AI Job Cuts 2025: ಎಐ ತಂದ ಆಪತ್ತು: ಉದ್ಯೋಗಿಗಳಿಗೆ ಭಾರೀ ಸಂಕಷ್ಟ, ಲಕ್ಷ ಲಕ್ಷ ಉದ್ಯೋಗ ಲಾಸ್!
AI Job Cuts 2025: ವಿಶ್ವದಾದ್ಯಂತ ಎಐ (Artificial Intelligence) ತಂತ್ರಜ್ಞಾನವು ವೇಗವಾಗಿ ಬೆಳೆಯುತ್ತಿದೆ. ಎಐನಿಂದಾಗಿ ಉದ್ಯೋಗ ಕಡಿತವಾಗಲಿದೆ ಎನ್ನುವ ಮಾತು ಇದೀಗ ಸತ್ಯವಾಗಲು ಪ್ರಾರಂಭವಾಗಿದೆ. ಎಐನಿಂದಾಗಿ ಲಕ್ಷಾಂತರ ಜನ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಜಾಗತಿಕ ತಂತ್ರಜ್ಞಾನ ಅಪ್ಡೇಟ್ಸ್ ಆಗುತ್ತಿದ್ದಂತೆಯೇ AI ಉದ್ಯಮ ಕ್ಷೇತ್ರಕ್ಕೆ ಭಾರೀ ದೊಡ್ಡ ಪೆಟ್ಟು ಕೊಡಲು ಪ್ರಾರಂಭಿಸಿದೆ. ವಿಶ್ವದ ಪ್ರಮುಖ ಕಂಪನಿಗಳಲ್ಲಿ ಉದ್ಯೋಗ ಕಡಿತವಾಗುವುದಕ್ಕೆ ಪ್ರಾರಂಭವಾಗಿದೆ. ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಲಕ್ಷಾಂತರ ಜನ ಉದ್ಯೋಗ ಕಳೆದುಕೊಳ್ಳಲು ಪ್ರಾರಂಭಿಸಿದ್ದಾರೆ. ಎಐ ಉದ್ಯೋಗ ಕ್ಷೇತ್ರದ ಮೇಲೆ ಯಾವ ರೀತಿ ಪರಿಣಾಮ ಬೀರಲು ಪ್ರಾರಂಭವಾಗಿದೆ ಎನ್ನುವ ವಿವರ ಇಲ್ಲಿದೆ.
ಎಐ ಬಂದ ಮೇಲೆ ವಿಶ್ವದ ಹಲವು ಪ್ರಮುಖ ಸಂಸ್ಥೆಗಳಿಗೆ ಸಂಕಷ್ಟ ಎದುರಾಗಿದೆ. ವಿಶ್ವದ ಅತಿದೊಡ್ಡ ತಂತ್ರಜ್ಞಾನ ಕಂಪನಿಗಳು ವೆಚ್ಚ ಕಡಿತ ಮಾಡುವ ಕ್ರಮದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲು ಪ್ರಾರಂಭ ಮಾಡಿವೆ. ಇದು ಜಾಗತಿಕ ತಂತ್ರಜ್ಞಾನ ವಲಯವನ್ನು ಬೆಚ್ಚಿಬೀಳಿಸುವಂತಹ ದೊಡ್ಡ ಉದ್ಯೋಗ ಕಡಿತ ದೇಶದಲ್ಲಿ ಆಗುತ್ತಿದೆ. Layoffs.fyi ದತ್ತಾಂಶದ ಪ್ರಕಾರ, 218 ತಂತ್ರಜ್ಞಾನ ಸಂಸ್ಥೆಗಳು 2025ರಲ್ಲಿ ಅಂದಾಜು 112,732 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿವೆ. ಉಲ್ಲೇಖಿಸಲಾದ ಪ್ರಾಥಮಿಕ ಕಾರಣಗಳಲ್ಲಿ AI-ಚಾಲಿತ ರೂಪಾಂತರ, ನಿಧಾನಗತಿಯ ಆರ್ಥಿಕ ಬೆಳವಣಿಗೆ ಮತ್ತು ವೆಚ್ಚವನ್ನು ಕಡಿಮೆ ಮಾಡುವುದು ಸೇರಿದೆ.

