Advertisement

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ರಿಸಲ್ಟ್: ವಿಜೇತರ ಪಟ್ಟಿ


ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಾರ್ವತ್ರಿಕ ಚುನಾವಣೆಯ ಮತಗಳ ಎಣಿಕೆ ಕಾರ್ಯವು ಇಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಜರುಗಿದ್ದು, ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡಿದ್ದು, ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದೆ, ಪಕ್ಷೇತರರ ನೆರವಿನಿಂದ ಅಧಿಕಾರ ಚುಕ್ಕಾಣಿ ಹಿಡಿಯಲು ಪ್ರಯತ್ನ ಜಾರಿಯಲ್ಲಿದೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ 82 ವಾರ್ಡ್‌ಗಳಲ್ಲಿ ಒಟ್ಟು 8,11,537 ಮತದಾರರು ಇದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ 67 ವಾರ್ಡ್‌ಗಳಿದ್ದವು. ಈಗ ವಾರ್ಡ್‌ಗಳ ಪುನರ್ ವಿಂಗಡನೆಯಾಗಿದ್ದು ವಾರ್ಡ್‌ಗಳ ಸಂಖ್ಯೆ 82ಕ್ಕೆ ಏರಿಕೆಯಾಗಿದೆ. ವಾರ್ಡ್‌ಗಳ ಪುನರ್ ವಿಂಗಡನೆ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡ್‌ಗಳಿಗೆ ಸೆ.3 ರಂದು ಚುನಾವಣೆ ಜರುಗಿದ್ದು, 420 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಅಭ್ಯರ್ಥಿಗಳು ಎಲ್ಲ 82 ವಾರ್ಡ್‍ಗಳಲ್ಲಿ ಕಣದಲ್ಲಿದ್ದರು. ಜೆಡಿಎಸ್ 49, ಸಿಪಿಐ (ಎಮ್) 1, ಬಿಎಸ್‍ಪಿ 7, ಎಎಪಿ 1, ಉತ್ತಮ ಪ್ರಜಾಕೀಯ 11, ಕರ್ನಾಟಕ ರಾಷ್ಟ್ರ ಸಮಿತಿ 4, ಎಐಎಮ್‍ಐಎಂ 12, ಎಸ್‍ಡಿಪಿಐ 4, ಕರ್ನಾಟಕ ಶಿವಸೇನೆ 4, ಕರ್ನಾಟಕ ಜನಸೇವೆ ಪಾರ್ಟಿ 1, ಪಕ್ಷೇತರ 122 ಸೇರಿದಂತೆ ಒಟ್ಟು 420 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದರು.

2021ರ ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ: 82 ವಾರ್ಡ್‌(42 ಮ್ಯಾಜಿಕ್ ನಂಬರ್)
ಬಿಜೆಪಿ : 39
ಕಾಂಗ್ರೆಸ್: 33
ಪಕ್ಷೇತರ: 6
ಎಐಎಂಐಎಂ: 3
ಜೆಡಿಎಸ್: 1

ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ 82 ವಾರ್ಡ್(42ಮ್ಯಾಜಿಕ್ ನಂಬರ್)
ವಾರ್ಡ್ ಸಂಖ್ಯೆವಿಜೇತರುಪಕ್ಷ
01ಅನಿತಾ ಚಳಗೇರಿಬಿಜೆಪಿ
02ಸುರವ್ವ ಪಾಟೀಲ್ಕಾಂಗ್ರೆಸ್
03ಈರೇಶ್ ಅಂಚಟಗೇರಿಬಿಜೆಪಿ
04ರಾಜಶೇಖರಕಾಂಗ್ರೆಸ್
05ನಿತಿನ್ ಇಂಡಿಬಿಜೆಪಿ
06ದಿಲ್ಶಾದ್ ಬೇಗಂ ನದಾಫ್ಕಾಂಗ್ರೆಸ್
07ದೀಪಾ ನೀರಲಕಟ್ಟಿಕಾಂಗ್ರೆಸ್
08ಶಂಕರ್ ಶೆಳ್ಕೆಬಿಜೆಪಿ
09ರತ್ನಾಬಾಯಿ ನಜಾರೆಬಿಜೆಪಿ
10ಚಂದ್ರಕಲಾ ಕೊಟಬಾಗಿಬಿಜೆಪಿ
11ಮಂಜುನಾಥ ಬಟ್ಟೆಣ್ಣವರಬಿಜೆಪಿ
12ವಿಜಯಾನಂದ ಶೆಟ್ಟಿಬಿಜೆಪಿ
13ಸುರೇಶ್ ಬೆದರೆಬಿಜೆಪಿ
14ಶಂಭುಗೌಡ ಸಾಲ್ಮನಿಕಾಂಗ್ರೆಸ್
15ವಿಷ್ಣುತೀರ್ಥ ಕೊರ್ಲಹಳ್ಳಿಬಿಜೆಪಿ
16ಪರ್ವೀನ್ ದೇಸಾಯಿಕಾಂಗ್ರೆಸ್
17ಗಣೇಶ್ ಮುಧೋಳಕಾಂಗ್ರೆಸ್
18ಶಿವು ಹಿರೇಮಠಬಿಜೆಪಿ
19ಜ್ಯೋತಿ ಪಾಟೀಲ್ಬಿಜೆಪಿ
20ಕವಿತಾ ಕಬ್ಬೇರಕಾಂಗ್ರೆಸ್
21ಆನಂದ್ ಯಾವಗಲ್ಬಿಜೆಪಿ
22ಬಿಲಕಿಸ ಬಾನು ಮುಲ್ಲಾಕಾಂಗ್ರೆಸ್
23ಮಂಜುನಾಥ ಬಡಕುರಿಕಾಂಗ್ರೆಸ್
24ಡಾ. ಮಯೂರ ಮೋರೆಕಾಂಗ್ರೆಸ್
25ಲಕ್ಷ್ಮಿ ಹಿಂಡಸಗೇರಿಜೆಡಿಎಸ್
26ನೀಲವ್ವ ಅರವಳದಬಿಜೆಪಿ
27ಸುನಿತಾ ಮಾಳವದಕರ್ಬಿಜೆಪಿ
28ಚಂದ್ರಶೇಖರ ಮನಗುಂಡಿಬಿಜೆಪಿ
29ಮಂಜುನಾಥ ಬುರ್ಲಿಪಕ್ಷೇತರ
30ರಾಮಣ್ಣ ಬಡಿಗೇರಬಿಜೆಪಿ
31ಶಂಕ್ರಪ್ಪ ಹರಿಜನಕಾಂಗ್ರೆಸ್
32ಸತೀಶ್ ಹಾನಗಲ್ಬಿಜೆಪಿ
33ಇಮ್ರಾನ್ ಎಲಿಗಾರಕಾಂಗ್ರೆಸ್
34ಮಂಗಳ ಗೌರಿಕಾಂಗ್ರೆಸ್
35ಮಲ್ಲಿಕಾರ್ಜುನ ಗುಂಡೂರಬಿಜೆಪಿ
36ರಾಜಣ್ಣ ಕೊರವಿಬಿಜೆಪಿ
37ಉಮೇಶಗೌಡ ಕೌಜಗೇರಿಬಿಜೆಪಿ
38ತಿಪ್ಪಣ್ಣ ಮಜಗಿಬಿಜೆಪಿ
39ಸೀಮಾ ಮೊಗಲಿಶೆಟ್ಟರ್ಬಿಜೆಪಿ
40ಶಿವಕುಮಾರ್ ರಾಯನಗೌಡರ್ಕಾಂಗ್ರೆಸ್
41ಸಂತೋಷ್ ಚೌಹಾಣ್ಬಿಜೆಪಿ
42ಮಹಾದೇವಪ್ಪ ನರಗುಂದಬಿಜೆಪಿ
43ಬೀರಪ್ಪ ಖಂಡೇಕರ್ಬಿಜೆಪಿ
44ಉಮಾ ಮುಕ್ಕುಂದಬಿಜೆಪಿ
45ಪ್ರಕಾಶ್ ಕುರಟ್ಟಿಕಾಂಗ್ರೆಸ್
46ವೀರಣ್ನ ಸವಡಿಬಿಜೆಪಿ
47ರೂಪಾ ಶೆಟ್ಟಿಬಿಜೆಪಿ
48ಕಿಶನ್ ಬೆಳಗಾವಿಪಕ್ಷೇತರ
49ವೀಣಾ ಬಾರದ್ವಾಡ್ಬಿಜೆಪಿ
50ಮಂಗಳಮ್ಮ ಹಿರೇಮನಿಕಾಂಗ್ರೆಸ್
51ಸೆಂದಿಲ್ ಕುಮಾರ್ಕಾಂಗ್ರೆಸ್
52ಪಕ್ಷೇತರ
53ಮಹ್ಮದ್ ಇಸ್ಮಾಯಿಲ್ ಭದ್ರಾಪೂರಕಾಂಗ್ರೆಸ್
54ಸರಸ್ವತಿ ಧೊಂಗಡಿಬಿಜೆಪಿ
55ಇಕ್ಬಾಲ್ ನವಲೂರುಕಾಂಗ್ರೆಸ್
56ಚಂದ್ರಿಕಾ ಮೇಸ್ತ್ರಿಪಕ್ಷೇತರ
57ಮೀನಾಕ್ಷಿ ವಂಟಮೂರಿಬಿಜೆಪಿ
58ಶ್ರುತಿ ಚಲವಾದಿಕಾಂಗ್ರೆಸ್
59ಸುವರ್ಣಕಾಂಗ್ರೆಸ್
60ರಾಧಾಬಾಯಿಬಿಜೆಪಿ

