ಡಿಎಂಕೆಗೆ ಕಾಂಗ್ರೆಸ್ ಕೈಕೊಟ್ಟಿದೆ: ಇಂಡಿಯಾ ಒಕ್ಕೂಟ ಪಕ್ಷಗಳು ಪರಾಮರ್ಶೆ ಮಾಡಿಕೊಳ್ಳಲಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ

ಬೆಂಗಳೂರು: ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಕೈಜೋಡಿಸಿ ಚುನಾವಣೆಯನ್ನು ಎದುರಿಸಿದ್ದ ಕಾಂಗ್ರೆಸ್‌ ಇದೀಗ ಅದೇ ಪಕ್ಷಕ್ಕೆ ಕೈಕೊಟ್ಟಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಅವರು ಆರೋಪಿಸಿದ್ದಾರೆ. ಇಂಡಿಯಾ ಒಕ್ಕೂಟದ ಮಿತ್ರಪಕ್ಷಗಳು ಈ ವಿಚಾರವನ್ನು ಗಂಭೀರವಾಗಿ ಪರಾಮರ್ಶೆ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷದ ನಿಲುವು ತಮಿಳುನಾಡಿನಲ್ಲಿ ಕಾಂಗ್ರೆಸ್‌ನ ಬಣ್ಣ ಬಯಲಾಗಿದೆ ಎಂದು ಹೇಳಿದರು. ಕಾಂಗ್ರೆಸ್‌ನ ಸ್ನೇಹ ಮಾಡಿದ ಡಿಎಂಕೆ ಪಕ್ಷದ ನಾಯಕರು ಈಗ ಸಪ್ಪೆ ಮೋರೆ ಹಾಕಿಕೊಂಡಿದ್ದಾರೆ. ಚುನಾವಣೆ ಬಳಿಕ ಒಂದಾಗಿ ಸರ್ಕಾರ ರಚಿಸಬೇಕೆಂದು ತೀರ್ಮಾನವಾಗಿತ್ತು.

ಫಲಿತಾಂಶ ಬಂದ ನಂತರ ಕಾಂಗ್ರೆಸ್‌ ಗೆದ್ದೆತ್ತಿನ ಬಾಲ ಹಿಡಿದಿದೆ. ಯಾವುದೇ ಸಿದ್ಧಾಂತವನ್ನು ಇವರು ಅನುಸರಿಸುತ್ತಿಲ್ಲ. ಇವರನ್ನು ನಂಬಿದ ಡಿಎಂಕೆ ಬೆನ್ನಿಗೆ ಚೂರಿ ಹಾಕಿದ್ದು, ಕಾಂಗ್ರೆಸ್‌ ಕೈ ಕೊಡುವ ಪಕ್ಷ ಎಂದು ಜನರಿಗೆ ಗೊತ್ತಾಗಿದೆ. ಕಾಂಗ್ರೆಸ್‌ ಪಕ್ಷ ನಂಬಿಕೆಗೆ ಅರ್ಹವಲ್ಲ ಎಂಬುದು ಸ್ಪಷ್ಟವಾಗಿದೆ. ಇಂಡಿಯಾ ಒಕ್ಕೂಟದಲ್ಲಿರುವ ಬೇರೆ ಪಕ್ಷಗಳು ಈ ಬಗ್ಗೆ ಪರಾಮರ್ಶೆ ಮಾಡಿಕೊಳ್ಳಬೇಕಿದೆ. ಕಾಂಗ್ರೆಸ್‌ ಹೇಗೆ ಕೈ ಕೊಡುತ್ತದೆ ಎಂದು ಗಮನಿಸಬೇಕಾಗುತ್ತದೆ. ಇಲ್ಲವಾದರೆ ಮಿತ್ರಪಕ್ಷಗಳಿಗೂ ಡಿಎಂಕೆ ಸ್ಥಿತಿಯೇ ಬರಲಿದೆ ಎಂದು ಎಚ್ಚರಿಸಿದರು.

R Ashoka

ಇದೇ ವೇಳೆ ಶಾಸಕ ಡಿ.ಎನ್‌.ಜೀವರಾಜ್ ಅವರಿಗೆ ಪ್ರಮಾಣವಚನ ಬೋಧನೆ ವಿಚಾರವಾಗಿ ಮಾತನಾಡಿದ ಅವರು, ಸ್ಪೀಕರ್‌ ಯು.ಟಿ.ಖಾದರ್ ಅವರು ಅನುಮತಿ ನೀಡಿರುವುದನ್ನು ಸ್ವಾಗತಿಸಿದರು. ಈ ಬಗ್ಗೆ ರಾಜ್ಯಪಾಲರ ಬಳಿ ಹೋದ ನಂತರ ಪ್ರಮಾಣವಚನ ಬೋಧಿಸಲು ಅವಕಾಶ ನೀಡಿದ್ದಾರೆ. ಒಂದು ಬಾರಿ ರಾಜ್ಯಪತ್ರದಲ್ಲಿ ಹೆಸರು ಪ್ರಕಟವಾದ ನಂತರ ಹಾಗೂ ಚುನಾವಣಾ ಆಯೋಗ ಪ್ರಮಾಣಪತ್ರ ನೀಡಿದ ಬಳಿಕ ಪ್ರಮಾಣವಚನ ಬೋಧಿಸಲೇಬೇಕು. ರಾಜ್ಯಪಾಲರು ಅಥವಾ ಅವರು ಸೂಚಿಸಿದ ವ್ಯಕ್ತಿ ಪ್ರಮಾಣವಚನ ಬೋಧಿಸಬಹುದು. ಕೊನೆ ಹಂತದಲ್ಲಿ ಸ್ಪೀಕರ್‌ ಯು.ಟಿ.ಖಾದರ್‌ ಅವರೇ ಫಲಿತಾಂಶವನ್ನು ಒಪ್ಪಿಕೊಂಡು ಪ್ರಮಾಣವಚನ ನೀಡುತ್ತಿರುವುದು ಸಂತಸ ತಂದಿದೆ ಎಂದರು.

