Advertisement

ಏ. 14ರಂದು ದೇಶದ ವಿವಿಧ ನಗರಗಳಲ್ಲಿ ಚಿನ್ನದ ದರ ಅಲ್ಪ ಇಳಿಕೆ


ಬೆಂಗಳೂರು, ಏಪ್ರಿಲ್ 14: ದೇಶದ ಕೆಲವು ಪ್ರಮುಖ ನಗರಗಳಲ್ಲಿ ಹಳದಿ ಲೋಹದ ದರ ಅತ್ಯಲ್ಪ ಇಳಿಕೆ ಕಂಡಿದೆ. ಇನ್ನು ಕೆಲವು ನಗರಗಳು ಮತ್ತೆ ಬೆಲೆ ಏರಿಕೆಯ ಬಿಸಿ ಎದುರಿಸಿವೆ. ಹಬ್ಬ ಮತ್ತು ಶುಭ ಸಮಾರಂಭಗಳು ಸಾಲಾಗಿ ನಡೆಯುತ್ತಿರುವ ಈ ಅವಧಿಯಲ್ಲಿ ಚಿನ್ನದ ಬೆಲೆ ಏರಿಳಿಕೆ ಗ್ರಾಹಕರನ್ನು ಚಿಂತೆಗೀಡುಮಾಡಿದೆ.

ಬುಧವಾರ ಎಂಸಿಎಕ್ಸ್‌ನಲ್ಲಿ ಚಿನ್ನದ ದರ 160 ರೂಪಾಯಿ ಇಳಿಕೆಯೊಂದಿಗೆ 47,350 ರೂಪಾಯಿಗೆ ಕುಸಿದಿದೆ. ದೇಶದಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರ ಸರಾಸರಿ 4,475 ರೂಪಾಯಿ ಇದ್ದರೆ, 24 ಕ್ಯಾರಟ್‌ನ ಪ್ರತಿ ಒಂದು ಗ್ರಾಂ ಚಿನ್ನದ ದರ 4,575 ರೂಪಾಯಿ ಇದೆ. ದೇಶದಲ್ಲಿ ಚಿನ್ನದ ಸರಾಸರಿ ದರ ಪ್ರತಿ 10 ಗ್ರಾಂಗೆ 10 ರೂಪಾಯಿ ಇಳಿಕೆಯೊಂದಿಗೆ 44,750 ರೂಪಾಯಿಗೆ ಕುಸಿದಿದೆ. 24 ಕ್ಯಾರಟ್‌ನ ಚಿನ್ನದ ದರ ಕೂಡ 10 ರೂ. ಇಳಿದಿದ್ದು, ಪ್ರತಿ 10 ಗ್ರಾಂಗೆ 45,750 ರೂಪಾಯಿ ಇದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ವಹಿವಾಟು ಬದಲಾದಂತೆ ಭಾರತದಲ್ಲಿನ ಚಿನ್ನದ ದರದಲ್ಲಿಯೂ ಬದಲಾವಣೆಗಳಾಗಲಿವೆ. ಹೀಗಾಗಿ ದಿನದ ಚಿನ್ನ-ಬೆಳ್ಳಿ ದರದಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ.

ಚಿನ್ನದ ಪ್ರಿಯರಿಗೆ ಈ ತಿಂಗಳಲ್ಲಿ ಸಿಗಲಿದೆ ಸುವರ್ಣ ಹೂಡಿಕೆ ಅವಕಾಶ !

ದೆಹಲಿಯಲ್ಲಿ ಬೆಲೆ ಇಳಿಕೆ

ರಾಜಧಾನಿ ದೆಹಲಿಯಲ್ಲಿ ಬಂಗಾರದ ಬೆಲೆಯಲ್ಲಿ ಅಲ್ಪ ಇಳಿಕೆಯಾಗಿದೆ. 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 10 ರೂಪಾಯಿ ಕುಸಿತದೊಂದಿಗೆ 45,700 ರೂಪಾಯಿಗೆ ತಲುಪಿದೆ. 24 ಕ್ಯಾರಟ್ ಚಿನ್ನ ಬೆಲೆ ಪ್ರತಿ 10 ಗ್ರಾಂ 10 ರೂ ಇಳಿದಿದ್ದು, 49,860 ರೂಪಾಯಿಗೆ ತಲುಪಿದೆ.

ಬೆಂಗಳೂರಲ್ಲಿ ಚಿನ್ನದ ಬೆಲೆ

ಬೆಂಗಳೂರಿನಲ್ಲಿ ಕೂಡ ಹಳದಿ ಲೋಹ ಕೊಂಚ ಅಗ್ಗವಾಗಿದೆ. 22 ಕ್ಯಾರಟ್ ಚಿನ್ನದ ಪ್ರತಿ ಹತ್ತು ಗ್ರಾಂ ಚಿನ್ನದ ದರ 10 ರೂಪಾಯಿ ಇಳಿಕೆಯಾಗಿದ್ದು, 43,390 ರೂಪಾಯಿ ತಲುಪಿದೆ. 24 ಕ್ಯಾರಟ್‌ನ 10 ಗ್ರಾಂ ಚಿನ್ನದ ದರ 10 ರೂ ಇಳಿಕೆಯೊಂದಿಗೆ 47,340 ರೂಪಾಯಿಗೆ ಇಳಿದಿದೆ.

