ದೀಪಾವಳಿಗೆ ಸಿಹಿ ಸುದ್ದಿ: 6 ರಾಬಿ ಸೇರಿ ರೈತರ 23 ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರ
ಬೆಂಗಳೂರು, ಅಕ್ಟೋಬರ್ 18: ಕೇಂದ್ರ ಸರ್ಕಾರವು ಸಂಪುಟವು 2023-24 ಮಾರುಕಟ್ಟೆಗೆ ಋತುವಿಗಾಗಿ ಎಲ್ಲ ರಾಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಮಂಗಳವಾರ ಅನುಮೋದನೆ ನೀಡಿದೆ. ಈ ಮೂಲಕ ದೀಪಾವಳಿ ಹಬ್ಬಕ್ಕೆ ದೇಶದ ರೈತರಿಗೆ ಸಿಹಿ ಸುದ್ದಿ ಕೊಟ್ಟಿದೆ.
ರೈತರಿಂದ ಧಾನ್ಯವನ್ನು ಖರೀದಿಸುವ ದರವೇ ಬೆಂಬಲ ಬೆಲೆ (ಎಂಎಸ್‌ಪಿ) ಆಗಿದೆ. ಈಗ ಬೇಳೆ ಕಾಳುಗಳಿಗೆ 500ರೂ. ಬೆಂಬಲ ಬೆಲೆ ಹೆಚ್ಚಿಸಲಾಗಿದೆ. ರಾಬಿ ಬೆಳೆಗಳಲ್ಲಿ ಪ್ರಮುಖವಾದವು ಗೋಧಿ, ಸಾಸಿವೆ. ಕೇಂದ್ರದ ಮಾಹಿತಿ ಪ್ರಕಾರ 2023-24ರ ಋತುವಿಗಾಗಿ ಒಟ್ಟು ಆರು ರಾಬಿ ಬೆಳೆಗಳಿಗೆ ಬೆಂಬಲ ಬೆಲ ದೊರೆತಿದೆ.
ಈ ಬಗ್ಗೆ ಪ್ರಕಟಿಸಿದ ಕೇಂದ್ರ ಯುವ ವ್ಯವಹಾರ ಹಾಗೂ ಮಾಹಿತಿ ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ಖಾರೀಫ್ ಮತ್ತು ರಾಬಿ ಬೆಳೆಗಳು ಸೇರಿ ಒಟ್ಟು 23 ಬೆಳೆಗಳಿಗೆ ಬೆಂಬಲ ನೀಡಲು ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ ಎಂದರು.

2022-23ರಲ್ಲಿ ಪ್ರತಿ ಕ್ವಿಂಟಾಲ್ ಗೋಧಿಗೆ 2015 ರೂ. ಇದ್ದು, ಮುಂದಿನ ಹಂಗಾಮಿನಲ್ಲಿ (2023-24 ಜೂನ್-ಜುಲೈ) ಪ್ರತಿ ಕ್ವಿಂಟಾಲ್ ಗೋಧಿಗೆ 2125 ರೂ. ಏರಿಕೆ ಆಗಿರಲಿದೆ. ಈ ಮೂಲಕ ಗೋಧಿಗೆ ಪ್ರತಿ ಕ್ವಿಂಟಾಲ್‌ಗೆ 110 ರೂ. ಹೆಚ್ಚಿಸಲಾಗಿದೆ. ಕಳೆದ ಹಂಗಾಮಿನಲ್ಲಿ ಬಾರ್ಲಿ ಪ್ರತಿ ಕ್ವಿಂಟಾಲ್‌ಗೆ 1,635 ರೂ.ಇದ್ದದ್ದು, 100ರೂ. ಹೆಚ್ಚಿಸಿದ್ದರಿಂದ ಅದು ಮುಂದಿನ 2023-24ರ ಹಂಗಾಮಿನಲ್ಲಿ ಕ್ವಿಂಟಾಲ್‌ಗೆ 1,735 ರೂ.ಗೆ ಖರೀದಿಯಾಗಲಿದೆ.
ರೇಪ್‌ಸೀಡ್ (ಸಾಸಿವೆ ಜಾತಿಯ ಕಾಳು) ಮತ್ತು ಸಾಸಿವೆಗೆ ರೂ.400 ಮತ್ತು ಸೂರ್ಯಕಾಂತಿ ಬೀಜಗಳಿಗೆ ರೂ.209 ಬೆಂಬಲ ಬೆಲೆ ಏರಿಕೆ ಮಾಡಲಾಗಿದೆ. ಒಟ್ಟು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟವು ಖಾರಿಫ್ (ಬೇಸಿಗೆ) ಮತ್ತು ರಾಬಿ (ಚಳಿಗಾಲ) ಋತುವಿನಲ್ಲಿ ಬೆಳೆಯುವ ಒಟ್ಟು 23 ಬೆಳೆಗಳಿಗೆ ಎಂಎಸ್‌ಪಿ ಹೆಚ್ಚಿಸಿದೆ.

ರೈತರು ಬೆಳೆದ ಬೆಳೆಗೆ ಹೆಚ್ಚಿನ ಬೆಲೆ ಸಿಗಲಿದೆ
ಕೇಂದ್ರ ಸರ್ಕಾರದ ಈ ಬೆಂಬಲ ಬೆಲೆ ಹೆಚ್ಚಳ ನಿರ್ಧಾರದಿಂದ ಪ್ರಮುಖ ರಾಬಿ ಬೆಳೆಗಳ ಲಕ್ಷಾಂತರ ರೈತರು ನೇರ ಪ್ರಯೋಜನ ಪಡೆಯಲಿದ್ದಾರೆ. ಗೋಧಿ, ಬಾರ್ಲಿ, ಬೇಳೆ, ಸಾಸಿವೆ ಮತ್ತು ಸೂರ್ಯಕಾಂತಿ ದೇಶದಲ್ಲಿ ಬೆಳೆಯುವ ಐದು ಪ್ರಮುಖ ರಾಬಿ ಬೆಳೆಗಳು. ಇದನ್ನು ದೇಶದ ವಿವಿಧ ಭಾಗಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಈ ಬೆಳೆಗಳ ಎಂಎಸ್‌ಪಿ ಹೆಚ್ಚಳದಿಂದ ರೈತರು ಬೆಳೆದ ಬೆಳೆಗಳಿಗೆ ಹೆಚ್ಚಿನ ಬೆಲೆ ಸಿಗಲಿದೆ ಎಂದು ತಿಳಿದು ಬಂದಿದೆ.












Click it and Unblock the Notifications