ಲಾಲ್ ಬಾಗ್, ಕಬ್ಬನ್ ಉದ್ಯಾನಕ್ಕಿಂತಲೂ ಉತ್ತರದಲ್ಲಿ ಬೃಹತ್ ಉದ್ಯಾನ: ಈಶ್ವರ್ ಖಂಡ್ರೆ ಗುಡ್‌ನ್ಯೂಸ್


ಬೆಂಗಳೂರು: ಎಚ್.ಎಂ.ಟಿ. ಅರಣ್ಯ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ಮರಳಿ ಪಡೆದು ಅಲ್ಲಿ ಲಾಲ್‌ಬಾಗ್, ಕಬ್ಬನ್ ಪಾರ್ಕ್‌ಗಿಂತ ದೊಡ್ಡ ಉದ್ಯಾನ ನಿರ್ಮಿಸಲಾಗುವುದು. ಈ ಮೂಲಕ ಉತ್ತರ ಬೆಂಗಳೂರಿನ ಜನರಿಗೆ ಅತ್ಯಗತ್ಯವಾದ ಶಾಶ್ವತ ತಾಣವಾಗಿ ಉಳಿಸಲು ನಿರ್ಧರಿಸಲಾಗಿದೆ ಎಂದು ಈ ಹಿಂದೆ ಅರಣ್ಯ ಸಚಿವರಾಗಿದ್ದ ಹಾಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಅವರು ತಿಳಿಸಿದ್ದಾರೆ.

Advertisement

ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ ಅವರು, ಅರಣ್ಯ ಭೂಮಿ ಕುರಿತ ಗೊಂದಲಗಳಿಗೆ ಅವರು ತೆರೆ ಎಳೆದರು. ಎಚ್ಎಂಟಿ ಭೂಮಿ ಅರಣ್ಯವಾಗಿದ್ದು, ಅರಣ್ಯವಾಗೇ ಉಳಿಯುತ್ತದೆ. ಎಚ್ಎಂಟಿ ಭೂಮಿಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್. ಡಿ.ಕುಮಾರಸ್ವಾಮಿ ಅವರ ಆರೋಪಗಳಿಗೆ ದಾಖಲೆಗಳೊಂದಿಗೆ ಈಶ್ವರ್ ಖಂಡ್ರೆ ಅವರು ತಿರುಗೇಟು ನೀಡಿದರು.

Advertisement

ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ಮಾಡಿರುವ ಆರೋಪಗಳಿಗೆ ದಾಖಲೆಗಳು, ಕಾನೂನು ಹಾಗೂ ನ್ಯಾಯಾಲಯದ ತೀರ್ಪುಗಳ ಆಧಾರದ ಮೇಲೆ ಉತ್ತರ ನೀಡಿದ್ದೇನೆ. ನಾನು ಅಭಿವೃದ್ಧಿಯಲ್ಲಿ ರಾಜಕೀಯ ಮಾಡುವವನೂ ಅಲ್ಲ, ಕುಮಾರಸ್ವಾಮಿ ಅವರ ಮೇಲೆ ನನಗೆ ಯಾವುದೇ ವೈಯಕ್ತಿಕ ದ್ವೇಷವೂ ಇಲ್ಲ. ಬೆಂಗಳೂರು ಉತ್ತರದಲ್ಲಿ ದೊಡ್ಡ ಉದ್ಯಾನ ಸ್ಥಾಪನೆಗೆ ನಿರ್ಧರಿಸಿದ್ದೇವೆ. ಜನರಿಗೆ ಅತ್ಯಗತ್ಯವಾದ ಶ್ವಾಶ್ವತತಾಣ ಉಳಿಸಲು ನಿರ್ಧರಿಸಿದ್ದೇವೆ ಎಂದು ಅವರು ಗುಡ್‌ನ್ಯೂಸ್ ನೀಡಿದರು.

