"ಇಂದು ನನ್ ಬರ್ತ್‌ಡೇ ಅಲ್ವಲ್ಲ, ಆದ್ರೂ ಗಿಫ್ಟ್ ತಂದಿದ್ದೀಯಾ?": Viral ಆಯ್ತು ಶಿಕ್ಷಕಿ ಹಾಗೂ ಪುಟಾಣಿ ವಿದ್ಯಾರ್ಥಿನಿ ವಿಡಿಯೋ

ಶಾಲಾ ಅಂದಾಗ ಎಲ್ಲರಿಗೆ ಅವರದ್ದೇ ಆದ ಒಂದಿಷ್ಟು ಸಿಹಿ ನೆನಪುಗಳಿರುತ್ತದೆ. ಅಂತಹ ಸಿಹಿ ನೆನಪುಗಳನ್ನು ಮೆಲುಕು ಹಾಕುವಂತಹ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಹೌದು, ಶಾಲೆಯ ಸಾಮಾನ್ಯ ದಿನವೊಂದರಲ್ಲಿ, ತರಗತಿಯ ಬಿಡುವಿನ ವೇಳೆಯಲ್ಲಿ ಶಿಕ್ಷಕಿಯೊಬ್ಬರಿಗೆ ತಮ್ಮ ನೆಚ್ಚಿನ ವಿದ್ಯಾರ್ಥಿನಿಯಿಂದ ಸಿಕ್ಕ ಪುಟ್ಟ ಉಡುಗೊರೆಯೊಂದು ಆ ದಿನವನ್ನು ಮತ್ತಷ್ಟು ವಿಶೇಷವಾಗಿಸಿದ ಸುಂದರ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಶಿಕ್ಷಕಿ ಮತ್ತು ವಿದ್ಯಾರ್ಥಿಗಳ ನಡುವಿನ ಸಂಭಾಷಣೆ ಹಾಗೂ ಪವಿತ್ರ ಬಾಂಧವ್ಯದ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ.

ವೈರಲ್‌ ವಿಡಿಯೋದಲ್ಲಿ ಏನಿದೆ?

ಕಾಜಲ್ ಪಂಡಿತ್ ಎಂಬ ಶಿಕ್ಷಕಿ ತಮ್ಮ ಶಾಲೆಯ ದೈನಂದಿನ ಚಟುವಟಿಕೆಗಳ ಕುರಿತು 'ಡೇ ಇನ್ ಮೈ ಲೈಫ್' ಎಂಬ ವಿಡಿಯೋವನ್ನು ಚಿತ್ರೀಕರಿಸುತ್ತಿದ್ದರು. ಮಧ್ಯಾಹ್ನದ ಊಟದ ಸಮಯದಲ್ಲಿ ಸಿಬ್ಬಂದಿ ಕೊಠಡಿಯಲ್ಲಿ (ಸ್ಟಾಫ್ ರೂಮ್) ಕುಳಿತು ಊಟ ಮಾಡುತ್ತಿದ್ದಾಗ ಈ ಕ್ಯೂಟ್ ಘಟನೆ ನಡೆದಿದೆ. ವಿಡಿಯೋದಲ್ಲಿ ಕಾಣಿಸುವಂತೆ, ಪುಟ್ಟ ಬಾಲಕಿಯೊಬ್ಬಳು ನೇರವಾಗಿ ಶಿಕ್ಷಕಿಯ ಬಳಿ ಬಂದು ಮುದ್ದಾದ ಅಚ್ಚರಿಯ ಉಡುಗೊರೆಯೊಂದನ್ನು ನೀಡುತ್ತಾಳೆ. ಇದನ್ನು ಕಂಡು ಶಿಕ್ಷಕಿ ಭಾವುಕರಾಗುವ ದೃಶ್ಯ ಎಲ್ಲರ ಗಮನ ಸೆಳೆದಿದೆ.

Viral teacher student video

ವಿದ್ಯಾರ್ಥಿನಿಯ ಪ್ರೀತಿಗೆ ಅಚ್ಚರಿಗೊಂಡ ಶಿಕ್ಷಕಿ ಕಾಜಲ್, "ಇಂದು ನನ್ನ ಹುಟ್ಟುಹಬ್ಬವಲ್ಲ, ಆದರೂ ನನಗಾಗಿ ಗಿಫ್ಟ್ ತಂದಿದ್ದೀಯಾ?" ಎಂದು ಪ್ರೀತಿಯಿಂದ ಕೇಳುತ್ತಾರೆ. ಇದಕ್ಕೆ ಅತ್ಯಂತ ಮುಗ್ಧವಾಗಿ ಉತ್ತರಿಸುವ ಆ ಪುಟ್ಟ ಬಾಲಕಿ, "ನೀವು ಎರಡು ದಿನಗಳಿಂದ ಶಾಲೆಗೆ ಬಂದಿರಲಿಲ್ಲ, ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಂಡೆ. ಅದಕ್ಕಾಗಿಯೇ ಈ ಗಿಫ್ಟ್ ತಂದೆ" ಎಂದು ಹೇಳುತ್ತಾಳೆ. ಬಾಲಕಿಯ ಈ ಮಾತು ಕೇಳಿ ನೋಡುಗರು ಫಿದಾ ಆಗಿದ್ದಾರೆ.

ನಂತರ ಶಿಕ್ಷಕಿ ಕಾಜಲ್ ಅವರು ಆ ಪುಟ್ಟ ಉಡುಗೊರೆಯನ್ನು ಬಿಚ್ಚಿ ನೋಡಿದಾಗ, ಅದರೊಳಗೆ ಒಂದು ಸುಂದರವಾದ ಕೀಚೈನ್ ಇರುವುದು ಕಾಣುತ್ತದೆ. ಈ ಸುಂದರ ಕ್ಷಣದ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಕಾಜಲ್ ಅವರು, "ಶಿಕ್ಷಕಿಯಾಗುವುದರಿಂದ ಆಗುವ ಪ್ರಯೋಜನಗಳು" (Perks of being a teacher) ಎಂದು ಶೀರ್ಷಿಕೆ ನೀಡಿ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

ವಿಡಿಯೋ ನೋಡಿ ನೆಟ್ಟಿಗರು ಫಿದಾ

ಈ ಕ್ಯೂಟ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಲಕ್ಷಾಂತರ ವೀಕ್ಷಣೆ ಹಾಗೂ ಲೈಕ್ಸ್ ಪಡೆದುಕೊಂಡಿದೆ. ವಿಡಿಯೋ ನೋಡಿದ ಬಳಕೆದಾರರು ಮುಕ್ತಕಂಠದಿಂದ ಶ್ಲಾಘಿಸಿ ಕಾಮೆಂಟ್ ಮಾಡುತ್ತಿದ್ದಾರೆ.

"ಶಿಕ್ಷಕರು ಮತ್ತು ಮಕ್ಕಳ ನಡುವಿನ ಇಂತಹ ಪ್ರೀತಿಯ ಬಾಂಧವ್ಯ ನೋಡುವುದೇ ಕಣ್ಣಿಗೆ ಹಬ್ಬ. ಬಾಲಕಿಯ ಮುಗ್ಧತೆ ನಿಜಕ್ಕೂ ಹೃದಯ ಸ್ಪರ್ಶಿಸುತ್ತದೆ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿ, "ನಿಜಕ್ಕೂ ನೀವು ಅದೃಷ್ಟವಂತ ಶಿಕ್ಷಕಿ. ಮಕ್ಕಳ ಈ ನಿಸ್ವಾರ್ಥ ಪ್ರೀತಿ ಕೋಟಿ ಕೊಟ್ಟರೂ ಸಿಗುವುದಿಲ್ಲ, ಇದನ್ನು ಉಳಿಸಿಕೊಳ್ಳಿ" ಎಂದು ಬರೆದುಕೊಂಡಿದ್ದಾರೆ. "ಆಕೆಯ ಪ್ರೀತಿಯ ಮಾತುಗಳು ದಿನದ ಆಯಾಸವನ್ನು ಮರೆಸುವಂತಿವೆ, ಬಹಳ ಸುಂದರವಾದ ವಿಡಿಯೋ ಇದು" ಎಂದು ಇನ್ನೊಬ್ಬರು ಹರ್ಷ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ, ದೈನಂದಿನ ಜಂಜಾಟಗಳ ನಡುವೆ ಮುಖದ ಮೇಲೆ ಮುಗುಳ್ನಗು ತರಿಸುವ ಇಂತಹ ಅದ್ಭುತ ವಿಡಿಯೋಗಳು ಅಂತರ್ಜಾಲದಲ್ಲಿ ಸಕಾರಾತ್ಮಕತೆಯನ್ನು ಪಸರಿಸುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+