ವಿಜಯ್ vs ಅಣ್ಣಾಮಲೈ: ಸ್ಟಾರ್ ನಟ ಗೆದ್ದಿದ್ದು ಹೇಗೆ, ಖಡಕ್ ಅಧಿಕಾರಿ ಹಿಂದೆ ಸರಿದಿದ್ದು ಏಕೆ - ತಮಿಳುನಾಡು ಫಲಿತಾಂಶ ವಿಶ್ಲೇಷಣೆ

Tamil Nadu Assembly Election Result: ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಟ ಹಾಗೂ ತಮಿಳಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ವಿಜಯ್ ಅವರು ಅಮೋಘ ಗೆಲುವು ಸಾಧಿಸಿದ್ದು. ತಮಿಳುನಾಡಿನಲ್ಲಿ ಸರ್ಕಾರ ರಚನೆ ಮಾಡುವುದಕ್ಕೆ ಇನ್ನು ಕೆಲವೇ ಕೆಲವು ಸ್ಥಾನಗಳು ಬೇಕಾಗಿವೆ. ಇದೇ ಸಂದರ್ಭದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡಿನ ಬಿಜೆಪಿಯ ರಾಜ್ಯಧ್ಯಕ್ಷರಾಗಿದ್ದ ಕೆ. ಅಣ್ಣಾಮಲೈ ಅವರು ಸೋತಿದ್ದೆಲ್ಲಿ ಎನ್ನುವ ವಿವರ ಈ ಲೇಖನದಲ್ಲಿದೆ.

ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಪ್ರಕಟವಾಗಿದೆ. ತಮಿಳುನಾಡಿನ ರಾಜಕೀಯಕ್ಕೆ ಇತ್ತೀಚಿನ ವರ್ಷಗಳಲ್ಲಿ ಇಬ್ಬರು ಪ್ರಮುಖ ಸೆಲೆಬ್ರಟಿಗಳು ಎಂಟ್ರಿ ಕೊಟ್ಟಿದ್ದರು. ಮೊದಲನೆಯದಾಗಿ ಐಪಿಎಸ್ ಅಧಿಕಾರಿಯಾಗಿದ್ದ ಕೆ. ಅಣ್ಣಾಮಲೈ ಮತ್ತೊಬ್ಬರು ನಟ ವಿಜಯ್. ಇಬ್ಬರಿಗೂ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸಮಾನ ಅವಕಾಶಗಳಿದ್ದವು. ಕೆ. ಅಣ್ಣಾಮಲೈ ಅವರು ಸಹ ತಮಿಳುನಾಡು ರಾಜಕೀಯದಲ್ಲಿ ವಿಜಯ್ ಅವರ ಮಾದರಿಯಲ್ಲೇ ಗೆಲುವು ಸಾಧಿಸುವ ಅವಕಾಶವಿದ್ದರೂ ಹಲವು ಕಾರಣಗಳಿಗೆ ಕೈ ತಪ್ಪಿತು. ವಿಜಯ್ ಅವರು ಇದೀಗ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಅಮೋಘ ಯಶಸ್ಸು ಗಳಿಸಿದ್ದಾರೆ.

Tamil Nadu Assembly Election

ಮೊದಲಿಗೆ ತಮಿಳುನಾಡಿನ ಲೋಕಸಭಾ ಕ್ಷೇತ್ರ ಕೊಯಮತ್ತೂರಿನಿಂದ ಸ್ಪರ್ಧೆ ಮಾಡಿದ್ದ ಕೆ ಅಣ್ಣಾಮಲೈ ಅವರು ಸೋತಿದ್ದರು. ಆದರೆ ವಿಜಯ್ ಪಕ್ಷ ಸ್ಥಾಪನೆ ಮಾಡಿದ ಮೇಲೆ ಮೊದಲ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರಲಿಲ್ಲ. ಇದರ ಬದಲಿಗೆ ವಿಧಾನಸಭಾ ಚುನಾವಣೆಗೆ ಪೂರ್ವ ಸಿದ್ಧತೆ ಮಾಡಿಕೊಂಡಿದ್ದರು. ಅಲ್ಲದೆ ವಿಜಯ್ ತಮಿಳುನಾಡಿನ ಯಾವುದೇ ರಾಜಕೀಯ ಪಕ್ಷಗಳೊಂದಿಗೂ ಹೊಂದಾಣಿಕೆ ಮಾಡಿಕೊಳ್ಳಲಿಲ್ಲ. ತಮಿಳುನಾಡಿನಲ್ಲಿ ಬಿಜೆಪಿ ಪರವಾದ ಒಲವು ಇಲ್ಲ, ಆದರೆ ಅಣ್ಣಾಮಲೈ ಅವರು ಬಿಜೆಪಿಗೆ ಸೇರ್ಪಡೆಯಾದರು. ಇಲ್ಲೂ ಸಹ ಅವರಿಗೆ ಅವಕಾಶವಿದ್ದರೂ ಅವರು ಬಿಜೆಪಿ ಮೈತ್ರಿ ಪಕ್ಷವಾದ ಎಐಎಡಿಎಂಕೆ ಮೈತ್ರಿ ಮುರಿದುಕೊಂಡರು ಇದು ಅವರಿಗೆ ಭಾರೀ ಹಿನ್ನಡೆಗೆ ಕಾರಣವಾಯಿತು.

ತಮಿಳುನಾಡು ಚುನಾವಣಾ ಫಲಿತಾಂಶ: ಭಾರೀ ಕುತೂಹಲಕ್ಕೆ ಕಾರಣವಾದ ತ್ರಿಶಾ ತಿರುಮಲ ಭೇಟಿ
ತಮಿಳುನಾಡು ಚುನಾವಣಾ ಫಲಿತಾಂಶ: ಭಾರೀ ಕುತೂಹಲಕ್ಕೆ ಕಾರಣವಾದ ತ್ರಿಶಾ ತಿರುಮಲ ಭೇಟಿ

ಈ ಬಾರಿಯ ತಮಿಳುನಾಡಿನ ವಿಧಾನಸಭೆ ಚುನಾವಣೆಯಲ್ಲಿ ಅಣ್ಣಾಮಲೈ ಅವರಿಗೆ ಬಿಜೆಪಿಯಿಂದ ಟಿಕೆಟ್‌ ಸಿಗಲಿಲ್ಲ. ಕಳೆದ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿತ್ತು. ಮುಂದುವರಿದು ಈ ಬಾರಿ ವಿಜಯ್ ಅವರು ಹಲವು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಆಡಳಿತರೂಢ ಡಿಎಂಕೆಯ ಆಡಳಿತ ವಿರೋಧಿ ಅಲೆಯನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾದರು. ಒಂದು ತಲೆಮಾರೇ ಬದಲಾಗುವ ವಿಧಾನಸಭೆ ಚುನಾವಣೆ ಎಂದು ವಿಜಯ್ ಹೇಳಿದ್ದು, ಈ ಬಾರಿ ಬಾರಿ ಪ್ಲಸ್ ಪಾಯಿಂಟ್ ಆಗಿದೆ.

ಇನ್ನು ನಟ ವಿಜಯ್ ಅವರು ಆಡಳಿತ ವಿರೋಧಿ ಅಲೆಯನ್ನು ಯಶಸ್ವಿಯಾಗಿ ತಮ್ಮ ಕಡೆ ಮತವಾಗಿ ಬದಲಾಯಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಡಿಎಂಕೆ ಪಕ್ಷದ ನಾಯಕರನ್ನು ನೇರವಾಗಿ ಟೀಕೆ ಮಾಡದೆ ಅವರು ಮಾಡಿರುವ ಕೆಲಸಗಳ ಬಗ್ಗೆ ಅಥವಾ ಅವರ ಆಡಳಿತ ವಿರೋಧಿ ಕೆಲಸಗಳು ಯಾವುದು ಎನ್ನುವುದನ್ನು ಪ್ರಸ್ತಾಪಿಸಿದರು.

ಮುಖ್ಯವಾಗಿ ನಟ ವಿಜಯ್ ಅವರು ಗೆಲುವು ಸಾಧಿಸುವಲ್ಲಿ ಯುವ ಮತದಾರರ ಪಾತ್ರವು ಪ್ರಮುಖವಾಗಿದೆ. ಯುವ ಮತದಾರರು ಹಾಗೂ ಜೆನ್‌ಜೀ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಮತ ಚಲಾಯಿಸಿದ್ದಾರೆ. ಅಲ್ಲದೆ ನೀವು ಮಾತ್ರ ಮತಚಲಾಯಿಸಿದರೆ ಸಾಲದು ನಿಮ್ಮ ಮನೆಯವರಿಗೂ ಮತ ಚಲಾವಣೆ ಮಾಡುವುದಕ್ಕೆ ಹೇಳಿ ಅಂತ ವಿಜಯ್ ಅವರು ತಮ್ಮ ಚುನಾವಣಾ ಪ್ರಚಾರ ಸಭೆಗಳಲ್ಲಿ ಹೇಳಿದ್ದರು. ಈ ಎಲ್ಲಾ ವಿಷಯಗಳು ನಟ ವಿಜಯ್ ಅವರಿಗೆ ವರದಾವಾಗಿ ಬದಲಾಗಿದೆ. ತಮಿಳುನಾಡಿನಲ್ಲಿ ಇದೀಗ ಡಿಎಂಕೆ - ಎಐಎಡಿಎಂಕೆಗೆ ಪರ್ಯಾಯವಾಗಿ ಟಿವಿಕೆ ತನ್ನ ಅಸ್ತಿತ್ವ ಸ್ಥಾಪಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+