ರೈತರಿಗೆ ಎದುರಾಯ್ತು ಭಾರೀ ಸಂಕಷ್ಟ, ಹೈನೋದ್ಯಮಕ್ಕೆ ಶಾಕಿಂಗ್ ಸುದ್ದಿ!

ಕರ್ನಾಟಕದ ರೈತರಿಗೆ ಇದೀಗ ಹೊಸ ಆತಂಕವೊಂದು ಎದುರಾಗಿದೆ. ರಾಜ್ಯದಲ್ಲಿ ಮುಂಗಾರು ಅವಧಿಯಲ್ಲಿ ಉತ್ತಮ ಮಳೆಯಾಗಿತ್ತು. ಇದೀಗ ಹಿಂಗಾರು ಅವಧಿಯಲ್ಲೂ ಉತ್ತಮ ಮಳೆಯಾಗಿದೆ. ಈ ನಡುವೆ ಕಳೆದ ವರ್ಷ ಎದುರಾಗಿದ್ದ ಗಂಭೀರ ಸಮಸ್ಯೆಯೊಂದು ಇದೀಗ ಮತ್ತೆ ಪ್ರಾರಂಭವಾಗಿದೆ ಅದೇನು ಎನ್ನುವ ವಿವರ ಇಲ್ಲಿದೆ.

ರಾಜ್ಯದ ಜಾನುವಾರುಗಳಲ್ಲಿ ಕಳೆದ ವರ್ಷ ತೀವ್ರವಾಗಿ ಕಾಡಿದ್ದ ಲಂಪಿಸ್ಕಿನ್‌ (ಚರ್ಮಗಂಟು) ರೋಗ ಮತ್ತೆ ಕಾಣಿಸಿಕೊಂಡಿದೆ. ಇದೀಗ ರಾಜ್ಯದಲ್ಲಿ ಮತ್ತೆ ಜಾನುವಾರುಗಳಲ್ಲಿ (ಹಸು ಸೇರಿದಂತೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಪ್ರಾಣಿಗಳು) ಚರ್ಮಗಂಟು ರೋಗ ಮತ್ತೆ ಹೆಚ್ಚಳವಾಗಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಕಳೆದ ವರ್ಷ ರಾಜ್ಯದಲ್ಲಿ ಸಾವಿರಾರು ಜಾನುವಾರುಗಳಲ್ಲಿ ಈ ರೋಗ ಕಾಣಿಸಿಕೊಂಡಿತ್ತು. ಅಲ್ಲದೇ ಭಾರತದಾದ್ಯಂತವೂ ಈ ರೋಗ ಕಾಣಿಸಿಕೊಂಡು ಲಕ್ಷಾಂತರ ಜಾನುವಾರುಗಳು ಸಾವನ್ನಪ್ಪಿದ್ದವು.

The farmers of the Karnataka are faced with great hardship

ಕರ್ನಾಟಕದ ಯಾದಗಿರಿ ಜಿಲ್ಲೆಯಲ್ಲಿ ಮತ್ತೆ ಈ ರೋಗ ಕಾಣಿಸಿಕೊಂಡಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಕಳೆದ ವರ್ಷ ಜಾನುವಾರುಗಳಲ್ಲಿ ಕಾಣಿಸಿಕೊಂಡಿದ್ದ ಚರ್ಮಗಂಟು ರೋಗದಿಂದಾಗಿ ಲಕ್ಷಾಂತರ ಜಾನುವಾರರು ಸಾವನ್ನಪ್ಪಿದ್ದವು. ಅಲ್ಲದೇ ಹೈನೋದ್ಯಮಕ್ಕೆ ಹಾಗೂ ಕೃಷಿ ಉಪ ಕಸುಬಿಗೆ ಭಾರೀ ಸಂಕಷ್ಟವೇ ಎದುರಾಗಿತ್ತು. ಇದೀಗ ಅದೇ ಮಾದರಿಯ ಸಂಕಷ್ಟ ಎದುರಾಗುವ ಆತಂಕ ಎದುರಾಗಿದೆ. ಕಳೆದ ವರ್ಷ ಜಾನುವಾರುಗಳಲ್ಲಿ ಚರ್ಮಗಂಟು ರೋಗದ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಜಾಗೃತಿ ಮೂಡಿಸಲಾಗಿತ್ತು. ಇದರ ಹೊರತಾಗಿಯೂ ಸಮಸ್ಯೆ ಕಡಿಮೆ ಆಗಿರಲಿಲ್ಲ. ಇದೀಗ ಮತ್ತೆ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ಪ್ರಾರಂಭಿಕ ಹಂತದಲ್ಲೇ ರೈತರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ.

