ಜೂನ್ ನಿಂದ ಶೇ. 3 ರ ಬಡ್ಡಿದರದ ಸಾಲ

ಸಣ್ಣ ಮತ್ತು ಅತೀ ಸಣ್ಣ ರೈತರಿಗೆ 50 ಸಾವಿರ ರುಪಾಯಿವರೆಗೆ ಸಾಲ ನೀಡುವ ಯೋಜನೆಯನ್ನು ರಾಜ್ಯ ಸರಕಾರ ಕಳೆದ ಬಜೆಟ್ ನಲ್ಲಿ ಪ್ರಕಟಿಸಿತ್ತು. ಆದರೆ, ಅದರ ಅನುಷ್ಠಾನ ಚುನಾವಣೆಯಿಂದಾಗಿ ವಿಳಂಬವಾಗಿತ್ತು. ಚುನಾವಣೆಗಳು ಮುಗಿದಿರುವ ಹಿನ್ನೆಲೆಯಲ್ಲಿ ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದ್ದು, ಒಂದೆರಡು ದಿನಗಳಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಸವದಿ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.
ಸಹಕಾರ ಸಂಸ್ಥೆಗಳು ಮೂಲಕ 2008.09 ನೇ ಸಾಲಿನಲ್ಲಿ ಶೇ. 3ರ ಬಡ್ಡಿದರದಲ್ಲಿ 3,786 ಕೋಟಿ ರುಪಾಯಿ ಸಾಲ ನೀಡುವ ಗುರಿ ಹೊಂದಲಾಗಿತ್ತು. ಆದರೆ, ಸಾಲ ವಿತರಣೆ ಆಗಿರುವುದು ಕೇವಲ 3,290 (ಶೇ.80 ರಷ್ಟು) ಅಂದರೆ ಸುಮಾರು 13,17 ಲಕ್ಷ ರೈತರು ಸಾಲ ಪಡೆದಿದ್ದಾರೆ ಎಂದು ಅವರು ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications