ತೋಟಗಾರಿಕಾ ಇಲಾಖೆಯಿಂದ ಕೊಪ್ಪಳದಲ್ಲಿ ಸೆ.25ರಿಂದ ಮಧು ಮೇಳ

ಕೊಪ್ಪಳ, ಸೆಪ್ಟೆಂಬರ್ 19 : ಕೊಪ್ಪಳ ಜಿಲ್ಲೆಯ ತೋಟಗಾರಿಕೆ ಇಲಾಖೆಯು ಸೆ.25ರಿಂದ 'ಮಧು ಮೇಳ'ವನ್ನು ಆಯೋಜಿಸಿದೆ. ಜೇನು ಕೃಷಿ ಬಗ್ಗೆ ಅರಿವು ಮೂಡಿಸಲು ಮೂರು ದಿನಗಳ ಕಾಲ ಮಧು ಮೇಳ ಆಯೋಜನೆ ಮಾಡಲಾಗಿದೆ.

ಸೆ. 25 ರಿಂದ 27 ರ ತನಕ ಕೊಪ್ಪಳದ ತೋಟಗಾರಿಕೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಮಧು ಮೇಳ ನಡೆಯಲಿದೆ. ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳ ಉತ್ಪನ್ನವನ್ನು ಪರಾಗ ಸ್ಪರ್ಶದ ಮೂಲಕ ಹೆಚ್ಚಿಸುವ ಸಲುವಾಗಿ ಮತ್ತು ಜೇನು ಕೃಷಿ ಬಗ್ಗೆ ರೈತರಿಗೆ ಹೆಚ್ಚಿನ ಅರಿವು ಮೂಡಿಸಲು ಈ ಮೇಳ ಆಯೋಜಿಸಲಾಗಿದೆ.

Three days of honey mela in Koppal from September 25, 2017

ಮೇಳದಲ್ಲಿ ಜೇನಿನ ಔಷಧಿ ಗುಣಗಳ ಕುರಿತು, ವಿವಿಧ ಜೇನಿನ ತಳಿಗಳು ಮತ್ತು ಉತ್ಪನ್ನಗಳ ಉಪ ಕಸುಬಿನ ಬಗ್ಗೆ, ಕಲಬೆರಿಕೆ ಜೇನಿನ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತದೆ. ಮೇಳದಲ್ಲಿ ವಿವಿಧ ಜೇನಿನ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವೂ ನಡೆಯಲಿದೆ.

ಮೇಳಕ್ಕೆ ಪ್ರವೇಶ ಉಚಿತವಾಗಿದೆ. ಜಿಲ್ಲೆಯ ರೈತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜೇನು ಮೇಳದಲ್ಲಿ ಪಾಲ್ಗೊಳ್ಳಬೇಕು ಎಂದು ತೋಟಗಾರಿಕಾ ಇಲಾಖೆ ಮನವಿ ಮಾಡಿದೆ. ಮೇಳದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು 08539-231530 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+