
ಲಾಕ್‌ಡೌನ್ 2: ಯಾವ ಯಾವ ಚಟುವಟಿಕೆಗಳಿಗೆ ಅವಕಾಶ ಇದೆ?
ನವ ದೆಹಲಿ, ಏಪ್ರಿಲ್ 15: ಭಾರತದಲ್ಲಿ ಲಾಕ್‌ಡೌನ್ ಮುಂದುವರಿಕೆ ಆದ ಹಿನ್ನಲೆ ಗೃಹ ಸಚಿವಾಲಯ ಕೆಲವೊಂದು ಮಾರ್ಗಸೂಚಿಗಳನ್ನು ಇಂದು ನೀಡಿದೆ. ಜನರು ಯಾವ ಯಾವ ಚಟುವಟಿಕೆಗಳಲ್ಲಿ ಭಾಗಿಯಾಗಬಹುದು ಎಂದು ತಿಳಿಸಿದೆ. ಏಪ್ರಿಲ್ 20ರ ನಂತರ ಈ ಕೆಳಗಿನ ಹೆಚ್ಚುವರಿ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ.
ಲಾಕ್‌ಡೌನ್: ಖಾಸಗಿ ವಾಹನ ಸವಾರರಿಗೆ ಕೇಂದ್ರದ ಮಾರ್ಗಸೂಚಿ
*ಕೃಷಿ ಚಟುವಟಿಕೆಗಳು
*ಮೀನುಗಾರಿಕೆ
*ಪಶುಸಂಗೋಪನೆ
*ಆಯುಷ್ ಸೇರಿದಂತೆ ಆರೋಗ್ಯ ಸೇವೆಗಳು
*ಟೀ, ಕಾಫಿ ತೋಟಗಾರಿಕೆ ಕೆಲಸ. ಆದರೆ, ಗರಿಷ್ಠ 50% ರಷ್ಟು ಕಾರ್ಮಿಕರನ್ನು ಮಾತ್ರ ಬಳಸಿಕೊಳ್ಳಬೇಕು.
*ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ
*ಕೋಳಿ ಸಾಕಾಣಿಕೆ ಕೇಂದ್ರಗಳು ಮತ್ತು ಜಾನುವಾರು ಸಾಕಣೆ ಚಟುವಟಿಕೆಗಳು
*ಬ್ಯಾಂಕ್, ಎಟಿಎಂ
*ಅಂಗನವಾಡಿ
*ಆನ್ ಲೈನ್ ಶಿಕ್ಷಣ
*ಹೋಮ್ ಡೆಲಿವರಿ
ಲಾಕ್‌ಡೌನ್ ಮಾರ್ಗಸೂಚಿ: ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಬ್ಯಾಂಕ್ಗಳು
*MNREGA (Mahatma Gandhi National Rural Employment Guarantee Act) ಕೆಲಸಗಳಿಗೆ ಅನುಮತಿ.
*ಸರಕು ಮತ್ತು ಪರಿಹಾರ ಉದ್ದೇಶಗಳಿಗಾಗಿ ಮಾತ್ರ ವಿಮಾನ ಮತ್ತು ರೈಲು ಕಾರ್ಯಾಚರಣೆ.
* ಅನಾಥಾಶ್ರಮ, ಅಂಗವಿಕಲರು, ವಿಕಲಚೇತನರು, ಹಿರಿಯ ನಾಗರಿಕರು, ವಿಧವೆಯರು, ನಿರ್ಗತಿಕರಂತಹ ಸಾಮಾಜಿಕ ವಲಯದ ಕೆಲಸ.
*ಸ್ಥಳೀಯ, ಚಿಲ್ಲರೆ ವ್ಯಾಪಾರ, ಇ-ಕಾಮರ್ಸ್, ಪಡಿತರ ಅಂಗಡಿಗಳು
*ಸಾರ್ವಜನಿಕ ಉಪಯುಕ್ತತೆಗಳಾದ ತೈಲ ಮತ್ತು ಅನಿಲ ವಲಯ. ಉತ್ಪಾದನೆ, ವಿದ್ಯುತ್ ರವಾನೆ, ಅಂಚೆ ಕಚೇರಿಗಳು, ದೂರಸಂಪರ್ಕ, ಅಂತರ್ಜಾಲ ಸೇವೆಗಳು, ನೀರಿನ ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣಾ ಕ್ಷೇತ್ರಗಳು.