ಇನ್ಮೇಲೆ ರೈತರಿಗೆ ಮೊಬೈಲಿನಲ್ಲೇ ಸಿಗಲಿದೆ ಹವಾಮಾನ ವರದಿ
ರೈತರಿಗೆ ಹವಾಮಾನದ ಬದಲಾವಣೆಗಳ ಕುರಿತು ಮೊದಲೇ ಮಾಹಿತಿ, ಮುನ್ಸೂಚನೆ ನೀಡಬಲ್ಲ ಸಂದೇಶವೊಂದನ್ನು ಅವರ ಮೊಬೈಲ್ ಗಳಿಗೆ ಮುಂಚಿತವಾಗಿಯೇ ಕಳಿಸುವ ಹೊಸ ಯೋಜನೆಯನ್ನು ರಾಜ್ಯ ಸರ್ಕಾರ ಆರಂಭಿಸಲಿದೆ.
ಬೆಂಗಳೂರು, ಮೇ 31: ಹವಾಮಾನದ ವೈಪರೀತ್ಯಗಳ ನೇರ ಪರಿಣಾಮವನ್ನು ಮೊಟ್ಟಮೊದಲನೆಯದಾಗಿ ಎದುರಿಸುವವರು ರೈತರೇ. ಆದ್ದರಿಂದ ಅವರಿಗೆ ಹವಾಮಾನದ ಬದಲಾವಣೆಗಳ ಕುರಿತು ಮೊದಲೇ ಮಾಹಿತಿ, ಮುನ್ಸೂಚನೆ ನೀಡಬಲ್ಲ ಸಂದೇಶವೊಂದನ್ನು ಅವರ ಮೊಬೈಲ್ ಗಳಿಗೆ ಮುಂಚಿತವಾಗಿಯೇ ಕಳಿಸುವ ಹೊಸ ಯೋಜನೆಯನ್ನು ರಾಜ್ಯ ಸರ್ಕಾರ ಆರಂಭಿಸಲಿದೆ.
ಪ್ರತಿದಿನವೂ ಹವಾಮಾನದ ಮುನ್ಸೂಚನೆಯನ್ನು ಪಡೆಯಲಿರುವ ರೈತರು ಅದಕ್ಕೆ ತಕ್ಕಂತಗೆ ತಮ್ಮ ಕೆಲಸ ಕಾರ್ಯಗಳನ್ನು ಪಟ್ಟಿಮಾಡಿಕೊಳ್ಳಬಹುದಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಪರಿಚಯಿಸಿದ ವಿವಿಧ ಕೃಷಿ ಯೋಜನೆಗಳಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡ ರೈತರಷ್ಟೇ ಈ ಹೊಸ ಯೋಜನೆಯ ಫಲಾನುಭವಿಗಳಾಗಲಿದ್ದಾರೆ.

ಸಂದೇಶಗಳು ಪ್ರಾದೇಶಿಕ ಭಾಷೆಗಳಲ್ಲಿಯೇ ಇರುವುದರಿಂದ ರೈತರಿಗೆ ಮತ್ತಷ್ಟು ಸಹಾಯವಾಗಲಿದೆ.[ಸಿಡಿಲು ಮುನ್ಸೂಚನೆಗೆ ರಾಜ್ಯ ಸರ್ಕಾರದಿಂದ ವಿನೂತನ ಆಪ್]
ಎರಡು ದಿನ ಮೊದಲೇ ಮಳೆಯ ಮುನ್ಸೂಚನೆಯನ್ನೂ ಸಂದೇಶದ ಮೂಲಕ ನೀಡಲಾಗುತ್ತದೆ. ಈ ಯೋಜನೆಯು ಅರ್ಥ್ ಸಿಸ್ಟಮ್ ಸೈನ್ಸ್ ಆರ್ಗನೈಸೇಶನ್ ಮತ್ತು ಭಾರತೀಯ ಹವಾಮಾನ ಇಲಾಖೆಯ ಗ್ರಾಮೀಣ ಕೃಷಿಮಾಸಮ್ ಸೇವಾ ಯೋಜನೆಯ ಭಾಗವಾಗಿದೆ.
ರಾಜ್ಯ ಕೃಷಿ ವಿಶ್ವವಿದ್ಯಾಲಯಗಳು, ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ಭಾರತೀಯ ತಾಂತ್ರಜ್ಞಾನ ಇಲಾಖೆಗಳ ಸಹಯೋಗದಲ್ಲಿ ಈ ಯೋಜನೆ ಜಾರಿಯಾಗುತ್ತಿದೆ.












Click it and Unblock the Notifications