ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂಗು ಮುಚ್ಚಿಕೊಳ್ಳಿ, ಈತ ಸ್ನಾನ ಮಾಡಿ 37 ವರ್ಷ ಆಯ್ತು

By Mahesh
|
Google Oneindia Kannada News

Kailash Singh, Varanasi
ವಾರಣಾಸಿ : ಕಳೆದ 37 ವರ್ಷಗಳಿಂದ ಸ್ನಾನ ಮಾಡದೇ ಇರುವ ಚಥವ್ ಹಳ್ಳಿಯ ರೈತನೊಬ್ಬನು ವಿಶ್ವದಲ್ಲಿಯೇ ದುರ್ಗಂಧದ ವ್ಯಕ್ತಿ ಎನಿಸಿದ್ದಾನೆ. ಸುಮಾರು 3 ಮೀಟರ್ ಉದ್ದದ ತಲೆಗೂದಲು ಬೆಳೆಸಿರುವ ಕೈಲಾಸ್ ಸಿಂಗ್ (65) ಮೈ ಮೇಲಿನ ಕೊಳೆ ತೊಳೆಯುವ ಮನಸ್ಸು ಮಾಡಿಲ್ಲ. ಪುತ್ರ ಸಂತಾನ ಭಾಗ್ಯಕ್ಕಾಗಿ ಕಾದಿರುವ ಈತ ಎಲ್ಲಾ ಶಿವನಿಚ್ಛೆ ಎಂದು ಆಕಾಶ ನೋಡಿ ಕೈ ಮುಗಿಯುತ್ತಾನೆ.

ಶಿವನ ಅಪಾರ ಭಕ್ತನಾದ ಕೈಲಾಸ್ ಸಿಂಗ್, ದಿನನಿತ್ಯ ದನ ಕಾಯುತ್ತಾನೆ. ಸುಡು ಬಿಸಿಲೇ ಈತನ ದೈನಂದಿನ ಸ್ನಾನ. 47 ಡಿಗ್ರಿ ಸುಡು ಬಿಸಿಲಿರಲಿ ಕೊರೆಯುವ ಚಳಿ ಇರಲಿ, ಶಂಭೋ ಶಂಕರ ಭಂ ಭಂ ಬೋಲೆ ನಾಥ್ ಎಂದು ಗಾಂಜಾ ಸೇವಿಸುವುದು ಬಿಟ್ಟರೆ ಮತ್ತಿತ್ತರ ಯಾವುದೇ ದುಶ್ಚಟಗಳಿರಲಿಲ್ಲ. ವಾರಣಾಸಿಯ ಗಂಗಾತಟದಲ್ಲಿ ಸಾಧುಗಳ ಸಂಗ ಕೂತಿರುತ್ತಾನೆ.

ಪುತ್ರ ಸಂತಾನಕ್ಕಾಗಿ ಈ ವೇಷ: ಚಥವ್ ಗ್ರಾಮದ ಪುರೋಹಿತನೊಬ್ಬ, "ತಲೆಗೂದಲು ಕತ್ತರಿಸದೇ ಹಾಗೇಯೇ ಬಿಟ್ಟಲ್ಲಿ ನಿನಗೆ ಗಂಡು ಮಗು ಜನಿಸುತ್ತದೆ ಎಂದು ಸಲಹೆ ನೀಡಿದ್ದ. 1974ರಿಂದ ಸ್ನಾನ ಮಾಡುವ ಗೋಜಿಗೆ ಹೋಗಲಿಲ್ಲ. ಗಂಡನ ಹುಚ್ಚಾಟ ಕಂಡು ಹಣೆ ಬಡಿದು ಕೊಳ್ಳುವ ಆತನ ಪತ್ನಿ ಕಲಾವತಿ ದೇವಿ ಅನೇಕ ಸಾರಿ ಬಲವಂತವಾಗಿ ಸ್ನಾನ ಮಾಡಿಸಿ ವ್ರತ ಭಂಗ ಮಾಡಿಸಲು ಯತ್ನಿಸಿ ವಿಫಲರಾಗಿದ್ದಾರೆ.

ಎಷ್ಟೊ ಬಾರಿ ನಾನು ಆತನೊಂದಿಗೆ ಮಲಗಲು ನಿರಾಕರಿಸಿದ್ದು, ಅನ್ಯದಾರಿ ಕಾಣದೆ ಅವರ ಕಮಟು ಬೆವರಿನೊಂದಿಗೆ ರಾಜಿ ಮಾಡಿಕೊಂಡಿದ್ದೇನೆ. ಬಹುಶಃ ನಮಗೆ ಪುತ್ರನ ಪ್ರಾಪಿಯಾದಲ್ಲಿ ಮಾತ್ರ ಆತ ನಿರ್ಧಾರ ಬದಲಿಸಬಹುದು ಎನ್ನುತ್ತಾಳೆ ಕಲಾವತಿ ದೇವಿ.

ಊರಿನ ಬೀದಿಗೆ ಆತ ಕಾಲಿಟ್ಟಂತರಂತೂ ಜನ ಆಡಿಕೊಂಡು ನಗುತ್ತಿದ್ದಾರೆ. ಆದರೆ ಕೈಲಾಸ್ ಮಾತ್ರ ಯಾವುದಕ್ಕೂ ತಲೆಗೆಡಿಸದೆ ತನ್ನ ದೈನಂದಿನ ಚಟುವಟಿಕೆಯಲ್ಲಿ ತಲ್ಲೀನನಾಗಿರುತ್ತಾನೆ. ಪುತ್ರಿಯೊಬ್ಬಳು (16) ಶಾಲೆಯಲ್ಲಿ ಕಲಿಯುತ್ತಿದ್ದಾಳೆ. ತಂದೆಯ ಪ್ರಸಿದ್ಧಿಯಿಂದಾಗಿ ಇಡೀ ಶಾಲೆಯೇ ನಮ್ಮನ್ನು ಗುರುತಿಸುತ್ತಿದೆ ಎನ್ನುತ್ತಾಳೆ. ಇದು ಶಿವನ ಮೆಚ್ಚುಗೆ ಪಡೆಯಲು ಮಾಡುವ ಕಾರ್ಯ, ಮಗ ಹುಟ್ಟುವ ತನಕ ಸ್ನಾನ ಮಾಡುವುದಿಲ್ಲ ಎಂದು ಕೈಲಾಸ್ ಸ್ಪಷ್ಟವಾಗಿ ಹೇಳುತ್ತಾನೆ.

English summary
A farmer from Chatav village Varnasi has changed the saying cleanliness is next to godliness.Guru Kailash Singh(65) who quit bathing 37 years ago. He believes that he will be rewarded with son by Lord Shiva by not taking bath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X