ಯಾವ ಭಾಗದಲ್ಲಿ ಈಗ ಚರ್ಮಗಂಟು ರೋಗ: ರಾಜ್ಯದ ಯಾದಗಿರಿ ಜಿಲ್ಲೆಯಲ್ಲಿ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ಜಾನುವಾರುಗಳು ಸಾವನ್ನಪ್ಪುತ್ತಿವೆ. ಯಾದಗಿರಿ ಜಿಲ್ಲೆಯ ಕಂಚಗಾರನಹಳ್ಳಿಯ ತಾಂಡದಲ್ಲಿರುವ ಜಾನುವಾರುಗಳಲ್ಲಿ ಈ ರೋಗ ಕಾಣಿಸಿಕೊಂಡಿದೆ. ಚರ್ಮಗಂಟು ರೋಗ ಒಂದು ಜಾನುವರಾರಿನ ಮೂಲಕ ಮತ್ತೊಂದು ಜಾನುವಾರಿಗೆ ಹರಡುತ್ತದೆ. ಇದೇ ಕಾರಣಕ್ಕಾಗಿ ಈ ಬಗ್ಗೆ ಆತಂಕ ಇದೆ. ಚರ್ಮಗಂಟು ರೋಗ ಇರುವ ಜಾನುವಾರನ್ನು ಉಳಿದ ಜಾನುವಾರುಗಳು ಇರುವ ಕೊಟ್ಟಿಗೆಯಲ್ಲಿ ಕಟ್ಟಿದರೆ, ಆ ಜಾನುವಾರುವಿಗೂ ಚರ್ಮಗಂಟು ರೋಗ ಬರುವ ಸಾಧ್ಯತೆ ಇದೆ.

ನಾಲ್ಕು ಕರುಗಳ ದಾರುಣ ಸಾವು: ಇನ್ನು ಚರ್ಮಗಂಟು ರೋಗದಿಂದ ಯಾದಗಿರಿಯಲ್ಲಿ ರೈತರೊಬ್ಬರಿಗೆ ಸೇರಿದ ನಾಲ್ಕು ಕರುಗಳು ದಾರುಣವಾಗಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಜಾನುವಾರುಗಳಲ್ಲಿ ಚರ್ಮಗಂಟು ರೋಗ ಹೇಗೆ ವೇಗವಾಗಿ ಹಬ್ಬುತ್ತಿದೆ ಎನ್ನುವುದಕ್ಕೆ ಸಾಕ್ಷಿಯಂತೆ ಈ ಪ್ರಕರಣ ಇದೆ. ರಾಜ್ಯದ ಯಾದಗಿರಿಯಲ್ಲಿ ಮೊದಲ ಹಂತದಲ್ಲಿ ಈ ರೋಗ ಕಾಣಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಜಾನುವಾರುಗಳಿಗೂ ಈ ರೋಗ ಹಬ್ಬಲಿದೆಯೇ ಎನ್ನುವ ಆತಂಕ ಶುರುವಾಗಿದೆ.

The farmers of the Karnataka are faced with great hardship

ಇನ್ನು ಯಾದಗಿರಿಯಲ್ಲಿ ಮೊದಲು ಒಂದು ಕರುವಿನಲ್ಲಿ ಈ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ಆ ಕರುವಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲೇ ಇನ್ನುಳಿದ ಮೂರು ಜಾನುವಾರುಗಳಿಗೂ ಚರ್ಮಗಂಟು ರೋಗ ಕಾಣಿಸಿಕೊಂಡಿದೆ. ಇದರಿಂದ ನಾಲ್ಕೂ ಕರುಗಳು ದಾರುಣವಾಗಿ ಸಾವನ್ನಪ್ಪಿದ್ದು. ರೈತ ಆಘಾತಕ್ಕೆ ಒಳಗಾಗಿದ್ದಾನೆ. ಒಂದು ವಾರದ ಅವಧಿಯಲ್ಲಿ ರೈತರೊಬ್ಬರಿಗೆ ಸೇರಿದ ನಾಲ್ಕೂ ಕರುಗಳು ಚರ್ಮಗಂಟು ರೋಗದಿಂದ ಸಾವನ್ನಪ್ಪಿರುವುದು ಆಘಾತಕ್ಕೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+