ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ತೀವ್ರ ಉಷ್ಣಾಂಶವಿಲ್ಲ: ಅಧಿಕ ಗೋಧಿ ಇಳುವರಿ ನಿರೀಕ್ಷೆ

|
Google Oneindia Kannada News

ಬೆಂಗಳೂರು, ಡಿಸೆಂಬರ್ 23: ಭಾರತದಲ್ಲಿ ಪ್ರಸ್ತುತದಲ್ಲಿರುವ ತಾಪಮಾನವು ಬೆಳೆಗಳಿಗೆ ಪೂರಕವಾಗಿದೆ. ಇದರಿಂದ ಹೆಚ್ಚಿನ ಇಳುವರಿಗೆ ಅನುಕೂಲಕರವಾಗಿದ್ದು, ಬೆಳೆಗಳ ಬೆಳವಣಿಗೆ ಉತ್ತಮವಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿ ರಾಬಿ ಋತುವಿನ ಪ್ರಮುಖ ಬೆಳೆಯಾದ ಗೋಧಿ ಈ ವರ್ಷ ನಿರೀಕ್ಷೆಗಿಂತ ಹೆಚ್ಚು ಫಸಲು ಬರಲಿದೆ ಎಂದು ಕೇಂದ್ರ ಕೃ ಸಷಿ ಸಚಿವಾಲಯ ಕಾರ್ಯದರ್ಶಿ ಮನೋಜ್ ಅಹುಜಾ ತಿಳಿಸಿದರು.

ಕೃಷಿ ಸಚಿವಾಲಯದ ನೀಡಿರುವ ಅಂಕಿಅಂಶಗಳ ಪ್ರಕಾರ, ರಾಬಿ ಋತು ಪ್ರಾರಂಭವಾದ ನಂತರ ಅಕ್ಟೋಬರ್‌ನಿಂದ ಕಳೆದ ವಾರದವರೆಗೆ ಒಟ್ಟು 286.5ಲಕ್ಷ ಹೆಕ್ಟೇರ್‌ಗಳಲ್ಲಿ ಗೋಧಿ ಬೆಳೆಯಲಾಗಿದೆ. ಈ ಮೂಲಕ ಪ್ರಸಕ್ತ ಸಾಲಿನಲ್ಲಿ ಶೇಕಡಾ 3 ರಷ್ಟು ಹೆಚ್ಚು ಗೋಧಿ ಬೆಳೆಯಲಾಗಿದೆ.

Assembly Session 2022: ಕೃಷಿ ಭೂಮಿ ಪರಿವರ್ತಿಸುವ ಕರ್ನಾಟಕ ಭೂ ಕಂದಾಯ ಮಸೂದೆ' ಮಂಡನೆAssembly Session 2022: ಕೃಷಿ ಭೂಮಿ ಪರಿವರ್ತಿಸುವ ಕರ್ನಾಟಕ ಭೂ ಕಂದಾಯ ಮಸೂದೆ' ಮಂಡನೆ

ಗೋಧಿ ಬೆಳೆ ನಿರೀಕ್ಷೆಯು ಉಜ್ವಲವಾಗಿದೆ. ಪ್ರಸ್ತುತ ಹವಾಮಾನವು ಸಸ್ಯಗಳ ಬೆಳವಣಿಗೆ ಮತ್ತು ಉತ್ತಮ ಇಳುವರಿಗೆ ಸಹಕಾರಿಯಾಗಲಿದೆ. '2023ರ ಅಂತಾರಾಷ್ಟ್ರೀಯ ರಾಗಿ ವರ್ಷ' ಪ್ರಯುಕ್ತ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ರಾಗಿ ಉಪಾಹಾರ ಕೂಟದಲ್ಲಿ ಅಹುಜಾ ಅವರು ಪಿಟಿಐಗೆ ಮಾಹಿತಿ ನೀಡಿದರು.

Temerature Of Weather Is Supported For Good Growing Of Wheat In India.

ಹೆಚ್ಚು ಬೆಲೆ ನಿರೀಕ್ಷೆಯಿಂದ ಅಧಿಕ ಬಿತ್ತನೆ

ದೇಶದಲ್ಲಿ ಕಳೆದ ವರ್ಷದಂತೆ ಈ ವರ್ಷವು ಗೋಧಿ ಬೆಳೆಯುವ ರಾಜ್ಯಗಳಲ್ಲಿ ಇದುವರೆಗೆ ಯಾವುದೇ ತೀವ್ರ ತಾಪಮಾನದ ವರದಿಗಳಿಲ್ಲ. ಹೀಗಾಗಿಯೇ ಅತ್ಯಧಿಕ ಬೆಳೆ ನಿರೀಕ್ಷೆ ಮಾಡಲಾಗುತ್ತಿದೆ. ರಫ್ತು ಬೇಡಿಕೆಯ ನಡುವೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಗಿಂತ ಹೆಚ್ಚಿನದರ ಪಡೆಯುವ ನಿರೀಕ್ಷೆಯಲ್ಲಿ ರೈತರು ಈ ವರ್ಷ ಗೋಧಿ ಬೆಳೆ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ ಕೇಂದ್ರ ಕೃಷಿ ಸಚಿವಾಲಯದ ಇನ್ನೊಬ್ಬ ಅಧಿಕಾರಿ ಹೇಳಿದರು.

ಕಳೆದ 2021-22ರ ಸಾಲಿನ ಬೆಳೆ ವರ್ಷದಲ್ಲಿ, ಗೋಧಿ ಬೆಳೆಯುವ ರಾಜ್ಯಗಳಲ್ಲಿನ ಶಾಖದ ಅಲೆಗಳಿಂದಾಗಿ ದೇಶೀಯ ಉತ್ಪಾದನೆಯು ಅದರ ಹಿಂದಿನ ವರ್ಷಕ್ಕಿಂತ (109.59 ಮಿಲಿಯನ್ ಟನ್‌) 106.84 ಮಿಲಿಯನ್ ಟನ್‌ಗಳಿಗೆ ಇಳಿಕೆ ಕಂಡಿತ್ತು. ಪರಿಣಾಮವಾಗಿ ದೇಶೀಯ ಉತ್ಪಾದನೆಯಲ್ಲಿನ ಕುಸಿತ ಮತ್ತು ಖಾಸಗಿ ಪಕ್ಷಗಳ ಆಕ್ರಮಣಕಾರಿ ಖರೀದಿಗಳಿಂದಾಗಿ ಸರ್ಕಾರಿ ಸ್ವಾಮ್ಯದ ಎಫ್‌ಸಿಐನಿಂದ ಗೋಧಿ ಸಂಗ್ರಹಣೆ ಕುಸಿಯಿತು. 2022-23 ಮಾರುಕಟ್ಟೆ ವರ್ಷದಲ್ಲಿ 434.44 ಲಕ್ಷ ಟನ್‌ಗಳಿಂದ 187.92 ಲಕ್ಷ ಟನ್‌ನಷ್ಟು ಕಡಿಮೆ ಪ್ರಮಾಣದಲ್ಲಿ ಗೋಧಿ ಸಂಗ್ರಹ ಸಾಧ್ಯವಾಯಿತು ಎಂದರು.

Temerature Of Weather Is Supported For Good Growing Of Wheat In India.

ಈ ವರ್ಷದ ಮೇ ತಿಂಗಳಲ್ಲಿ ದೇಶೀಯ ಸರಬರಾಜುಗಳನ್ನು ಹೆಚ್ಚಿಸಲು ಮತ್ತು ಬೆಲೆಗಳನ್ನು ನಿಯಂತ್ರಿಸಲು ಸರ್ಕಾರವು ಗೋಧಿಯ ರಫ್ತುಗಳನ್ನು ನಿಷೇಧಿಸಿತು. ನಿಷೇಧವಾದ ಬಳಿಕ ಸಗಟು ಪ್ರತಿ ಕೇಜಿಗೆ ಗೋಧಿಯ ಬೆಲೆ 30ರೂ.ಗೆ ಹೆಚ್ಚಾಯಿತು.

English summary
Temperature of Weather is Supported for good growing of Wheat in India, Secretary of Union Agriculture ministery Manoj Ahuja Said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X