿಸಿದಂತೆ ಜನರು ವೈದ್ಯಕೀಯ ನೆರವು ಪಡೆದುಕೊಂಡಿದ್ದು ತೀರ ವಿರಳ. ಅಲ್ಲದೇ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಜನ ವೈದ್ಯರ ಬಳಿ ಹೋಗುವುದಕ್ಕೆ ಹಿಂಜರಿಕೆ ಹಾಗೂ ಆತಂಕಪಡುವವರು ಇದ್ದಾರೆ. ಆದರೆ ಎಐ ಬಳಕೆಯ ನಂತರ Mental Healthಗೆ ಸಂಬಂಧಿಸಿದಂತೆ ಜನರಿಗೆ ಸಾಕಷ್ಟು ಅನುಕೂಲ ಆಗಿದೆ. ಅದು ಹೇಗೆ ಹಾಗೂ Mental Healthಗೆ ಸಂಬಂಧಿಸಿದಂತೆ ಎಐ ಯಾವ ರೀತಿ ಸಹಕಾರಿಯಾಗಿದೆ ಎನ್ನುವ ವಿವರ ಇಲ್ಲಿದೆ.
ಭಾರತದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗೆ ಸಂಬಂಧಿಸಿದಂತೆ ವೃತಿಪರರ ಕೊರತೆ ಇದೆ (100,000+ ಜನರಿಗೆ 1 ಮನೋವೈದ್ಯರು, WHO ಶಿಫಾರಸ್ಸಿನ ಪ್ರಕಾರ ಇದು ಅತ್ಯಂತ ಕಡಿಮೆ ಪ್ರಮಾಣವಾಗಿದೆ). AI ಚಾಟ್‌ಬಾಟ್‌ಗಳು ಮತ್ತು ವರ್ಚುವಲ್ ಚಿಕಿತ್ಸೆಯ ಮೂಲಕ ಇದಕ್ಕೆ ಪರಿಹಾರ ಸಿಗಲಿದೆ. ಭಾರತದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಯನ್ನು ಸಹಜವಾಗಿ ಸ್ವೀಕರಿಸುವುದು ಬಹಳ ಕಡಿಮೆ. ಅಲ್ಲದೇ ಇದಕ್ಕೆಲ್ಲಾ ದುಡ್ಡು ಕೊಟ್ಟು ಚಿಕಿತ್ಸೆ ಪಡೆದುಕೊಳ್ಳಬೇಕೇ ಎಂದು ಜನ ವಿಚಾರ ಮಾಡುವುದು ಸಹ ಇದೆ.

ಆದರೆ ಇದೀಗ ಜನ ಎಐನಲ್ಲಿ Mental Healthಗೆ ಸಂಬಂಧಿಸಿದಂತೆ ಮಾನಸಿಕ ಖಿನ್ನತೆ ಹಾಗೂ ಮನಸ್ಸಿನಲ್ಲಿ ತುಂಬಾ ದಿನಗಳಿಂದ ಕಾಡುತ್ತಿರುವ ವಿಷಯಗಳು ಹಾಗೂ ನೋವನ್ನು ಎಐನೊಂದಿಗೆ ಹಂಚಿಕೊಂಡು ಅದಕ್ಕೆ ಬೇಕಾದ ಪರಿಹಾರಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ಭಾರತೀಯರು ಎಐನಲ್ಲಿ Mental Healthಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಹಾಗೂ ಅದರ ಪರಿಹಾರಕ್ಕೆ ಎಐ ಮೊರೆ ಹೋಗಿದ್ದಾರೆ. ಎಐನ ಮೂಲಕ 24/7 ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಸೌಲಭ್ಯಗಳು ಸಿಗುತ್ತಿವೆ. AI ಚಾಟ್ ಯಾವಾಗಬೇಕಾದರೂ ಬಳಕೆ ಮಾಡಬಹುದಾಗಿದೆ. ಯಾವುದೇ ಸಮಸ್ಯೆ ಯಾವಾಗ ಎದುರಾದರೂ ಎಐ ಚಾಟ್‌ನ ಮೂಲಕ ಪರಿಹಾರ ಪಡೆದುಕೊಳ್ಳುವುದಕ್ಕೆ ಸಾಧ್ಯವಿದೆ.
ಇನ್ನು ಎಐ ಗೌಪ್ಯತೆ ಕಾಪಾಡುತ್ತದೆ. ಮುಕ್ತವಾಗಿ ಅದರೊಂದಿಗೆ ಮಾತನಾಡಬಹುದು ಎನ್ನುವ ಕಾರಣಕ್ಕೂ ಜನ ಎಐ ಟೂಲ್‌ಗಳನ್ನು ಬಳಕೆ ಮಾಡುತ್ತಿರುವುದು ಇದೆ.
ಇನ್ನು Mental Healthಗೆ ಎಐ ಬಳಕೆಯಿಂದ ಪಾಸಿಟಿವ್ ವಿಷಯಗಳು ಇರುವಂತೆಯೇ ನೆಗೆಟಿವ್ ಪರಿಣಾಮಗಳೂ ಸಹ ಇವೆ. ಎಐ ಮನುಷ್ಯರಂತೆ ಸಹಾನುಭೂತಿಯಿಂದ ಮಾತನಾಡುವುದಿಲ್ಲ. ಮನೋವೈದ್ಯಕೀಯ ಆರೈಕೆಗೆ ಸಹಾನುಭೂತಿ, ಭಾವನಾತ್ಮಕ ಸಂಬಂಧ ಅಥವಾ ಭಾವನಾತ್ಮಕ ಸಲಹೆಗಳು ನಿಮಗೆ ಎಐನಲ್ಲಿ ಸಿಗುವುದಿಲ್ಲ. ಮಾನಸಿಕ ಆರೋಗ್ಯ ಸಮಸ್ಯೆ ಎನ್ನುವುದು ಅತ್ಯಂತ ಸೂಕ್ಷ್ಮ ವಿಷಯವಾಗಿದೆ.
ಅಲ್ಲದೇ ಎಐ ಕೆಲವೊಮ್ಮೆ ತಪ್ಪಾಗಿ ತಿಳಿದುಕೊಳ್ಳುವ ಅಥವಾ ತಪ್ಪಾದ ಮಾಹಿತಿಯನ್ನು ಹಂಚಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಅಲ್ಲದೇ ಎಐ ನಿಮ್ಮ ಮಾಹಿತಿಯನ್ನು ಸಂಗ್ರಹಿಸುವ ಸಾಧ್ಯತೆ ಇರುತ್ತದೆ. ಎಲ್ಲದರ ಹೊರತಾಗಿ ಎಐ ಬಳಕೆಯು ತಾತ್ಕಾಲಿಕ ಪರಿಹಾರ ಎಂದು ಹೇಳಲಾಗುತ್ತದೆ.












Click it and Unblock the Notifications