ಆಟೋ ಚಾಲಕನ ಸರಳತೆ, 'ಕನ್ನಡ-ಕೆನಾಡಾ' ಗೊಂದಲ: ವೈರಲ್ ಆಯ್ತು ಬೆಂಗಳೂರಿನ ಈ ವಿಡಿಯೋ


ಬೆಂಗಳೂರು: ಭಾರತದಲ್ಲಿ ಹೊಸ ಸ್ನೇಹಿತರನ್ನು ಮಾಡಿಕೊಳ್ಳುವುದು ತುಂಬಾ ಸುಲಭ ಎಂದು ಅಮೆರಿಕದ ಟ್ರಾವೆಲ್ ವ್ಲಾಗರ್ ಕ್ರಿಸ್ ರೋಡಿಗಸ್ ತಮ್ಮ ಇನಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋ ಇದೀಗ ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಆಟೋ ಚಾಲಕರೊಬ್ಬರೊಂದಿಗೆ ನಡೆದ ಸರಳ ಮತ್ತು ಆತ್ಮಿಯವಾದ ಮಾತುಕತೆ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

Advertisement

ಕ್ರಿಸ್ ಅವರು ವಿಡಿಯೊದಲ್ಲಿ ಆಟೋ ಚಾಲಕರನ್ನು ಚಿಕ್ಕಪೇಟೆಗೆ ಕರೆದುಕೊಂಡು ಹೋಗುವಂತೆ ಕೇಳುತ್ತಾರೆ. ಆದರೆ ಆಟೋ ಚಾಲಕರು "ಇಂದು ಶನಿವಾರ ಇನ್ನು ಸ್ವಲ್ಪ ಹೊತ್ತಿಗೆ ಶಾಲೆ ಮುಗಿಯುತ್ತದೆ, ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಬರಬೇಕು" ಎಂದು ವಿನಯದಿಂದ ಹೇಳುತ್ತಾರೆ. ಆಟೋ ಚಾಲಕರಿಗೆ ಇಂಗ್ಲಿಶ್ ಹೆಚ್ಚು ಮಾತನಾಡಲು ಬರದೆ ಇದ್ದರು ತಮ್ಮ ಪರಿಸ್ಥಿತಿಯನ್ನು ಸರಳವಾಗಿ ವಿವರಿಸುತ್ತಾರೆ.

Advertisement


ಆಟೋ ಚಾಲಕ ಹೇಳುವುದನ್ನು ಅರ್ಥಮಾಡಿಕೊಂಡ ಕ್ರಿಸ್ "ಇದಕ್ಕೆ ಯಾರೂ ರೈಡ್್ಗೆ ಬರುತ್ತಿಲ್ಲ" ಎಂದು ಹೇಳುತ್ತಾರೆ. ನಂತರ ಅದೇ ಆಟೋ ಚಾಲಕರು ಚಿಕ್ಕಪೇಟೆಗೆ ಹೇಗೆ ಹೋಗಬಹುದು ಎಂಬುದನ್ನು ವಿವರಿಸಿ ಹೇಳಿದ್ದಾರೆ, ಸ್ವಲ್ಪ ಮುಂದೆ ನಡೆದುಕೊಂಡು ಹೋದರೆ ಅಲ್ಲಿ ನಿಮಗೆ ಆಟೋ ಅಥವಾ ಕ್ಯಾಬ್ ಸಿಗಬಹುದು, ಇಲ್ಲವೆ ಊಬರ್ ಅಥವಾ ಓಲಾ ಮೂಲಕ ಬುಕ್ ಮಾಡಬಹುದು ಎಂದು ಸಲಹೆಯನ್ನು ನೀಡಿದ್ದಾರೆ.
ಪ್ರಸ್ತ, ಪೂಜೆ ಆಯಿತು, ಇದೀಗ ರೈಲಲ್ಲೇ ಎಣ್ಣೆ ಪಾರ್ಟಿ ವಿಡಿಯೋ ವೈರಲ್, ಪಾವಿತ್ರ್ಯತೆ ಕಳೆದು ಕೊಳ್ತಾ ಭಾರತೀಯ ರೈಲು
Advertisement

"ನನಗೆ ಭಾರತ ದೇಶ ತುಂಬಾ ಇಷ್ಟ" ಎಂದು ಕ್ರಿಸ್

ಮಾತುಕತೆ ಮುಗಿಸಿ ಹೊರಡುವ ಮುನ್ನ, ಆಟೋ ಚಾಲಕರು ತಮ್ಮಮೊಬೈಲ್್ನಲ್ಲಿ ವಿಡಿಯೋ ನೋಡುತ್ತಿರುವುದನ್ನು ಗಮನಿಸಿದ ಕ್ರಿಸ್, ತಮ್ಮ ಯುಟ್ಯೂಬ್ ಚಾನೆಲ್ ಮತ್ತು ಸಾಮಾಜಿಕ ಜಾಲತಾಣದ ಚಾನೆಲ್‌ಗಳನ್ನು ನೋಡಲು ಸಲಹೆ ನೀಡುತ್ತಾರೆ. ತಮ್ಮ ಚಾನೆಲ್ ಹೆಸರನ್ನು ಮೊಬೈಲ್್ನಲ್ಲಿ ಟೈಪ್ ಮಾಡಿ ತೋರಿಸಿದ್ದಾರೆ. ಈ ವೇಳೆ "ನನಗೆ ನಿಮ್ಮ ದೇಶ ತುಂಬಾ ಇಷ್ಟ" ಎಂದು ಕ್ರಿಸ್ ಹೇಳಿದಾಗ ಆಟೋ ಚಾಲಕರ ಮುಖದಲ್ಲಿ ನಗು ಮೂಡುತ್ತದೆ. ತಾವು ಫೇಸ್‌ಬುಕ್, ಯೂಟ್ಯೂಬ್ ಮತ್ತು ಇನಸ್ಟಾಗ್ರಾಂನಲ್ಲಿ ಇಂಗ್ಲಿಷ್‌ಲ್ಲಿ ವಿಡಿಯೋಗಳನ್ನು ಮಾಡುತ್ತೇನೆ ಎಂದು ಕ್ರಿಸ್ ತಿಳಿಸುತ್ತಾರೆ.

ಕನ್ನಡವನ್ನು 'ಕೆನಡಾ' ಎಂದು ಅರ್ಥ ಮಾಡಿಕೊಂಡ ವ್ಲಾಗರ್

ಮಾತುಕೆ ವೇಳೆ ಆಟೋ ಚಾಲಕರು, "ಕನ್ನಡದಲ್ಲಿ ವಿಡಿಯೋ ಮಾಡುತ್ತೀರಾ" ಎಂದು ಕೇಳುತ್ತಾರೆ. ಆದರೆ ಕ್ರಿಸ್, 'ಕನ್ನಡ' ಎಂಬುದನ್ನು 'ಕೆನಡಾ' ಎಂದು ತಪ್ಪಾಗಿ ಅರ್ಥ ಮಾಡಿಕೊಂಡು, "ನಾನು ಕೆನಡಾದಲ್ಲಿ ಎಂದಿಗೂ ವಿಡಿಯೋ ಮಾಡಿಲ್ಲ" ಎಂದು ಉತ್ತರಿಸುತ್ತಾರೆ. ಸ್ವಲ್ಪ ಸಮಯದ ಬಳಿಕ ಚಾಲಕರು 'ಕನ್ನಡ' ಭಾಷೆಯ ಬಗ್ಗೆ ಕೇಳಿದ್ದನ್ನು ಕ್ರಿಸ್ ಅರಿತುಕೊಳ್ಳುತ್ತಾರೆ. ಈ ಸಣ್ಣ ಗೊಂದಲವೂ ವಿಡಿಯೋವನ್ನು ಇನ್ನಷ್ಟು ಮನರಂಜನೆ ತಂದು ಕೊಟ್ಟಿದೆ.

Advertisement
ಐಟಿ ಉದ್ಯೋಗಕ್ಕಿಂತ ಕ್ಯಾಬ್ ಚಾಲಕನಾಗಿಯೇ ಹೆಚ್ಚು ಹಣ ದುಡಿಯುತ್ತೇನೆ ಎಂದ ಮಾಜಿ ಟೆಕ್ಕಿ: ಪೋಸ್ಟ್‌ ವೈರಲ್‌

ನೆಟ್ಟಿಗರಿಂದ ಮೆಚ್ಚುಗೆ

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದ್ದು, ಇನ್ನು ಹಲವು ನೆಟ್ಟಿಗರು ಬೆಂಗಳೂರಿನ ಜನರ ಆತ್ಮೀಯತೆ ಮತ್ತು ಸ್ನೇಹಪರ ಸ್ವಭಾವವನ್ನು ಹೊಗಳಿದ್ದಾರೆ. ಒಬ್ಬರು, "ಬೆಂಗಳೂರಿನವರಷ್ಟು ಆತ್ಮೀಯತೆಯನ್ನು ಯಾರೂ ತೋರಿಸುವುದಿಲ್ಲ" ಎಂದು ಕಾಮೆಂಟಿನಲ್ಲಿ ತಿಳಿಸಿದ್ದಾರೆ.

ಇನ್ನೊಬ್ಬರು "ಕರ್ನಾಟಕದ ಜನರು ಯಾವುದೇ ಭಾಷೆಯವರೊಂದಿಗೆ ಸುಲಭವಾಗಿ ಹೊಂದಿಕೊಳ್ಳುತ್ತಾರೆ" ಎಂದು ಬರೆದಿದ್ದಾರೆ.

ಮತ್ತೊಬ್ಬರು, "ಇಂಗ್ಲಿಷ್ ಮಾತನಾಡಲು ಚೆನ್ನಾಗಿ ಬರದಿದ್ದರೂ ಆಟೋ ಚಾಲಕ ಮಾತನಾಡಲು ಪ್ರಯತ್ನಿಸಿದ್ದೇ ಪ್ರಶಂಸನೀಯ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನೂ ಕೆಲವರು, ಇಬ್ಬರ ನಡುವೆ ಭಾಷೆಯ ಗೊಂದಲ ಇದ್ದರೂ ತಮ್ಮ ಮಾತನ್ನು ಪರಸ್ಪರ ಅರ್ಥ ಮಾಡಿಕೊಳ್ಳಲು ಮಾಡಿದ ಪ್ರಯತ್ನ ಈ ವಿಡಿಯೋದ ವಿಶೇಷ ಎಂದು ಹೇಳಿದ್ದಾರೆ.

Advertisement

English Summary

American travel vlogger: American travel vlogger Heartwarming Chat with a Bengaluru Auto Rickshaw driver has gone viral.