ಮಾವು ಸಸ್ಯ ಸಂರಕ್ಷಣೆ ಮತ್ತು ಪೂರಕ ಕ್ರಮಗಳ ಮಾಹಿತಿ
ಕೊಪ್ಪಳ, ಡಿಸೆಂಬರ್ 22; ಚಳಿಗಾಲ ಆರಂಭವಾಗಿದ್ದು ಮಾವಿನ ಮರಗಳು ಹೂ ಬಿಡುತ್ತಿವೆ. ಇಂತಹ ಸಂದರ್ಭದಲ್ಲಿ ಮಾವು ಬೆಳೆಗಾರರು ಕೈಗೊಳ್ಳಬೇಕಾಗಿರುವ ಸಸ್ಯ ಸಂರಕ್ಷಣಾ ಮತ್ತು ಪೂರಕ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ವಿವಿಧ ಕೀಟಬಾಧೆಯಿಂದ ಮಾವಿನ ಮರಗಳಿಗೆ ಹಾನಿಯಾಗುತ್ತದೆ. ಫಸಲು ಬರುವ ಸಂದರ್ಭದಲ್ಲಿ ಸಸ್ಯಗಳ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ಆದ್ದರಿಂದ ತೋಟಗಾರಿಕಾ ಇಲಾಖೆ ರೈತರಿಗೆ ಸಸ್ಯ ಸಂರಕ್ಷಣಾ ಕ್ರಮಗಳನ್ನು ಸೂಚಿಸಿದೆ.
ಹೂ ಬಿಡುವ ನಿಕಟ ಪೂರ್ವ ಸಸ್ಯ ಸಂರಕ್ಷಣಾ ಕ್ರಮಗಳು. ಕೀಟ ಹಾಗೂ ರೋಗ ಜಿಗಿಹುಳು, ಹೂತೆನೆ ಬುಡ ಕೊರಕ, ಥ್ರಿಪ್ಸ, ನುಸಿ, ಬೂದಿ ರೋಗ, ಕಾಡಿಗೆ ರೋಗದ ಶೇಷ, ಚಿಬ್ಬು ರೋಗ, ಹಿಟ್ಟು ತಿಗಣೆ ಒಟೆ ಕೊರಕ ರೋಗಗಳಿಗೆ ಸಿಂಪರಣಾ ಔಷಧಿಗಳು ಹೀಗಿವೆ.

ಥೈಯೋಮೆಥೋಕ್ಸಾಮ್ ಶೇ 25 WG-0.25 ಗ್ರಾಂ/ ಲೀ ನೀರಲ್ಲಿ ಕರಗುವ ಗಂಧಕ 80WP-3.0 ಗ್ರಾಂ/ ಲೀ. ಅಥವಾ ಇಮಿಡಾಕ್ಲೋಪ್ರಿಡ್ ಶೇ 17.8 SL-0.3 ಮಿ.ಲಿ/ಲೀ + ನೀರಲ್ಲಿ ಕರಗುವ ಗಂಧಕ 80WP-3.0 ಗ್ರಾಂ/ ಲೀ. ಅಥವಾ ಲಾಂಬ್ಡಾಸೈಹ್ಯಾಲೋಥ್ರಿನ್ 5.0 ಇಅ- 1.0ಮಿ.ಲಿ/ಲೀ ನೀರಲ್ಲಿ ಕರಗುವ ಗಂಧಕ 80WP-3.0 ಗ್ರಾಂ/ ಲೀ. ಅಥವಾ ಅಸಿಪೇಟ್ 75 SP-1.0 ಗ್ರಾಂ/ಲೀ ನೀರಲ್ಲಿ ಕರಗುವ ಗಂಧಕ 80WP-3.0 ಗ್ರಾಂ/ ಲೀ. ಸಿಂಪಡಿಸಬೇಕು.
ಈ ಹಂತದಲ್ಲಿ ಔಷಧಿಗಳ ಸಿಂಪರಣೆಯಿಂದ ಕೀಟ ರೋಗಗಳ ನಿಯಂತ್ರಣವಾಗುವುದರ ಜೊತೆಗೆ ಮುಂದಿನ ಹಂತದಲ್ಲಿ ಅವು ಉಲ್ಬಣಗೊಳ್ಳುವುದನ್ನು ತಪ್ಪುತ್ತದೆ. ಇಲ್ಲದಿದ್ದರೆ ಕಾಯಿ ಕಚ್ಚುವಿಕೆ ಕುಂಠಿತಗೊಂಡು ಇಳುವರಿ ಮೇಲೆ ಪ್ರಭಾವ ಬೀರುತ್ತದೆ.
ಮುಖ್ಯ ಹೂ ಬಿಟ್ಟ ಅವಧಿಯಲ್ಲಿ ಕೈಗೊಳ್ಳಬೇಕಾದ ಅಗತ್ಯ ಸಸ್ಯ ಸಂರಕ್ಷಣಾ ಕ್ರಮ. ಥೈಯೋಮೆಥೋಕ್ಸಾಮ್ ಶೇ 25 WG-0.25 ಗ್ರಾಂ/ ಲೀ +ಹೆಕ್ಸಕೊನಜೋಲ್ ಶೇ 5 ಇಅ-1.0ಮಿ.ಲಿ/ ಲೀ. ಅಥವಾ ಇಮಿಡಾಕ್ಲೋಪ್ರಿಡ್ ಶೇ 17.8 SL-0.3 ಮಿ.ಲಿ/ ಲೀ + ಥೈಯೋಪನ್ಶೆಟ್ ಮಿಥೈಲ್ (Thiophenate Methyl)ಶೇ 70 WP- 1.0 ಗ್ರಾಂ/ ಲೀ. ಅಥವಾ ಲಾಂಬ್ಡಾಸೈಹ್ಯಾಲೋಥ್ರಿನ್ 5.0 EC- 1.0ಮಿ.ಲಿ/ ಲೀ +ಡೈಫೆಂಕೊನಜಾಲ್ 25 EC- 1.0 ಮಿ.ಲಿ/ ಲೀ. ಅಥವಾ ಅಸಿಪೇಟ್ 75 SP-1.0 ಗ್ರಾಂ/ ಲೀ +ಟೆಬೂಕೋನಜಾಲ್ 25EC-0.5 ಮಿ.ಲಿ/ ಲೀ. ಸಿಂಪಡಿಸಬೇಕು.

