AI Mission: ಭಾರತದ ವಿವಿಧ ರಾಜ್ಯಗಳಲ್ಲಿ ಸ್ಥಳೀಯ ಮಟ್ಟದಲ್ಲಿ 'ಎಐ' ಅನುಷ್ಠಾನ ಆರಂಭ

Artificial Intelligence (AI): ವಿದೇಶಗಳಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಹಾಗೂ ಭಾರತದಲ್ಲಿ ಎಲ್ಲ ವಲಯಗಳಲ್ಲೂ ಕಾಲಿಟ್ಟ ಕೃತಕ ಬುದ್ಧಿಮತ್ತೆ ಕೇವಲ ರಾಷ್ಟ್ರಮಟ್ಟದಲ್ಲಿ ಮಾತ್ರ ಉಳಿದಿಲ್ಲ. ಎಐ ತಂತ್ರಜ್ಞಾನ ರಾಜ್ಯವಾರು ಸಹ ಎಲ್ಲ ರಂಗಗಳಲ್ಲಿ ಅಸ್ತಿತ್ವಕ್ಕೆ ಬರಲಿದೆ. ಎಐ ತಂತ್ರಜ್ಞಾ ಅಳವಡಿಕೆ ಕ್ರಮವನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ತೇಜಿಸಲಾಗುತ್ತದೆ. ಇದರಿಂದ ಸಾರ್ವಜನಿಕ ಸೇವೆಗಳನ್ನು ಸುಧಾರಣೆಯಾಗಲಿದೆ. ಆಡಳಿತ, ಯೋಜನೆಗಳ ಕಾರ್ಯವಿಧಾನ ಹೆಚ್ಚಿಸಲು ಎಐ ತಂತ್ರಜ್ಞಾ ಹೆಚ್ಚು ಸಹಕಾರಿಯಾಗಿದೆ.

ಭಾರತದಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ವಿವಿಧ ರಾಜ್ಯಗಳು ತಮ್ಮದೇ ಆದ 'ಮಿನಿ AI ಮಿಷನ್‌ಗಳನ್ನು' ಪ್ರಾರಂಭಿಸುತ್ತಿವೆ. ರಾಜಸ್ಥಾನ ಈ ತಿಂಗಳ ಆರಂಭದಲ್ಲಿ ತನ್ನ ಕರಡು AI ನೀತಿಯನ್ನು ಲೋಕಾರ್ಪಣೆಗೊಳಿಸಿತು. AI ಅಳವಡಿಕೆ ಜೊತೆಗೆ ಅದರ ವಿಶೇಷತೆಗಳಿಂದ ಕಾರ್ಯವಿಧಾನಗಳಿಗೆ ಪ್ರೋತ್ಸಾಹ, ವೇಗ, ಡೇಟಾ ಮತ್ತು ಕಂಪ್ಯೂಟರಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಸ್ಥಾಪಿಸಲು ನಿಬಂಧನೆಗಳನ್ನು ರಾಜ್ಯ ಸರ್ಕಾರ ಹೊರಡಿಸಿದೆ.

AI Adoption Expands Across Indian States From Governance to Agriculture and Education

ಇನ್ನೂ ಮಹಾರಾಷ್ಟ್ರ ರಾಜ್ಯದಲ್ಲಿ ಕೃಷಿ ವಲಯಕ್ಕಾಗಿ ಮಹಾಅಗ್ರಿ-AI ನೀತಿಯನ್ನು ಜಾರಿಗೆ ತರಲಾಗಿದೆ. ಈ ಮೂಲಕ ರಾಜ್ಯದಲ್ಲಿ ಕೃಷಿ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನ ತನ್ನ ಛಾಪು ಮೂಡಿಸಲಿದೆ. ದಕ್ಷಿಣ ಭಾಗದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿರುವ ಒಡಿಶಾ ರಾಜ್ಯದಲ್ಲಿ ಮೇ ತಿಂಗಳಲ್ಲಿ ತನ್ನದೇ ಆದ AI ಮಿಷನ್ ಶುರು ಮಾಡಿದೆ.

ಉತ್ತರ ಭಾರತದ ಪ್ರಮುಖ ರಾಜ್ಯದವಾದ ಹರಿಯಾಣದಲ್ಲಿ AI ಅಭಿವೃದ್ಧಿ ಯೋಜನೆಗೆ ಅಲ್ಲಿನ ರಾಜ್ಯ ಸರ್ಕಾರ 474 ಕೋಟಿ ರೂಪಾಯಿಗಳನ್ನು ಒಪ್ಪಿ ಅನುಮೋದನೆ ನೀಡಿದೆ. ಇತ್ತ ತೆಲಂಗಾಣ ರಾಜ್ಯ ಸರ್ಕಾರ ಎಐ ಅಳವಡಿಕೆಗೆ ಮುಂದಾಗಿದೆ. ಇದರ ಪರಿಣಾಮವಾಗಿ 2020 ರಲ್ಲಿ AI ಮಿಷನ್ ಪರಿಚಯಿಸಿದೆ. ಕಳೆದ ವರ್ಷ ಸಬ್ಸಿಡಿ ಕಂಪ್ಯೂಟ್ ಹಾಗೂ ಹೈದರಾಬಾದ್ ಹೊರ ವಲಯದಲ್ಲಿರುವ 200 ಎಕರೆಯಲ್ಲಿ "AI ಸಿಟಿ" ಸೇರಿದಂತೆ ತಂತ್ರಜ್ಞಾನ ಅಳವಡಿಕೆ ಕಾರ್ಯವಿಧಾನಗಳನ್ನು ಜಾರಿಗೆ ತರುತ್ತಿದೆ.

ದೇಶಾದ್ಯಂತ ಆಡಳಿತ ಯಂತ್ರ ಸುಧಾರಣೆ, ಪಾರದರ್ಶಕತೆ, ಬಲವರ್ಧನೆಗೆ AI ಟೆಕ್ ನಿಯೋಜಿಸಲಾಗುತ್ತಿದೆ. ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಮೊದಲಿಗೆ ಎಐ ತಂತ್ರಜ್ಞಾನ ಜಾರಿಗೆ ತರಲು ಸರ್ಕಾರಗಳು ಮುಂದಾಗಿವೆ. ಈ ಕ್ಷೇತ್ರಗಳು ಹೆಚ್ಚಿನ ಪ್ರಭಾವ ಬೀರುತ್ತವೆ. ಜನರಿಗೆ ಹತ್ತಿರವಾದ ಕ್ಷೇತ್ರಗಳಾಗಿವೆ. ಈಗಾಗಲೇ ಟೆಕ್ ಕ್ಷೇತ್ರದಲ್ಲಿ ಕಾಲಿಟ್ಟ ಎಐ ಸಾಕಷ್ಟು ಉದ್ಯೋಗಗಳನ್ನು ಕಸಿದುಕೊಂಡಿದ್ದು, ಭವಿಷ್ಯದಲ್ಲಿ ಇದರ ಅಳವಡಿಕೆಯಿಂದ ಏನೆಲ್ಲ ಆಗಬಹುದೆಂದ ಆತಂಕ ಸಹ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+