ಕಬ್ಬು ಬೆಳೆಗಾರರಿಗೆ ಭರ್ಜರಿ ಗಿಫ್ಟ್: ಎಫ್‌ಆರ್‌ಪಿ ದರ ₹365ಕ್ಕೆ ಏರಿಕೆ, ಕೇಂದ್ರಕ್ಕೆ ಆರ್.ಅಶೋಕ್ ಧನ್ಯವಾದ
ಕಬ್ಬು ಬೆಳೆಗಾರರಿಗೆ ಭರ್ಜರಿ ಗಿಫ್ಟ್: ಎಫ್‌ಆರ್‌ಪಿ ದರ ₹365ಕ್ಕೆ ಏರಿಕೆ, ಕೇಂದ್ರಕ್ಕೆ ಆರ್.ಅಶೋಕ್ ಧನ್ಯವಾದ

ಮರುಎಣಿಕೆ ಹಾಗೂ ಮತದ ಅಕ್ರಮ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, "ವೋಟ್‌ ಚೋರಿ ಮಾಡಿದವರು ಯಾರು ಎಂಬುದು ಈಗ ಸ್ಪಷ್ಟವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರೋಪ ಮಾಡುವುದಕ್ಕೂ ಮೊದಲು ಕೋರ್ಟ್‌ಗೆ ಹೋಗಬೇಕಿತ್ತು. ಒಂದೇ ವಿಚಾರದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ," ಕೇರಳದಲ್ಲಿ ಇವಿಎಂ ಸರಿ ಇದೆ, ಪಶ್ಚಿಮ ಬಂಗಾಳದಲ್ಲಿ ಸರಿ ಇಲ್ಲ ಎಂದು ರಾಹುಲ್‌ ಗಾಂಧಿ ಹೇಳುತ್ತಿದ್ದು, ಇವರೆಲ್ಲರಿಗೂ ಬ್ರೈನ್‌ ಮ್ಯಾಪಿಂಗ್‌ ಮಾಡಬೇಕಿದೆ. ಇನ್ನಾದರೂ ಚುನಾವಣಾ ಫಲಿತಾಂಶಗಳ ಬಗ್ಗೆ ಆಲೋಚಿಸಿ ಮಾತನಾಡಲಿ ಎಂದರು.

ಸಾಲ, ಹಗರಣಗಳ ನಡುವೆ ಕಾಂಗ್ರೆಸ್ ಸರ್ಕಾರದ ಸಂಭ್ರಮವೇ? ವಿಪಕ್ಷ ನಾಯಕರ ಸಾಲು ಸಾಲು ಪ್ರಶ್ನೆಗಳು
ಸಾಲ, ಹಗರಣಗಳ ನಡುವೆ ಕಾಂಗ್ರೆಸ್ ಸರ್ಕಾರದ ಸಂಭ್ರಮವೇ? ವಿಪಕ್ಷ ನಾಯಕರ ಸಾಲು ಸಾಲು ಪ್ರಶ್ನೆಗಳು

ಮಲ್ಲಿಕಾರ್ಜುನ ಖರ್ಗೆ ಪ್ರವೇಶದ ಬಳಿಕ ಸಿಎಂ ಕುರ್ಚಿ ಬಗ್ಗೆ ಯಾರೂ ಮಾತಾಡುತ್ತಿಲ್ಲ. ಡಿ.ಕೆ.ಶಿವಕುಮಾರ್‌ ಅವರ ಕನಸು ಭಗ್ನವಾಗಿದೆ. ಕನಕಪುರದ ಬಂಡೆಯಾದ ನಾನು ವಿಧಾನಸೌಧಕ್ಕೆ ಮೆಟ್ಟಿಲಾಗುತ್ತೇನೆ ಎಂದು ಹೇಳಿದ್ದರು. ಕಾಂಗ್ರೆಸ್‌ನ ಹಿರಿಯ ನಾಯಕರು ಈ ಬಂಡೆಯನ್ನು ಶಿಲೆಯಾಗಿ ಕೆತ್ತುತ್ತಲೇ ಇದ್ದಾರೆ. ಇನ್ನೂ ಸಂಪೂರ್ಣವಾಗಿ ಶಿಲೆ ನಿರ್ಮಾಣವಾಗಿಲ್ಲ. ಡಿ.ಕೆ.ಶಿವಕುಮಾರ್‌ ಮೆಟ್ಟಿಲಾಗಿಯೇ ಇರುತ್ತಾರೆಯೇ ಹೊರತು ಶಿಲೆಯಾಗಲು ಸಾಧ್ಯವಾಗಲೇ ಇಲ್ಲ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+