ಈ ಅವಧಿಯಲ್ಲಿ ಮುಖ್ಯವಾಗಿ ಭಾದಿಸುವ ಕೀಟಗಳಲ್ಲಿ ಜಿಗಿಹುಳು, ಥ್ರಿಪ್ಸ್. ಮೈಟ್ಸ್, ಹೂತೆನೆ ಕ್ಯಾಟರ್ ಪಿಲ್ಲರ್, ಇತ್ಯಾದಿಗಳು. ರೋಗಗಳಲ್ಲಿ ಪ್ರಮುಖವಾದವುಗಳು ಹೂತೆನೆ ಕಪ್ಪಾಗುವ ರೋಗ, ಎಲೆ ಚುಕ್ಕೆ ರೋಗ, ಬೂದಿ ರೋಗ, ಕಾಡಿಗೆ ರೋಗ ಇತ್ಯಾದಿಗಳು. ಹೂತೆನೆ ಮತ್ತು ಹೂಗಳನ್ನು ಪರಿಣಾಮಕಾರಿಯಾಗಿ ಕಾಪಾಡಿಕೊಂಡರೆ ಕಾಯಿ ಕಚ್ಚುವ ಪ್ರಮಾಣ ಮತ್ತು ನಂತರದ ಇಳುವರಿ ಹೆಚ್ಚಾಗುತ್ತದೆ. ಆದ್ದರಿಂದ ಈ ಹಂತದಲ್ಲಿ ಸಿಂಪರಣಾ ಕ್ರಮಗಳನ್ನು ಪಾಲಿಸಬೇಕು ಎಂದು ಕರೆ ನೀಡಲಾಗಿದೆ.
ಮೇಲ್ಕಂಡ ಮೂರು ಹಂತದ ಪ್ರತಿ ಲೀಟರ್ ಸಿಂಪರಣಾ ದ್ರಾವಣಗಳಿಗೆ 0.5 ಮಿ.ಲೀ. ಶಾಂಪೋ ಅಥವಾ ಅಂಟನ್ನು ಬೆರೆಸಿ ಸಿಂಪರಿಸಬೇಕು, ಇದರಿಂದ ಸಿಂಪಡಿಸಿದ ದ್ರಾವಣ ಎಲೆ, ಹೂ ಗಳಿಗೆ ಚೆನ್ನಾಗಿ ಮೆತ್ತಿಕೊಳ್ಳುತ್ತದೆ.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ತಾಲೂಕು, ಜಿಲ್ಲಾ ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಅಥವಾ ಮಾವು ಅಭಿವೃದ್ಧಿ ನಿಗಮದ ಅಧಿಕಾರಿಗಳನ್ನು ಸಂಪರ್ಕಿಸಬಹುದೆಂದು ತೋಟಗಾರಿಕೆ ಉಪ ನಿರ್ದೇಶಕರು ಕರೆ ನೀಡಿದ್ದಾರೆ.
ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆ; ಕೊಪ್ಪಳ ಮೀನುಗಾರಿಕೆ ಇಲಾಖೆ ವತಿಯಿಂದ ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಒಂದು ವಾರದೊಳಗೆ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದಾಗಿದೆ.
ಜಿಲ್ಲೆಯ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯಿಂದ 2021-22ನೇ ಸಾಲಿನಲ್ಲಿ ಬಾಕಿ ಉಳಿದ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ವಿವಿಧ ಯೋಜನಾ ಘಟಕಗಳಾದ ಬಯೋಫ್ಲಾಕ್ ಕೊಳಗಳ ನಿರ್ಮಾಣ, ಮೀನುಮರಿ ಕೊಳಗಳ ನಿರ್ಮಾಣ ಮತ್ತು ಹೂಡಿಕೆ ವೆಚ್ಚ, ಆರ್.ಎ.ಎಸ್ ಘಟಕ ನಿರ್ಮಾಣ, ಅಕ್ವೇರಿಯಂ ಕಿಯೋಸ್ಕ ಸೈಕಲ್ ಮತ್ತು ಶಾಖ ನಿರೋಧಕ ಪೆಟ್ಟಿಗೆ ಖರೀದಿಗೆ ಸಹಾಯಧನ ನೀಡಲಾಗುತ್ತದೆ.
ವಿವಿಧ ಘಟಕಗಳಿಗೆ ಅರ್ಹ ಫಲಾನುಭವಿಗಳಿಂದ ಇಲಾಖೆಯ/ ಸರ್ಕಾರದ ನಿಬಂಧನೆಗಳಪಟ್ಟು ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಆಸಕ್ತರು ಒಂದು ವಾರದೊಳಗೆ ಅರ್ಜಿ ಸಲ್ಲಿಸಬೇಕು ಎಂದು ಮೀನುಗಾರಿಕೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.












Click it and Unblock the Notifications