ತೊಗರಿ, ಉದ್ದಿನ ಬೇಳೆಗಳ ಸಂಗ್ರಹಕ್ಕೆ ಮಿತಿ ಹೇರಿದ ಕೇಂದ್ರ
ಬೆಂಗಳೂರು, ಸೆಪ್ಟೆಂಬರ್ 26; ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ತೊಗರಿ ಮತ್ತು ಉದ್ದಿನ ಬೇಳೆಗಳ ಸಂಗ್ರಹಕ್ಕೆ ಹಾಕಿರುವ ಮಿತಿಯನ್ನು 2023ರ ಡಿಸೆಂಬರ್ 31ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ಆಹಾರ ಧಾನ್ಯಗಳು, ಬೇಳೆ ಕಾಳುಗಳನ್ನು ಹೆಚ್ಚಾಗಿ ಸಂಗ್ರಹಣೆ ಮಾಡಿ, ಮಾರುಕಟ್ಟೆಯಲ್ಲಿ ಕೃತಕ ಅಭಾವ ಉಂಟು ಮಾಡಿ, ಬೆಲೆ ಏರಿಕೆ ಮಾಡುವುದನ್ನು ತಪ್ಪಿಸಲು ಸರ್ಕಾರ ಮುಂದಾಗಿದೆ. ಆದ್ದರಿಂದ ಸಂಗ್ರಹದ ಮೇಲಿನ ಮಿತಿಯನ್ನು ವಿಸ್ತರಿಸಿದೆ.

ಸಗಟು ಮಾರಾಟಗಾರರು, ದೊಡ್ಡ ದೊಡ್ಡ ರಿಟೇಲ್ ಮಾರಾಟಗಾರರು, ಮಿಲ್‌ಗಳ ಮಾಲೀಕರು 1955ರ ಅಗತ್ಯ ವಸ್ತುಗಳ ಕಾಯ್ದೆ ಪ್ರಕಾರ ಮಿತಿಗಿಂತ ಹೆಚ್ಚು ಆಹಾರ ವಸ್ತುಗಳನ್ನು ಸಂಗ್ರಹ ಮಾಡಬಾರದು. ಮೊದಲು ಅಕ್ಟೋಬರ್ 30ರ ತನಕ ತೊಗರಿ ಮತ್ತು ಉದ್ದಿನ ಬೇಳೆಗಳ ಸಂಗ್ರಹಕ್ಕೆ ಮಿತಿ ಹೇರಲಾಗಿತ್ತು. ಈಗ ಅದನ್ನು ವಿಸ್ತರಣೆ ಮಾಡಲಾಗಿದೆ.
ಎಷ್ಟು ಸಂಗ್ರಹ ಮಾಡಬಹುದು?; ಕೇಂದ್ರ ಸರ್ಕಾರ ಸೋಮವಾರ ಹೊರಡಿಸಿದ ಹೊಸ ಆದೇಶದ ಪ್ರಕಾರ ಸಗಟು ಮತ್ತು ದೊಡ್ಡ ರೀಟೇಲ್ ಮಾರಾಟಗಾರರು ತೊಗರಿ ಮತ್ತು ಉದ್ದಿನ ಬೇಳೆಗಳ ಸಂಗ್ರಹ ಮಾಡಬಹುದಾದ ಮಿತಿಯನ್ನು 200 ಮೆಟ್ರಿಕ್ ಟನ್ನಿಂದ 50 ಮೆಟ್ರಿಕ್ ಟನ್ಗೆ ಇಳಿಕೆ ಮಾಡಲಾಗಿದೆ.
ಮಿಲ್ಗಳು ತಮ್ಮ ಕಳೆದ ಮೂರು ತಿಂಗಳ ಉತ್ಪಾದನೆ ಅಥವಾ ವಾರ್ಷಿಕ ಉತ್ಪಾದನಾ ಸಾಮರ್ಥ್ಯದ ಶೇ 25ರಷ್ಟು ಸಂಗ್ರಹ ಮಾಡಬಹುದಿತ್ತು. ಹೊಸ ಆದೇಶದಂತೆ ಮಿಲ್ಗಳು ಕಳೆದ ಒಂದು ತಿಂಗಳ ಉತ್ಪಾದನೆ ಅಥವಾ ವಾರ್ಷಿಕ ಉತ್ಪಾದನಾ ಸಾಮರ್ಥ್ಯದ ಶೇ 10ರಷ್ಟು ಭಾಗವನ್ನು ಮಾತ್ರ ಸಂಗ್ರಹಿಸಬಹುದಾಗಿದೆ.