Advertisement
Advertisement

Advertisement


ವಿಜಯೋತ್ಸವ ಆಚರಣೆಗೆ ಬ್ರೇಕ್:
ಮತ ಎಣಿಕೆ ಸಂದರ್ಭದಲ್ಲಿ ಅಥವಾ ಮತಗಳ ಎಣಿಕೆ ಕಾರ್ಯದ ಮುಕ್ತಾಯದ ನಂತರ ಹಾಗೂ ಫಲಿತಾಂಶ ಘೋಷಣೆಯಾದ ತರುವಾಯ ವಿಜಯಶಾಲಿಯಾದ ಅಭ್ಯರ್ಥಿಯ ಕಾರ್ಯಕರ್ತರು, ಬೆಂಬಲಿಗರು ವಿಜಯೋತ್ಸವ ಆಚರಿಸುವ ಸಂಭವಗಳಿದ್ದು ಮತ್ತು ಈ ಸಮಯದಲ್ಲಿ ಪರಾಭವಗೊಂಡ ಅಭ್ಯರ್ಥಿಯ ಕಾರ್ಯಕರ್ತರು, ಬೆಂಬಲಿಗರು ಹಾಗೂ ವಿಜಯಶಾಲಿ ಅಭ್ಯರ್ಥಿಯ ಕಾರ್ಯಕರ್ತರು ಮತ್ತು ಬೆಂಬಲಿಗರ ವೈಮನಸ್ಸು, ಜಗಳ ಮತ್ತು ಘರ್ಷಣೆಗಳು ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಮತ್ತು ಶಾಂತಿಯುತ ಮತ ಎಣಿಕೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಭಾರತಿಯ ದಂಡ ಸಹಿಂತೆ ಕಲಂ 188ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶದಲ್ಲಿ ತಿಳಿಸಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಧಾರವಾಡ ತಾಲೂಕು ಹುಬ್ಬಳ್ಳಿ ತಾಲೂಕು ಮತ್ತು ಹುಬ್ಬಳ್ಳಿ ನಗರ ತಾಲೂಕುಗಳ ವ್ಯಾಪ್ತಿಯಲ್ಲಿ ಸಿಆರ್‌ಪಿಸಿ 1973 ಕಲಂ 144 ರನ್ವಯ ಸೆಪ್ಟೆಂಬರ್ 5 ರ ಸಾಯಂಕಾಲ 6 ಗಂಟೆಯಿಂದ ಪ್ರಾರಂಭಿಸಿ, ಸೆಪ್ಟೆಂಬರ್ 6ರ ಸಾಯಂಕಾಲ 7 ಗಂಟೆಯವರೆಗೆ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಲಾಗಿದೆ.

6ರಿಂದ 8ನೇ ತರಗತಿಗಳು ಆರಂಭ-ವಿದ್ಯಾರ್ಥಿಗಳಿಗೆ ಹೂ, ಸಿಹಿ ನೀಡಿದ ಶಿಕ್ಷಕರು| Oneindia Kannada

ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯ: ಮತ ಎಣಿಕಾ ಕೇಂದ್ರ ಪ್ರವೇಶಿಸುವ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿತ್ತು. ಪರಸ್ಪರ ಸಾಮಾಜಿಕ ಅಂತರ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಎಲ್ಕರೂ ಸಹಕಾರ ನೀಡಬೇಕು. ಮತ ಎಣಿಕೆ ಕೇಂದ್ರ ಹಾಗೂ ಸುತ್ತಲಿನ ಪ್ರದೇಶದಲ್ಲಿ ಮಹಾನಗರ ಫೊಲೀಸ್ ಆಯುಕ್ತ ಲಾಬುರಾಮ ಅವರ ನೇತೃತ್ವದಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

English Summary

Hubballi Dharwad Municipal Election Results 2021: Here is the list of Winners and Losers. Take a look.
Read more...