ಯಡಿಯೂರಪ್ಪನವರೆ ಸಿದ್ದರಾಮಯ್ಯ ಪತ್ರಕ್ಕೆ ಉತ್ತರವೇನು?

ಈ ವಿದ್ಯಮಾನ ಒಂದೆಡೆಯಾದರೆ ಕರ್ನಾಟಕದಲ್ಲಿ ಆಣೆ ಪ್ರಮಾಣ ಪ್ರಹಸನ ಎಂದೂ ಕಂಡರಿಯದ ವಿದ್ಯಮಾನಗಳಿಗೆ ಸಾಕ್ಷಿಯಾಯಿತು. ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ನಡುವಿನ ಜಟಾಪಟಿ ಮುಗಿದು ಮಾಮೂಲಿ ಆರೋಪ ಪ್ರತ್ಯಾರೋಪಗಳ ರಾಜಕೀಯಕ್ಕೆ ಹೊರಳಿದೆ. ಕಾಂಗ್ರೆಸ್ ಛತ್ರಿ ಹಿಡಿದುಕೊಂಡು ಹಳ್ಳಿಗಳ ಕಡೆಗೆ ಮುಖ ಮಾಡಲು ಸಿದ್ಧತೆ ನಡೆಸಿದೆ.
ಇದಕ್ಕೆ ಪ್ರತಿಯಾಗಿ ಮೂರು ವರ್ಷಗಳಲ್ಲಿ ತಮ್ಮ ಸರಕಾರ ಮಾಡಿರುವ ಸಾಧನೆಯ ಪಟ್ಟಿಯನ್ನು ಬುಧವಾರ, ಜೂ. 22ರಂದು ಯಡಿಯೂರಪ್ಪ ಮಾಧ್ಯಮದ ಮುಂದೆ ಬಿಚ್ಚಿಟ್ಟಿದ್ದಾರೆ. ಇಲ್ಲಿಯವರೆಗೆ ಮಾಡಿಕೊಂಡು ಬಂದಿರುವ ಸಾಧನೆ ಬುತ್ತಿ ಬಿಚ್ಚಿಟ್ಟು ತಮ್ಮ ಬೆನ್ನನ್ನು ತಾವೇ ಸವರಿಕೊಂಡಿದ್ದಾರೆ. ಆದರೆ, ಮುಂದೆ ಏನು ಮಾಡಲಿದ್ದಾರೆ? ಅದು ಪ್ರಶ್ನೆ.
ಇಂಥ ಸಮಯದಲ್ಲಿ, ತೆರಿಗೆ ವಂಚನೆ ಮಾಡಿದ್ದೀರೆಂದು ಆರೋಪಿಸಿದ್ದಕ್ಕಾಗಿ ಮುಖ್ಯಮಂತ್ರಿಗಳಿಂದ ಮಾನನಷ್ಟ ಮೊಕದ್ದಮೆ ಹಾಕಿಸಿಕೊಳ್ಳುವ ಎಚ್ಚರಿಕೆ ಪಡೆದಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಯಡಿಯೂರಪ್ಪನವರಿಗೆ ಒಂದು ಬಹಿರಂಗ ಪತ್ರ ಬರೆದಿದ್ದು, ಮುಂಗಾರು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರಿಗಾಗಿ, ಬಡವರಿಗಾಗಿ ಏನು ಮಾಡುತ್ತೀರೆಂದು ಕೇಳಿದ್ದಾರೆ.
ಬಡವರಿಗಾಗಿ ಘೋಷಿಸಲಾಗಿದ್ದ ಯೋಜನೆಗಳಲ್ಲಿ ಫಲಾನುಭವಿಗಳಿಗೆ ಏನೇನು ತಲುಪಬೇಕೆಂದು ವಿವರಗಳನ್ನು ಪತ್ರದಲ್ಲಿ ಸವಿಸ್ತಾರವಾಗಿ ನಮೂದಿಸಿದ್ದಾರೆ ಸಿದ್ದರಾಮಯ್ಯನವರು. ಆ ಪತ್ರದಲ್ಲಿ ಏನೇನಿದೆ? ಈ ಬಹಿರಂಗ ಪತ್ರದ ಸಂಪೂರ್ಣ ವಿವರ ಇಲ್ಲಿದೆ, ಓದಿರಿ.












Click it and Unblock the Notifications