'ಅವರು ಜಸ್ಪ್ರೀತ್ ಬುಮ್ರಾ ಅಲ್ಲ, ಮಿಚೆಲ್‌ ಸ್ಟಾರ್ಕ್‌": ವೈಭವ್ ಸೂರ್ಯವಂಶಿಯ ಮಾಜಿ ಕ್ರಿಕೆಟಿಗ ಸವಾಲು

RR Vs DC IPL 2026: ಜೈಪುರದಲ್ಲಿ ಶುಕ್ರವಾರ (ಮೇ 1) ನಡೆಯಲಿರುವ ಐಪಿಎಲ್‌ 2026ರ 43ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಇದಕ್ಕೂ ಮುನ್ನ ಆರ್‌ಆರ್‌ನ ಉದಯೋನ್ಮುಖ ಆಟಗಾರ ವೈಭವ್ ಸೂರ್ಯವಂಶಿ ಮತ್ತು ಡಿಸಿ ಮಿಚೆಲ್ ಸ್ಟಾರ್ಕ್ ನಡುವಿನ ಜಿದ್ದಾಜಿದ್ದಿನ ಬಗ್ಗೆ ವೆಸ್ಟ್ ಇಂಡೀಸ್‌ ಮಾಜಿ ವೇಗಿ ಇಯಾನ್ ಬಿಷಪ್ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.

ಈಗಾಗಲೇ 15 ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್ 2026ರಲ್ಲಿ ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ಜೋಶ್ ಹ್ಯಾಜಲ್‌ವುಡ್‌, ಭುನವೇಶ್ವರ್ ಕುಮಾರ್ ಮತ್ತು ಪ್ಯಾಟ್ ಕಮಿನ್ಸ್ ಅಂತಹ ಘಟಾನುಘಟಿ ಬೌಲರ್‌ಗಳನ್ನು ಲೀಲಾಜಾಲವಾಗಿ ಎದುರಿಸಿ ಕ್ರಿಕೆಟ್ ದಿಗ್ಗಜರನ್ನು ಬೆರಗುಗೊಳಿಸಿದ್ದಾರೆ. ಈವರೆಗೆ 400 ರನ್‌ಗಳನ್ನು ಸಿಡಿಸಿರುವ ಅವರು 238.10 ರ ಅದ್ಭುತ ಸ್ಟ್ರೈಕ್ ರೇಟ್ ಹೊಂದಿದ್ದಾರೆ.

RR vs DC IPL 2026 Former West Indies pacer Ian Bishop on Vaibhav Sooryavanshi vs Starc Clash

ಸ್ಟಾರ್ ಬೌಲರ್‌ಗಳ ವಿರುದ್ಧ ವೈಭವ್ ಸವಾರಿ

ವೈಭವ್‌ ಸೂರ್ಯವಂಶಿಯ ಅವರು ಯಾವುದೇ ಭಯವಿಲ್ಲದೆ ಸ್ಟಾರ್ ಬೌಲರ್‌ಗಳನ್ನು ಲೀಲಾಜಾಲವಾಗಿ ಎದುರಿಸಿ ಸಿಕ್ಸರ್‌ಗಳ ಸುರಿಮಳೆ ಸುರಿಸಿರುವ ಉದಾಹರಣೆಗಳಿವೆ. ಇದೀಗ ಅವರು ಇದಂದಿನ ಪಂದ್ಯದಲ್ಲಿ ಮಿಚೆಲ್ ಸ್ಟಾರ್ಕ್ ಎದುರು ಕೂಡ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಬಲ್ಲರಾ ಎಂಬ ಪ್ರಶ್ನೆಗಳು ಕೇಳವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬಿಷಪ್, "ಖಂಡಿತ ಇಲ್ಲ, ಮಿಚೆಲ್ ಸ್ಟಾರ್ಕ್‌ಗೆ ನೀವು ಗೌರವ ನೀಡಲೇಬೇಕು. ಅವರು ಈ ಪಂದ್ಯಕ್ಕೆ ಹೆಚ್ಚಿನ ಸಿದ್ಧತೆಯೊಂದಿಗೆ ಬರುತ್ತಾರೆ. ಅವರೇನು ಜಸ್ಪ್ರೀತ್ ಬುಮ್ರಾ ಅಲ್ಲ," ಎಂದು ಹೇಳಿದ್ದಾರೆ.