Monsoon Report: ಕರ್ನಾಟಕದಲ್ಲಿ ಕೊರತೆ ತಗ್ಗಿಸಿ ದುರ್ಬಲಗೊಂಡ ಮುಂಗಾರು! ಜೂನ್ 1-ಜುಲೈ 10ರ ಮಳೆ ವರದಿ

ಯಾವ ಸ್ವಾಮಿ... ಕುಮಾರಸ್ವಾಮಿ ಎನ್ನಬಹುದೇ?

ಎಚ್.ಡಿ ಕುಮಾರಸ್ವಾಮಿ ಅವರು ತಮ್ಮ ಸುದ್ದಿಗೋಷ್ಠಿಯಲ್ಲಿ "ಯಾವ ಖಂಡ್ರೆ, ಎಚ್.ಎಂ.ಟಿ. ಆದಾಗ ನಾನು ಹುಟ್ಟೇ ಇರಲಿಲ್ಲ" ಎಂದು ಹೇಳಿದ್ದಾರೆ. ನಾನೂ ಕೂಡ "ಯಾವ ಸ್ವಾಮಿ... ಕುಮಾರಸ್ವಾಮಿ" ಎನ್ನಬಹುದು. ಅವರೂ ಎಚ್.ಎಂ.ಟಿ. ಹುಟ್ಟಿದಾಗ ಹಸುಗೂಸೇ ಎಂದು ಹೇಳಬಹುದು. ಆದರೆ ನಾನು ಆ ಮಟ್ಟಕ್ಕೆ ಇಳಿಯುವುದಿಲ್ಲ ಎಂದು ಟಾಂಟ್ ಕೊಟ್ಟರು.

Advertisement

ತೀರ್ಪು ನೀಡೋದು ಕುಮಾರಸ್ವಾಮಿ ಅಲ್ಲ

ಇನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೇ ಎಚ್.ಎಂ.ಟಿ. ಜಮೀನಿನ ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಹೇಳಿದ್ದಾರೆ. ಆದರೆ ಅದೇ ವೇಳೆ ಸರ್ಕಾರಕ್ಕೆ ಈ ಭೂಮಿಯ ಮೇಲೆ ಹಕ್ಕಿಲ್ಲ ಎಂದೂ ಘೋಷಿಸಿದ್ದಾರೆ. ಈ ತೀರ್ಪು ನೀಡಬೇಕಾದವರು ನ್ಯಾಯಾಧೀಶರು, ಕುಮಾರಸ್ವಾಮಿ ಅವರಲ್ಲ.

ಸುಪ್ರೀಂ ಕೋರ್ಟ್ ಹಲವು ತೀರ್ಪುಗಳಲ್ಲಿ ಒಮ್ಮೆ ಅರಣ್ಯ ಎಂದು ಘೋಷಿತವಾದ ಭೂಮಿ ಕಾನೂನುಬದ್ಧವಾಗಿ ಅರಣ್ಯೇತರ ಉದ್ದೇಶಕ್ಕೆ ಪರಿವರ್ತನೆ ಆಗದಿದ್ದರೆ ಅದು ಅರಣ್ಯವಾಗಿಯೇ ಉಳಿಯುತ್ತದೆ ಎಂದು ಸ್ಪಷ್ಟಪಡಿಸಿದೆ. ಪರಿಸರದ ಹಕ್ಕುಗಳು ಭೂ ಒಡೆತನದ ಹಕ್ಕಿಗಿಂತ ಮಿಗಿಲು ಎಂಬುದನ್ನೂ ಹೇಳಿದೆ. ಆದ್ದರಿಂದ ಎಚ್.ಎಂ.ಟಿ. ಭೂಮಿ ಅರಣ್ಯವಾಗಿದ್ದು, ಅರಣ್ಯವಾಗಿಯೇ ಉಳಿಯುತ್ತದೆ. ಅದು ರಾಜ್ಯ ಸರ್ಕಾರದ ಆಸ್ತಿಯಾಗಿಯೇ ಇರುತ್ತದೆ ಎಂದು ಅವರು ವಿವರಿಸಿದ್ದಾರೆ.

Advertisement

ಈ ಮಧ್ಯೆ ಬೆಂಗಳೂರು ನಗರ ಡಿಸಿಎಫ್ ನೋಟಿಸ್ ನೀಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. ಆದರೆ ಅದು ನೋಟಿಸ್ ಅಲ್ಲ. ಅದು ಕರ್ನಾಟಕ ಅರಣ್ಯ ಕಾಯಿದೆ, 1963ರ ಸೆಕ್ಷನ್ 64(ಎ) ಅಡಿಯಲ್ಲಿ ನೀಡಿರುವ ಅರೆ ನ್ಯಾಯಿಕ ಪ್ರಾಧಿಕಾರದ ಆದೇಶ. ಸಂಬಂಧಪಟ್ಟವರಿಗೆ ದಾಖಲೆ ಸಲ್ಲಿಸಲು ಅವಕಾಶ ನೀಡಿದ ನಂತರ, ಸೂಕ್ತ ದಾಖಲೆ ಸಲ್ಲಿಸದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.

ಮೈಸೂರು ಬಗ್ಗೆ ಒಲವಿದ್ದ ಎಸ್. ಜಾನಕಿ ಅವರ ಸ್ಮಾರಕ ಅಲ್ಲೇ ನಿರ್ಮಿಸಬೇಕು: ಬಸವರಾಜ ಬೊಮ್ಮಾಯಿ

ಈ ಆದೇಶದ ಬಗ್ಗೆ ಅಸಮ್ಮತಿ ಇದ್ದರೆ ಕಾನೂನು ಪ್ರಕಾರ ಸಿಎಫ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದು, ನಂತರ ಹೈಕೋರ್ಟ್‌ಗೂ ಹೋಗಬಹುದು. ಆದರೆ ಕಾನೂನು ಪ್ರಕ್ರಿಯೆಯನ್ನು ಬಿಟ್ಟು ಜನರ ಮುಂದೆ ತಪ್ಪು ಮಾಹಿತಿ ನೀಡುವುದು ಸರಿಯಲ್ಲ. 1901ರಿಂದ 1969ರವರೆಗೆ ಯಾವುದೇ ಮೀಸಲು ಅರಣ್ಯವನ್ನು ಡಿ-ಫಾರೆಸ್ಟ್ ಮಾಡಲು ಅಧಿಸೂಚನೆ ಕಡ್ಡಾಯವಾಗಿತ್ತು. ಅಂತಹ ಅಧಿಸೂಚನೆ ಇದ್ದರೆ ದಾಖಲೆ ತೋರಿಸಲಿ. ದಾಖಲೆ ಇಲ್ಲದೆ ಆರೋಪ ಮಾಡುವುದರಿಂದ ಸತ್ಯ ಬದಲಾಗುವುದಿಲ್ಲ ಎಂದರು.

Advertisement

ಎಚ್.ಎಂ.ಟಿ.ಗೆ ಜಮೀನು ನೀಡಿದ ಸಂದರ್ಭದಲ್ಲೇ ಬೆಂಗಳೂರು ವಿಶ್ವವಿದ್ಯಾಲಯಕ್ಕೂ ಅರಣ್ಯ ಭೂಮಿ ನೀಡಲಾಗಿತ್ತು. 1969ರ ಫೆಬ್ರವರಿ 24ರಂದು ಅದಕ್ಕೆ ಸಂಬಂಧಿಸಿದ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ ಎಂಬ ದಾಖಲೆಗಳನ್ನು ಇಂದು ಸಾರ್ವಜನಿಕವಾಗಿ ಪ್ರದರ್ಶಿಸಿದ್ದೇನೆ ಎಂದು ಹೇಳಿದರು.

English Summary

Eshwar Khandre defended HMT land's forest status, citing legal records while rejecting H.D. Kumaraswamy's allegations.