Amazon /ಅಮೆಜಾನ್:
30,000 ಉದ್ಯೋಗ ಕಡಿತ: ಅಮೆಜಾನ್ ತನ್ನ ಇತಿಹಾಸದಲ್ಲಿ ಅತಿದೊಡ್ಡ ಮಟ್ಟದ ಕೆಲಸದಿಂದ ವಜಾ ಕ್ರಮಕ್ಕೆ ಮುಂದಾಗಿದೆ. ಅದರ ಕ್ಲೌಡ್, ಎಚ್‌ಆರ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ 14,000 ಕಾರ್ಪೊರೇಟ್ ಉದ್ಯೋಗಿಗಳೂ ಸೇರಿದಂತೆ 30,000 ಸಾವಿರಕ್ಕೂ ಹೆಚ್ಚು ಹುದ್ದೆಗಳಲ್ಲಿ ಕಡಿತವಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಸಮಯದಲ್ಲಿ ಅತಿಯಾದ ವಿಸ್ತರಣೆ ಮತ್ತು AI ಯಲ್ಲಿನ ಭಾರೀ ಹೂಡಿಕೆಗಳ ನಡುವೆ ಸರಿದೂಗಿಸುವ ಉದ್ದೇಶದಿಂದ ಈ ವಜಾ ಕ್ರಮಗಳನ್ನು ಕೈಗೊಂಡಿರುವುದಾಗಿ ಕಂಪನಿಯ ಸಿಇಒ ಆಂಡಿ ಜಾಸ್ಸಿ ಹೇಳಿದ್ದಾರೆ.
Intel / ಇಂಟೆಲ್: 24,000 ಉದ್ಯೋಗ ಕಡಿತ
ಇನ್ನು ಎಐನಿಂದ ಹೆಚ್ಚು ಉದ್ಯೋಗ ನಷ್ಟವಾಗಿರುವುದರಲ್ಲಿ Intel ಎರಡನೇ ಸ್ಥಾನದಲ್ಲಿದೆ. ಇಂಟೆಲ್ ಜಾಗತಿಕವಾಗಿ ಸುಮಾರು 24,000 ಉದ್ಯೋಗಿಗಳಿಂದ (ಒಟ್ಟು ಸಿಬ್ಬಂದಿಯ ಸರಿಸುಮಾರು 22%) ಕಡಿಮೆ ಮಾಡಲು ಮುಂದಾಗಿದೆ. ಈ ಉದ್ಯೋಗ ಕಡಿತವು ಯುಎಸ್, ಜರ್ಮನಿ, ಕೋಸ್ಟರಿಕಾ ಮತ್ತು ಪೋಲೆಂಡ್‌ನಲ್ಲಿನ ಸೌಲಭ್ಯಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ. ಅಲ್ಲದೇ ಭಾರತದ ಮೇಲೂ ಪರೋಕ್ಷ ಪರಿಣಾಮ ಬೀರುವ ಸಾಧ್ಯತೆ ಇದೆ.
TCS / ಟಿಸಿಎಸ್: ಇದುವರೆಗೆ ಅತ್ಯಂತ ಹೆಚ್ಚು ಉದ್ಯೋಗ ಕಡಿತ
ಭಾರತದ ಅತಿದೊಡ್ಡ ಐಟಿ ರಫ್ತುದಾರ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಸೆಪ್ಟೆಂಬರ್ 2025 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಸುಮಾರು 20,000 ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದು ಕಂಪನಿಯ ಇತಿಹಾಸದಲ್ಲೇ ದೊಡ್ಡ ಉದ್ಯೋಗ ಕಡಿತವಾಗಿದೆ. 2022 ರ ನಂತರ ಕಂಪನಿಯು ಈಗ ಮೊದಲ ಬಾರಿಗೆ 600,000 ಕ್ಕಿಂತ ಕಡಿಮೆ ಉದ್ಯೋಗಿಗಳು ಇಲ್ಲಿ ಕೆಲಸ ಮಾಡುತ್ತಿದ್ದಾರೆ.
Accenture / ಆಕ್ಸೆಂಚರ್ ಸಾವಿರಾರು ಉದ್ಯೋಗಿಗಳಿಗೆ ಸಂಕಷ್ಟ
AI ಸಾಮರ್ಥ್ಯಗಳು ಮತ್ತು ಕ್ಲೈಂಟ್ ಬೇಡಿಕೆ ಬದಲಾವಣೆಗಳಿಂದಾಗಿ Accenture ನಲ್ಲೂ ಜನ ಉದ್ಯೋಗ ಕಳೆದುಕೊಳ್ಳಲು ಪ್ರಾರಂಭಿಸಿದ್ದಾರೆ. ಆಕ್ಸೆಂಚರ್ ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸಿದೆ. ಅದರ ಒಟ್ಟು ಸಿಬ್ಬಂದಿಗಳ ಸಂಖ್ಯೆ 791,000 ರಿಂದ 779,000 ಕ್ಕೆ ಕಂಡಿದೆ. ಅನೇಕ ಉದ್ಯೋಗಿಗಳು AI ಕೌಶಲ್ಯವನ್ನು ಒಳಗೊಳ್ಳದೆ ಇರುವುದು ಅಥವಾ ಆ ಕೌಶಲ್ಯ ಇಲ್ಲದೆ ಇರುವುದು ಸಹ ಇದಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.
Microsoft / ಮೈಕ್ರೋಸಾಫ್ಟ್: 9,000 ಉದ್ಯೋಗಿಗಳ ವಜಾ
ಇನ್ನು ವಿಶ್ವದ ಪ್ರಮುಖ ಹಾಗೂ ದೊಡ್ಡ ಸಂಸ್ಥೆಗಳಲ್ಲಿ ಒಂದಾಗಿರುವ ಮೈಕ್ರೋಸಾಫ್ಟ್ 2025ರಲ್ಲಿ ಸುಮಾರು 9,000 ಉದ್ಯೋಗಗಳನ್ನು ಕಡಿತಗೊಳಿಸಿದೆ. ಮುಖ್ಯವಾಗಿ ಸಾಫ್ಟ್‌ವೇರ್ ಎಂಜಿನಿಯರಿಂಗ್ ಮತ್ತು ಉತ್ಪನ್ನ ನಿರ್ವಹಣೆಯಲ್ಲಿ, ವೆಚ್ಚ ಆಪ್ಟಿಮೈಸೇಶನ್ ಮತ್ತು AI ಹೂಡಿಕೆಯನ್ನು ಉಲ್ಲೇಖವನ್ನು ಮಾಡಲಾಗಿದೆ.
Salesforce / ಸೇಲ್ಸ್‌ಫೋರ್ಸ್:
4,000 ಗ್ರಾಹಕ ಸಹಾಯಕ ಉದ್ಯೋಗ ಕಡಿತ: ಇನ್ನು AI ಬಳಕೆಯ ಮೇಲೆ ಅವಲಂಬಿತವಾಗಿರುವ ಈ ಕಂಪನಿಯು ಈಗ ಎಲ್ಲಾ ಗ್ರಾಹಕರೊಂದಿಗೆ ವ್ಯಹರಿಸುವ ಅಥವಾ ಸಂವಹನ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅರ್ಧದಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿದೆ. ಇಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು 9,000 ರಿಂದ 5,000 ಕ್ಕೆ ಇಳಿಸಿದೆ. ಸೇವಾ ಗುಣಮಟ್ಟವನ್ನು ರಾಜಿ ಮಾಡಿಕೊಳ್ಳದೆ AI ಹೆಚ್ಚಿನ ದಕ್ಷತೆಯನ್ನು ಬಳಸಿಕೊಳ್ಳುತ್ತಿರುವುದಾಗಿ ಕಂಪನಿಯ ಸಿಇಒ ಮಾರ್ಕ್ ಬೆನಿಯೋಫ್ ಹೇಳಿದ್ದಾರೆ.
Cisco/ ಸಿಸ್ಕೋ: 4,250 ಉದ್ಯೋಗ ಕಡಿತ
AI, ಸೈಬರ್ ಭದ್ರತೆ ಮತ್ತು ಕ್ಲೌಡ್ ನೆಟ್‌ವರ್ಕಿಂಗ್‌ನಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿಕೊಳ್ಳುವ ನಿಟ್ಟಿನಲ್ಲಿ ಸಿಸ್ಕೋ 5% ಕಾರ್ಯಪಡೆ ಕಡಿತ ಅಥವಾ 4,250 ಉದ್ಯೋಗಗಳನ್ನು ಕೈಬಿಡುವುದಾಗಿ ಹೇಳಿದೆ.
ಗೂಗಲ್ ಮತ್ತು ಮೆಟಾ: ಭಾರೀ ವಜಾ ಪ್ರಕ್ರಿಯೆ
ಎಐ ನಿಂದ ಮೊದಲು ಪೆಟ್ಟು ತಿಂದ ಅಥವಾ ಭಾರೀ ಸಂಕಷ್ಟಕ್ಕೆ ಎದುರಾದ ದೈತ್ಯ ಸಂಸ್ಥೆಗಳಲ್ಲಿ ಗೂಗಲ್ ಪ್ರಮುಖವಾಗಿದೆ. ಗೂಗಲ್ 2025 ರಲ್ಲಿ ಹಲವು ಪ್ರಮುಖ ಉದ್ಯೋಗಿಗಳನ್ನು ವಜಾ ಮಾಡಿದೆ. ಮೆಟಾ ಅಕ್ಟೋಬರ್ 2025 ರಲ್ಲಿ ತನ್ನ AI ವಿಭಾಗದಿಂದ 600 ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದು ಈ ವರ್ಷ 5% ಸಿಬ್ಬಂದಿಯನ್ನು ಕಡಿತಗೊಳಿಸುವ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರ ಯೋಜನೆಯ ಭಾಗವಾಗಿಯೇ ಇದೆ.
ಒರಾಕಲ್, ಯುಪಿಎಸ್ ಮತ್ತು ಫೋರ್ಡ್ ಮೋಟಾರ್:
ಇನ್ನು ಒರಾಕಲ್ ಸಿಯಾಟಲ್, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಸಾಂಟಾ ಕ್ಲಾರಾ ಸೇರಿದಂತೆ ತನ್ನ ಯುಎಸ್ ಕಚೇರಿಗಳಲ್ಲಿ ನೂರಾರು ಜನರನ್ನು ವಜಾಗೊಳಿಸಿದೆ. ವರ್ಷದ ಅತಿದೊಡ್ಡ ವಜಾಗಳಲ್ಲಿ ಯುನೈಟೆಡ್ ಪಾರ್ಸೆಲ್ ಸರ್ವಿಸ್ (ಯುಪಿಎಸ್) ಸಂಸ್ಥೆ ಮುಂದಿದೆ. ಡೊನಾಲ್ಡ್ ಟ್ರಂಪ್ ಅವರ ತೆರಿಗೆ ನೀತಿ ಮತ್ತು ಕುಸಿಯುತ್ತಿರುವ ಅಮೆಜಾನ್ ವಿತರಣಾ ವೇದಿಕೆ ಇದರ ಮೇಲೆ ಪ್ರಭಾವ ಬೀರಿದೆ ಎಂದು ಹೇಳಲಾಗಿದೆ. 48,000 ಉದ್ಯೋಗ ಕಡಿತಗಳನ್ನು ಘೋಷಿಸಲಾಗಿದೆ. ಕಂಪನಿಯು 93 ಸೌಲಭ್ಯಗಳನ್ನು ಮುಕ್ತಾಯ ಮಾಡಿದೆ.
ಫೋರ್ಡ್ & PwC:
13,000 ಉದ್ಯೋಗ ಕಡಿತ ಕಂಪನಿಯು 2025 ರಲ್ಲಿ 8,000 ರಿಂದ 13,000 ಉದ್ಯೋಗಗಳನ್ನು ಕಡಿತಗೊಳಿಸುತ್ತಿದೆ. ಎಲೆಕ್ಟ್ರಿಕ್ ವಾಹನಗಳ (EVs)ಲ್ಲಿ ಮಹತ್ವದ ಬದಲಾವಣೆಯಿಂದಾಗಿ ಈ ಉದ್ಯೋಗ ವಜಾ ನಡೆದಿದೆ. ತಂತ್ರಜ್ಞಾನದಲ್ಲಿ ಎಐ ಬಳಕೆ ಇದಕ್ಕೆ ಪ್ರಮುಖ ಕಾರಣವಾಗಿದೆ. ಇನ್ನು PwC ಕಡಿಮೆ ಉದ್ಯೋಗ ವಹಿವಾಟು ಹಾಗೂ ಕೆಲಸ ನಿರ್ವಹಣೆಯನ್ನು ಉಲ್ಲೇಖಿಸಿದೆ. PwC ಜಾಗತಿಕವಾಗಿ ಆಡಿಟ್ ಮತ್ತು ತೆರಿಗೆ ತಂಡಗಳಲ್ಲಿ 5,600 ಜನ ಉದ್ಯೋಗಿಗಳನ್ನು ವಜಾ ಮಾಡಿದೆ.
ಪ್ಯಾರಾಮೌಂಟ್: 2,000 ಉದ್ಯೋಗ ಕಡಿತ
ಇನ್ನು ಅಂತಿಮವಾಗಿ ಪ್ಯಾರಾಮೌಂಟ್ ಗ್ಲೋಬಲ್ ಸುಮಾರು 2,000 ಉದ್ಯೋಗಿಗಳನ್ನು ವಜಾ ಮಾಡಿದೆ. ಜಾಹೀರಾತು ಆದಾಯ ಕುಸಿತ ಹಾಗೂ ಎಐ ಪ್ರಭಾವದಿಂದಾಗಿ ಉದ್ಯೋಗಿಗಳ ವಜಾ ಕ್ರಮ ಅನುಸರಿಸಿರುವುದಾಗಿ ಸಂಸ್ಥೆಯ ಸಿಇಒ ಬಾಬ್ ಬಕೀಶ್ ಹೇಳಿದ್ದಾರೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications