Bengaluru: ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಬಂತು 14ನೇ ರೈಲು; ಇನ್ಮುಂದೆ ಕೇವಲ 5 ನಿಮಿಷಕ್ಕೊಂದು ಮೆಟ್ರೋ ಸಂಚಾರ


ರಾಜಧಾನಿ ಬೆಂಗಳೂರಿನ ಟ್ರಾಫಿಕ್‌ಗೆ ಮುಕ್ತಿ ನೀಡಲು ನಮ್ಮ ಮೆಟ್ರೋ ಪ್ರಮುಖ ಪಾತ್ರ ವಹಿಸುತ್ತಿದೆ. ಇದೀಗ ಬೆಂಗಳೂರಿಗರಿಗೆ, ವಿಶೇಷವಾಗಿ ಐಟಿ ಕಾರಿಡಾರ್‌ನಲ್ಲಿ ಪ್ರತಿದಿನ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್‌ ಸಿಹಿಸುದ್ದಿ ಒಂದನ್ನಾ ನೀಡಿದೆ. ಇದೀಗ ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ 14ನೇ ರೈಲು ಅಧಿಕೃತವಾಗಿ ಬಂದಿಳಿದಿದ್ದು, ಶೀಘ್ರದಲ್ಲೇ ಈ ಮೆಟ್ರೋ ಸಂಚಾರ ಶುರು ಮಾಡಲಿದ್ದು, ಇದರಿಂದ ಮೆಟ್ರೋ ಪ್ರಯಾಣಿಕರಿಗೆ ರೈಲುಗಾಗಿ ತುಂಬ ಹೊತ್ತು ಕಾಯುವುದು ಸುಧಾರಿಸಲಿದೆ.

Advertisement

ಸದ್ಯ ಆರ್.ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಸಂಪರ್ಕ ಕಲ್ಪಿಸುವ 19.75 ಕಿ.ಮೀ ಉದ್ದದ ಈ ಹಳದಿ ಮಾರ್ಗವು ನಗರದ ಟ್ರಾಫಿಕ್‌ ಸಮಸ್ಯೆ ತಪ್ಪಿಸಲು ಇರುವ ಮಹತ್ವದ ಯೋಜನೆಗಳಲ್ಲಿ ಒಂದಾಗಿದೆ.

Advertisement

ಹೆಬ್ಬಗೋಡಿ ಡಿಪೋದಲ್ಲಿ ರೈಲಿನ ತಪಾಸಣೆ

ಹೊಸದಾಗಿ ಆಗಮಿಸಿರುವ 14ನೇ ರೈಲಿನ ಆರು ಬೋಗಿಗಳನ್ನು ಟ್ರೈಲರ್‌ಗಳ ಮೂಲಕ ತಂದು ಹೆಬ್ಬಗೋಡಿ ಡಿಪೋದಲ್ಲಿ ಯಶಸ್ವಿಯಾಗಿ ಇಳಿಸಲಾಗಿದೆ. ಬೋಗಿಗಳನ್ನು ಒಂದಕ್ಕೊಂದು ಒಗ್ಗೂಡಿಸುವ ಕಪ್ಲರ್‌ಗಳು ಮತ್ತು ಗ್ಯಾಂಗ್‌ವೇಗಳನ್ನು ಅಳವಡಿಸುವ ಮೂಲಕ ಇವುಗಳನ್ನು ಪೂರ್ಣ ರೈಲಾಗಿ ಮಾಡಲಾಗಿದೆ. ಈಗ ಈ ರೈಲನ್ನ ತಪಾಸಣಾ ಬೇ ಲೈನ್‌ಗೆ ಸ್ಥಳಾಂತರಿಸಲಾಗಿದ್ದು, ಶೀಘ್ರದಲ್ಲೇ ಸ್ಟಾಟಿಸ್ಟಿಕ್‌ ಪರೀಕ್ಷೆಗೆ ಒಳಪಡಿಸಲಾಗುವುದು.

BMTC: ಕ್ಯೂಆರ್ ಟಿಕೆಟ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ; ಹಣ ಕಡಿತವಾದ್ರೂ ಸಿಗದ ಟಿಕೆಟ್, ಅಧಿಕಾರಿಗಳ ಸ್ಪಷ್ಟನೆ

ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಈ ರೈಲನ್ನು ಮುಖ್ಯ ಮಾರ್ಗದಲ್ಲಿ ಸುಮಾರು 750 ಕಿ.ಮೀ ದೂರದ ಡೈನಾಮಿಕ್ ಟೆಸ್ಟಿಂಗ್‌ಗೆ ಮೊದಲು ಒಳಪಡಿಸಬೇಕು. ಹಾಗಾಗಿ ಮೆಟ್ರೋ ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ಈ ಪರೀಕ್ಷೆಗಳನ್ನು ಕೇವಲ ರಾತ್ರಿ ವೇಳೆ ಮಾತ್ರ ನಡೆಸಲು ಬಿಎಂಆರ್‌ಸಿಎಲ್‌ ನಿರ್ಧರಿಸಿದೆ. ಎಲ್ಲಾ ಪರೀಕ್ಷೆಗಳು ಯಶಸ್ವಿಯಾಗಿ ಮುಗಿದ ಬಳಿಕವಷ್ಟೇ ಈ ರೈಲನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸುವುದು.

Advertisement

ಪ್ರಯಾಣಿಕರಿಗೆ 5 ನಿಮಿಷಕ್ಕೊಂದು ಮೆಟ್ರೋ ಸೇವೆ

ಪ್ರಸ್ತುತ ಹಳದಿ ಮಾರ್ಗದಲ್ಲಿ 10 ರೈಲುಗಳು ಕಾರ್ಯಾಚರಣೆ ನಡೆಸುತ್ತಿದ್ದು, ಜನ ದಟ್ಟಣೆಯ ಸಮಯದಲ್ಲಿ ಪ್ರತಿ 7 ನಿಮಿಷಗಳಿಗೊಮ್ಮೆ ರೈಲು ಸೇವೆ ಲಭ್ಯವಿದೆ. ಇನ್ನು ಕೆಲವೇ ದಿನಗಳಲ್ಲಿ ಮತ್ತೊಂದು ಹೊಸ ರೈಲು ಸೇವೆಗೆ ಸೇರ್ಪಡೆಯಾಗಲಿದ್ದು, ಇದೆ ಜೊತೆಗೆ ಈಗಾಗಲೇ ಎರಡು ರೈಲುಗಳು ಸುಧಾರಿತ ಪರೀಕ್ಷೆ ಹಂತದಲ್ಲಿವೆ. ಅಧಿಕಾರಿಗಳ ಮಾಹಿತಿ ಪ್ರಕಾರ, ಮುಂದಿನ ಒಂದು ತಿಂಗಳೊಳಗೆ ಒಟ್ಟು 15 ರೈಲುಗಳನ್ನು ಹಳದಿ ಮಾರ್ಗದಲ್ಲಿ ಸಂಚಾರಿ ಶುರು ಮಾಡುವ ಸಾಧ್ಯತೆಯಿದೆ.

ಒಮ್ಮೆ ಎಲ್ಲಾ 15 ರೈಲುಗಳು ಕಾರ್ಯಾಚರಣೆ ಆರಂಭಿಸಿದರೆ, ಪೀಕ್ ಅವರ್ಸ್‌ನಲ್ಲಿ ಮೆಟ್ರೋ ರೈಲುಗಳ ಲಭ್ಯತೆಯ ಸಮಯ 7 ನಿಮಿಷದಿಂದ ಬರೋಬ್ಬರಿ 5 ನಿಮಿಷಕ್ಕೆ ಇಳಿಕೆಯಾಗಲಿದೆ. ಇದರಿಂದ ಕಚೇರಿಗೆ ತೆರಳುವ ಸಾವಿರಾರು ಪ್ರಯಾಣಿಕರಿಗೆ ಯಾವುದೇ ಜನದಟ್ಟಣೆ ಇಲ್ಲದೆ ಸುಗಮವಾಗಿ ಪ್ರಯಾಣಿಕ್ಕೆ ಅನುಕೂಲವಾಗುತ್ತದೆ.ಇಷ್ಟೇ ಅಲ್ಲದೆ, ತಾಂತ್ರಿಕ ದೋಷ ಅಥವಾ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಸದಾ ಎರಡು ರೈಲುಗಳನ್ನು ಮೀಸಲಾಗಿಡಲು ನಿರ್ಧರಿಸಲಾಗಿದೆ.

Advertisement
Bengaluru Clinics: ಬೀದಿಬದಿ ವ್ಯಾಪಾರಿ, ವಾಹನ, ಕಸದ ನಂತರ ಕ್ಲಿನಿಕ್‌ಗಳ ಆಪರೇಷನ್‌ಗೆ ಮುಂದಾದ ಜಿಬಿಎ!

ಹಳದಿ ಮಾರ್ಗಕ್ಕೆ ಅಗತ್ಯವಿರುವ ರೈಲುಗಳನ್ನು ಪೂರೈಸುವ ಜವಾಬ್ದಾರಿ ಪಶ್ಚಿಮ ಬಂಗಾಳ ಮೂಲದ 'ಟಿಟಾಗರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್' ತೆಗೆದುಕೊಂಡಿದೆ. ಒಪ್ಪಂದದ ಪ್ರಕಾರ, ಇದೀಗ 14ನೇ ರೈಲು ತಲುಪಿರುವುದರಿಂದ, ಈ ಕಂಪನಿಯು ಇನ್ನು ಕೇವಲ ಒಂದು ರೈಲನ್ನು ಮಾತ್ರ ಪೂರೈಸು ಬಾಕಿಯಿದೆ.

ಇದರ ಜೊತೆಗೆ, 2027ರ ವೇಳೆಗೆ ಬಿಇಎಂಎಲ್ ಸಂಸ್ಥೆಯು ಹಳದಿ ಮಾರ್ಗಕ್ಕಾಗಿ ಹೆಚ್ಚುವರಿಯಾಗಿ ಆರು ಹೊಸ ರೈಲುಗಳನ್ನು ಪೂರೈಸುವ ಕಾರ್ಯವನ್ನು ಆರಂಭಿಸಲಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಹಳದಿ ಮಾರ್ಗದ ಪ್ರಯಾಣಿಕರ ಸಂಖ್ಯೆ ಹೆಚ್ಚಾದರೂ, ಅದಕ್ಕೆ ತಕ್ಕಂತೆ ರೈಲುಗಳ ಸಂಖ್ಯೆಯನ್ನೂ ಹೆಚ್ಚಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲು ಬಿಎಂಆರ್‌ಸಿಎಲ್ ಸಿದ್ಧತೆ ಮಾಡಿದೆ.

English Summary

Bengaluru's Namma Metro Yellow Line receives its 14th train set. With 15 trains expected soon, peak-hour frequency will improve to 5 minutes, offering huge relief to city commuters.