Advertisement
Advertisement
ಚೆನ್ನೈನಲ್ಲಿ ದರ ಇಳಿಕೆ

ಚೆನ್ನೈ ನಗರದಲ್ಲಿ ಕೂಡ ಬಂಗಾರದ ದರ ಅಲ್ಪ ಪ್ರಮಾಣದಲ್ಲಿ ತಗ್ಗಿದೆ. 22 ಕ್ಯಾರಟ್‌ನ ಪ್ರತಿ 10 ಗ್ರಾಂಗೆ 10 ರೂ ತಗ್ಗಿದ್ದು, 43,740 ರೂ.ಗೆ ತಲುಪಿದೆ. ಹಾಗೆಯೇ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂ 10 ರೂ. ಇಳಿಕೆಯಾಗಿದ್ದು, 47,690 ರೂಪಾಯಿಗೆ ಮಾರಾಟವಾಗುತ್ತಿದೆ.

ಮುಂಬೈನಲ್ಲಿ ಚಿನ್ನದ ಬೆಲೆ ಹೆಚ್ಚಳ

ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 44,750 ರೂಪಾಯಿಗೆ ಇಳಿಕೆಯಾಗಿದೆ. 24 ಕ್ಯಾರಟ್ ಚಿನ್ನ 45,750 ರೂ. ದರಕ್ಕೆ ಮಾರಾಟವಾಗುತ್ತಿದೆ. ಕೇರಳದಲ್ಲಿ ಹಳದಿ ಲೋಹದ ದರ ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 43,390 ರೂ ಮತ್ತು 24 ಕ್ಯಾರಟ್ ಹಳದಿ ಲೋಹ 47,340 ರೂಪಾಯಿಗೆ ಮಾರಾಟವಾಗುತ್ತಿದೆ. ಕೋಲ್ಕತಾದಲ್ಲಿ 22 ಕ್ಯಾರಟ್ ಚಿನ್ನಕ್ಕೆ 45,850 ರೂಪಾಯಿ ಮತ್ತು 24 ಕ್ಯಾರಟ್ ಚಿನ್ನಕ್ಕೆ 48,550 ರೂ ದರವಿದೆ.

ದೇಶದಲ್ಲಿ ಬೆಳ್ಳಿ ಬೆಲೆ

ದೇಶದಲ್ಲಿ ಬೆಳ್ಳಿ ದರ ಬಹುತೇಕ ನಗರಗಳಲ್ಲಿ ಏರಿಕೆಯಾಗಿದೆ. ಬೆಳ್ಳಿ ಬೆಲೆ ಪ್ರತಿ ಕೆಜಿಗೆ 1300 ರೂಪಾಯಿ ಏರಿಕೆಯೊಂದಿಗೆ 67,600 ರೂಪಾಯಿಗೆ ತಲುಪಿದೆ. ಬೆಂಗಳೂರಿನಲ್ಲಿ ಸಹ ಬೆಳ್ಳಿ ಬೆಲೆಯಲ್ಲಿ ಪ್ರತಿ ಕೆಜಿಗೆ 1300 ರೂಪಾಯಿ ತುಟ್ಟಿಯಾಗಿದ್ದು, 67,600 ರೂಪಾಯಿ ಇದೆ. ಚೆನ್ನೈನಲ್ಲಿ ಬೆಳ್ಳಿ ಬೆಲೆ ಸ್ಥಿರವಾಗಿದ್ದು, ಒಂದು ಕೆಜಿಗೆ 71,900 ರೂಪಾಯಿ ಇದೆ. ಮುಂಬೈನಲ್ಲಿ ಬೆಳ್ಳಿ ದರ ಪ್ರತಿ ಕೆಜಿಗೆ 67,600 ರೂಪಾಯಿ ಇದೆ.


* ಚಿನ್ನ ಮತ್ತು ಬೆಳ್ಳಿ ಬೆಲೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ಬದಲಾವಣೆ ಮತ್ತು ಸ್ಥಳೀಯ ತೆರಿಗೆ ನೀತಿಗಳಿಗೆ ಅನುಗುಣವಾಗಿ ಬದಲಾಗುತ್ತದೆ. ಈ ಮಾಹಿತಿ ಬೆಳಿಗ್ಗೆ 10 ಗಂಟೆಯವರೆಗಿನ ಮಾರುಕಟ್ಟೆ ದರ ಬದಲಾವಣೆಯನ್ನು ಆಧರಿಸಿದೆ.

English Summary

Gold and silver prices changed on April 14 in some major cities across India. Here is the price details of major cities.
Read more...