ಬಿಟಿ ಬದನೆ ಭವಿಷ್ಯ ಫೆ.10ಕ್ಕೆ: ಜೈರಾಮ್ ರಮೇಶ್

ಉತ್ಪಾದಕರು ಹಾಗೂ ಗ್ರಾಹಕರ ದೃಷ್ಟಿಯಿಂದ ನೋಡಿ ನಾನು ನಿರ್ಣಯ ಕೈಗೊಳ್ಳುತ್ತೇನೆ. ಯಾವುದೆ ವಿಜ್ಞಾನಿಗಳ ಗುಂಪು, ಸರ್ಕಾರೇತರ ಸಂಸ್ಥೆ ಅಥವಾ ರಾಜಕೀಯ ಪ್ರೇರಿತವಾಗಿ ನಿರ್ಧಾರ ಕೈಗೊಳುವುದಿಲ್ಲ ಎಂದರು. ಜೈರಾಮ್ ಅವರನ್ನುಕುಲಾಂತರಿ ಬದನೆ ಹೊರತಂದಿರುವ ಅಮೆರಿಕ ಮೂಲದ ಮೊನ್ಸಾಂಟೋ ಕಂಪೆನಿಯ ಎಜೆಂಟ್ ಎಂದು ಕೆಲ ರೈತ ಮುಖಂಡರು ಆರೋಪಿಸಿದಾಗ, ಕೋಪಗೊಂಡ ಸಚಿವರು, ನಾನು ಎಜೆಂಟ್ ಆಗಿದ್ದರೆ ಇಂದು ನಿಮ್ಮ ಮುಂದೆ ಕುಳಿತು ನಿಮ್ಮ ಸಲಹೆ ಸೂಚನೆ ಕೇಳುವ ಅಗತ್ಯ ಇರಲಿಲ್ಲ. ಅಸಂಬದ್ಧವಾಗಿ ಮಾತನಾಡುವುದನ್ನು ಬಿಡಿ. ಇಲ್ಲವೇ ವೈದ್ಯರಿಂದ ಮಾನಸಿಕ ಚಿಕಿತ್ಸೆ ಪಡೆಯಿರಿ ಎಂದರು.
ಕಳೆದ ಅಕ್ಟೋಬರ್ ನಲ್ಲಿ ಕುಲಾಂತರಿ ಬದನೆಯನ್ನು ವಾಣಿಜ್ಯ ಬೆಳೆಯಾಗಿ ಬೆಳಸಲು ಯಾವುದೇ ಅಡ್ಡಿಯಿಲ್ಲ ಎಂದು ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿತ್ತು. genetically modified (GM) ಬದನೆಗೆ Genetic Engineering Approval Committee ಕೂಡ ಒಪ್ಪಿಗೆ ನೀಡಿತ್ತು.ಆದರೆ, ಸಣ್ಣ್ಣ ಇಳುವರಿ ರೈತರಿಗೆ ಮಾರಕ, ಅಲ್ಲದೆ ಬಿಟಿ ಬದನೆ ಸೇವನೆ ಇಂದ ಆರೋಗ್ಯಕ್ಕೆ ಹಾನಿಕರ ಎಂದು ರೈತ ಸಂಘಟನೆಗಳು ವಾದಿಸುತ್ತಾ ಬಂದಿವೆ. ಇದಕ್ಕೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಜೈರಾಮ್ ರಮೇಶ್ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಮಾಹಿತಿ, ಸಾರ್ವಜನಿಕ ಅಭಿಪ್ರಾಯ ಸಂಗ್ರಹ ಕಾರ್ಯಕ್ಕೆ ಮುಂದಾಗಿದ್ದರು.
ಇಂದು ನಡೆದ ಸಂವಾದ ಕಾರ್ಯಕ್ರಮಕ್ಕೂ ಮುನ್ನ ಮಾನ್ಸಾಂಟೋ ಕಂಪೆನಿ ವಿರುದ್ಧ ಘೋಷಣೆ ಕೂಗುತ್ತಾ, ಸಚಿವರ ವಿರುದ್ಧ ಕೆಲ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಹೈದರಾಬಾದ್, ಕೋಲ್ಕತ್ತಾ ದಲ್ಲೂ ಕೂಡ ಜೈರಾಮ್ ರಮೇಶ್ ವಿರುದ್ಧ ರೈತರು ಪ್ರತಿಭಟನೆ ಮಾಡಿದ್ದರು. ಸಂವಾದ ಕಾರ್ಯಕ್ರಮದಲ್ಲೂ ಪ್ರತಿಭಟನೆಗೆ ರೈತರು ಮುಂದಾದಾಗ ಪೊಲೀಸರು ಎಚ್ಚರಿಕೆ ವಹಿಸಿ ಅವರನ್ನು ಹೊರ ಕಳಿಸಿದರು. ಕೆಲ ರೈತರು ಅಧಿಕ ಇಳುವರಿ ಹಾಗೂ ಆರ್ಥಿಕ ಭದ್ರತೆಯ ಕಾರಣ ಕೊಟ್ಟು ಬಿಟಿ ಬದನೆಗೆ ಓಕೆ ಅಂದರು.ಆದರೆ, ಭಾಗವಹಿಸಿದ್ದವರಲ್ಲಿ ಶೇ. 90 ರಷ್ಟು ಜನರ ಅಭಿಪ್ರಾಯ ಬಿಟಿ ಬದನೆ ವಿರುದ್ಧವಾಗಿತ್ತು. ಹಿರಿಯ ಸಾಹಿತಿ ಯುಆರ್ ಅನಂತಮೂರ್ತಿ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರು ಸಮಾರಂಭ ಮುಕ್ತಾಯಕ್ಕೂ ಮುನ್ನ ಆಗಮಿಸಿ, ರೈತರಿಗೆ ಬೆಂಬಲ ಸೂಚಿಸಿದರು.
-
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications