ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ: ಈ ರೈತ ಕುಟುಂಬಗಳಿಗೆ ಹಣ ಸಿಗಲ್ಲವಾ?

|
Google Oneindia Kannada News

ನವದೆಹಲಿ, ಜುಲೈ 11: ಮೇ 31ರಂದು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ 11ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದರು. ಈ ಯೋಜನೆಯಡಿ 10 ಕೋಟಿಗೂ ಹೆಚ್ಚು ಫಲಾನುಭವಿ ರೈತ ಕುಟುಂಬಗಳಿಗೆ ಸುಮಾರು 21,000 ಕೋಟಿ ರುಪಾಯಿ ಬಿಡುಗಡೆ ಮಾಡಲಾಗಿದೆ. ಯೋಜನೆಗೆ ಅರ್ಹವಾಗಿರುವ ಪ್ರತಿಯೊಬ್ಬ ರೈತನ ಖಾತೆಗೂ 2000 ರುಪಾಯಿ ಜಮಾ ಮಾಡಲಾಗುತ್ತದೆ.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕಂತಿನ ಹಣವನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿದ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಮುಂಗಾರು ಮಳೆ; ಕಾಫಿ ಬೆಳೆ ರಕ್ಷಣೆಗೆ ರೈತರಿಗೆ ಸಲಹೆಗಳುಮುಂಗಾರು ಮಳೆ; ಕಾಫಿ ಬೆಳೆ ರಕ್ಷಣೆಗೆ ರೈತರಿಗೆ ಸಲಹೆಗಳು

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ, ಪ್ರತಿ ವರ್ಷ 6000 ರೂಪಾಯಿಗಳ ವಾರ್ಷಿಕ ನಗದು ವರ್ಗಾವಣೆಯನ್ನು ರೈತರಿಗೆ ಮೂರು ಕಂತುಗಳಲ್ಲಿ ವಿತರಿಸಲಾಗುತ್ತದೆ. ಮೊದಲ ಕಂತು ಏಪ್ರಿಲ್-ಜುಲೈ ನಡುವೆ, ಎರಡನೇ ಕಂತು ಆಗಸ್ಟ್-ನವೆಂಬರ್ ನಡುವೆ ಮತ್ತು ಮೂರನೇ ಕಂತು ಡಿಸೆಂಬರ್-ಮಾರ್ಚ್ ನಡುವೆ ಇರುತ್ತದೆ.

These Farmers Families Are Not Eligible For PM Kisan Benefit

ಫೆಬ್ರವರಿ 2019ರಲ್ಲಿ ಪಿಎಂ-ಕಿಸಾನ್ ಯೋಜನೆಯನ್ನು ಪ್ರಾರಂಭಿಸಿದಾಗ ಅದರ ಪ್ರಯೋಜನಗಳು 5 ಎಕರೆ (2 ಹೆಕ್ಟೇರ್) ವರೆಗೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ನಂತರ ಜೂನ್ 2019ರಲ್ಲಿ ಯೋಜನೆಯನ್ನು ಪರಿಷ್ಕರಿಸಲಾಯಿತು ಮತ್ತು ಅವರ ಜಮೀನುಗಳ ಪ್ರಮಾಣವನ್ನು ಲೆಕ್ಕಿಸದೆ ಎಲ್ಲಾ ರೈತ ಕುಟುಂಬಗಳಿಗೆ ವಿಸ್ತರಿಸಲಾಯಿತು.

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಪ್ರತಿ ವರ್ಷಕ್ಕೆ 6,000 ರೂಪಾಯಿಗಳ ಲಾಭವನ್ನು ದೇಶದ ಎಲ್ಲಾ 14.5 ಕೋಟಿ ರೈತರಿಗೆ ವಿಸ್ತರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರವು ರೈತರ ಭೂಹಿಡುವಳಿಯ ಗಾತ್ರವನ್ನು ಲೆಕ್ಕಿಸದೆ ಅಧಿಸೂಚನೆ ಹೊರಡಿಸಿದೆ.

ಇವರಿಗೆ ಪಿಎಂ-ಕಿಸಾನ್ ಯೋಜನೆಯ ಹಣ ಸಿಗಲ್ಲ; ಆದರೂ ಕೆಲವೊಂದು ರೈತ ಕುಟುಂಬಗಳು ಯೋಜನೆಯ ಲಾಭ ಪಡೆಯಲು ಅರ್ಹರಾಗಿರಲ್ಲ. ಸಾಂಸ್ಥಿಕ ಭೂಮಿ ಹೊಂದಿರುವವರು, ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ರೈತ ಕುಟುಂಬಗಳು, ಸೇವೆ ಸಲ್ಲಿಸುತ್ತಿರುವ ನೌಕರರು ಮತ್ತು ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವ ಸರ್ಕಾರಿ ಸ್ವಾಯತ್ತ ಸಂಸ್ಥೆಗಳಿಗೆ ಪಿಎಂ ಕಿಸಾನ್ ಯೋಜನೆಯ ಲಾಭ ದೊರೆಯುವುದಿಲ್ಲ.

ರೈತರಿಂದಲೇ ಬೆಳೆ ಸಮೀಕ್ಷೆ; ಬೆಳೆ ವಿವರ ದಾಖಲಿಸುವುದು ಹೇಗೆ?ರೈತರಿಂದಲೇ ಬೆಳೆ ಸಮೀಕ್ಷೆ; ಬೆಳೆ ವಿವರ ದಾಖಲಿಸುವುದು ಹೇಗೆ?

ವೈದ್ಯರು, ಇಂಜಿನಿಯರ್‌ಗಳು ಮತ್ತು ವಕೀಲರಂತಹ ವೃತ್ತಿಪರರು ಹಾಗೂ 10,000 ರೂ.ಗಿಂತ ಹೆಚ್ಚಿನ ಮಾಸಿಕ ಪಿಂಚಣಿ ಪಡೆಯುತ್ತಿರುವ ನಿವೃತ್ತ ಪಿಂಚಣಿದಾರರು ಮತ್ತು ಕಳೆದ ಮೌಲ್ಯಮಾಪನ ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಿದವರು ಸಹ ಪ್ರಯೋಜನಗಳಿಗೆ ಅರ್ಹರಲ್ಲ.

Recommended Video

Basavaraj Bommai ಇಂದಿನಿಂದ ಎರೆಡು ದಿನ ಕರಾವಳಿ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ | *Karnataka | OneIndia

English summary
Prime Minister Narendra Modi released the 11th tranche of funds under the Pradhan Mantri Kisan Samman Nidhi Yojana on May 31. About 21,000 crore rupees have been released to more than 10 crore beneficiary farmer families under this scheme. 2000 rupees will be credited to each farmer's account eligible for the scheme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X