ಈ ಆದೇಶವು ಡಿಸೆಂಬರ್ 31ರ ತನಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅನ್ವಯವಾಗುತ್ತದೆ. ಈಗಾಗಲೇ ಸರ್ಕಾರ ಗೋಧಿ ಸಂಗ್ರಹಕ್ಕೆ ಸಹ ಮಿತಿಯನ್ನು ಹೇರಿತ್ತು. ಈಗ ತೊಗರಿ, ಉದ್ದಿನ ಬೇಳೆ ಸಂಗ್ರಹಕ್ಕೆ ಮಿತಿಯನ್ನು ಹೇರಿ ಬೆಲೆ ಏರಿಕೆಗೆ ಕಡಿವಾಣ ಹಾಕಲು ಕ್ರಮ ಕೈಗೊಂಡಿದೆ.
ಅಲ್ಲದೇ ಕೇಂದ್ರ ಸರ್ಕಾರ ತನ್ನ ಆದೇಶದಲ್ಲಿ ಗ್ರಾಹಕ ವ್ಯವಹಾರಗಳ ಇಲಾಖೆಯ ಜಾಲತಾಣದಲ್ಲಿ ದಾಸ್ತಾನು ಮಾಹಿತಿಯನ್ನು ದಾಖಲಿಸುವಂತೆ ಸೂಚನೆ ನೀಡಲಾಗಿದೆ. ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಬೇಳೆ, ಕಾಳುಗಳನ್ನು ಖರೀದಿಸಿದ ಹೊಸ ದಾಸ್ತಾನುಗಳನ್ನು ನೀಡುತ್ತದೆ. ಆದರೆ ಕೃತಕ ಅಭಾವ ಸೃಷ್ಟಿ ಮಾಡುವುದು ತಡೆಯಲು ಕ್ರಮ ಕೈಗೊಳ್ಳುತ್ತದೆ.
ಈ ವರ್ಷ ಮುಂಗಾರು ಮಳೆಯ ಕೊರತೆಯ ಕಾರಣ ತೊಗರಿ, ಉದ್ದಿನ ಬೇಳೆ ಬೆಲೆಯಲ್ಲಿ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಸೆಪ್ಟೆಂಬರ್ 2ನೇ ವಾರದಲ್ಲಿ ಕರ್ನಾಟಕದ ಕಲಬುರಗಿಯ ಮಾರುಕಟ್ಟೆಯಲ್ಲಿ ತೊಗರಿ ಬೇಳೆ ಬೆಲೆಯು ಕ್ವಿಂಟಾಲ್‌ಗೆ 12,700 ಆಗಿತ್ತು. ಇದು ಸಾರ್ವಕಾಲಿಕ ಏರಿಕೆ ಎಂದು ವ್ಯಾಪಾರಸ್ಥರು ಹೇಳಿದ್ದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ತೊಗರಿ ಪ್ರಮುಖ ಬೆಳೆಯಾಗಿದೆ. ಕಳೆದ ವರ್ಷ ಇಲ್ಲಿ ತೊಗರಿ ಬೆಲೆ ಕ್ವಿಟಾಂಲ್‌ಗೆ 8,273 ರೂ.ಗೆ ಮಾರಾಟವಾಗಿತ್ತು. ಆದರೆ ಈ ಬಾರಿ ಭಾರೀ ದರ ಏರಿಕೆಯಾಗಿದ್ದು, ಇದರ ನೇರ ಪರಿಣಾಮ ಜನರ ಜೇಬಿನ ಮೇಲೆ ಬಿದ್ದಿತ್ತು.
ಈ ವರ್ಷದ ಜೂನ್‌ನಲ್ಲಿ ಕೇಂದ್ರ ಸರ್ಕಾರ ಬೆಲೆ ಏರಿಕೆ ನಿಯಂತ್ರಣ ಮಾಡಲು ತನ್ನ ಸಂಗ್ರಹದಲ್ಲಿರುವ ತೊಗರಿ ಬೇಳೆಯನ್ನು ಅರ್ಹ ಮಿಲ್‌ಗಳಿಗೆ ಮಾರಾಟ ಮಾಡುವುದಾಗಿ ಘೋಷಣೆ ಮಾಡಿತ್ತು. ಆಮದು ತೊಗರಿ ಮಾರುಕಟ್ಟೆ ತಲುಪುವ ತನಕ ತನ್ನ ಸಂಗ್ರಹದ ತೊಗರಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿತ್ತು.
-
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ












Click it and Unblock the Notifications