ಹೊಸ ತಂತ್ರದೊಂದಿಗೆ ಕಣಕ್ಕಳಿಯಲಿದ್ದಾರೆ ಸ್ಟಾರ್ಕ್‌

ಈ ಬಾರಿ ಬುಮ್ರಾ ಅವರ ಫಾರ್ಮ್ ಅಷ್ಟೊಂದು ಚೆನ್ನಾಗಿಲ್ಲದಿರುವುದು ಮತ್ತು ವೈಭವ್ ಸೂರ್ಯವಂಶಿ ಅವರ ಎದುರು ಬುಮ್ರಾ ಮೊದಲ ಎಸೆತದಲ್ಲೇ ಸಿಕ್ಸರ್ ಬಿಟ್ಟುಕೊಟ್ಟಿದ್ದನ್ನು ಕೂಡ ಬಿಷಪ್ ಇಲ್ಲಿ ಉಲ್ಲೇಖ ಮಾಡಿದ್ದಾರೆ. "ಸ್ಟಾರ್ಕ್‌ನಂತಹ ಅನುಭವಿ ಎಡಗೈ ವೇಗಿ ಸೂರ್ಯವಂಶಿಯಂತಹ ಯುವ ಬ್ಯಾಟರ್ ವಿರುದ್ಧ ಹೊಸ ತಂತ್ರದೊಂದಿಗೆ ಕಣಕ್ಕಿಳಿಯಲಿದ್ದಾರೆ," ಎಂದು ಅವರು ಹೇಳಿದ್ದಾರೆ.

ವೈಭವ್ ಬ್ಯಾಟಿಂಗ್‌ ಶೈಲಿಗೆ ಮೆಚ್ಚುಗೆ

"ವೈಭವ್ ಸೂರ್ಯವಂಶಿಯ ಬ್ಯಾಟ್ ಸ್ವಿಂಗ್ ಬೇಸ್‌ಬಾಲ್ ಆಟಗಾರರಂತೆ ವಿಶಿಷ್ಟವಾಗಿದೆ. ಇದು ಬೌಲರ್‌ಗಳಿಗೆ ಅವರ ವಿಕೆಟ್ ಪಡೆಯಲು ಎ, ಬಿ, ಸಿ ಪ್ಲಾನ್‌ಗಳನ್ನು ಮೀರಿ ಯೋಚಿಸುವಂತೆ ಮಾಡಿದೆ. ಅವರ ಮಾನಸಿಕ ಸ್ಥಿರತೆ ಮತ್ತು ತಾಂತ್ರಿಕ ಕೌಶಲ್ಯ ವಿಶ್ವದ ಅತ್ಯುತ್ತಮ ಬೌಲರ್‌ಗಳನ್ನು ಎದುರಿಸಲು ಸಮರ್ಥವಾಗಿದೆ," ಅಂತಲೂ ಬಿಷಪ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಭುಜ ಮತ್ತು ಮೊಣಕೈ ಗಾಯದಿಂದ ಚೇತರಿಸಿಕೊಂಡು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿರುವ ಮಿಚೆಲ್ ಸ್ಟಾರ್ಕ್ ಅವರು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸೂರ್ಯವಂಶಿಗೆ ಆರಂಭದಲ್ಲೇ ಅಗ್ನಿಪರೀಕ್ಷೆ ಒಡ್ಡಲಿದ್ದಾರೆ. ಇಟ್ಟಿನಲ್ಲಿ ಅನುಭವಿ ಮಿಚೆಲ್ ಸ್ಟಾರ್ಕ್ ಮತ್ತು ಯುವ ಆಟಗಾರ ವೈಭವ್ ಸೂರ್ಯವಂಶಿ ನಡುವಿನ ಹೋರಾಟ ಈ ಪಂದ್ಯದ ಪ್ರಮುಖ ಆಕರ್ಷಣೆಯಾಗಲಿದೆ ಎಂದು ಇಯಾನ್ ಬಿಷಪ್ ಹೇಳಿದ್ದಾರೆ. ಅಲ್ಲದೆ ವೈಭವ್ ಅವರು ಸ್ಟಾರ್ಕ್‌ ಅವರನ್ನು ಯಾವ ರೀತಿ ಎದುರಿಸಲಿದ್ದಾರೆ ಎಂದು ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+