ರೈತರ ಜತೆ ಒಂದು ದಿನ ಕಳೆಯಲು ಇಲ್ಲಿದೆ ಅವಕಾಶ
ಬೆಂಗಳೂರು, ಡಿಸೆಂಬರ್ 15: ಟಿಎಎಫ್‍ಇ - ಟ್ರಾಕ್ಟರ್ಸ್ ಅಂಡ್ ಫಾರಂ ಎಕ್ವಿಪ್‍ಮೆಂಟ್ ಲಿಮಿಟೆಡ್ ಇವರು ಬೆಂಗಳೂರಿನ ಹೊರಭಾಗದಲ್ಲಿರುವ ಗೋರಂಟ್ಲದಲ್ಲಿನ ಹೊಸಚಿಗುರು ಇಓಎಸ್ ಫಾರಂನಲ್ಲಿ 17ನೇ ಡಿಸೆಂಬರ್ 2017ರಂದು ಭಾನುವಾರ ತನ್ನ #FarmDost ಎಂಬ ಹ್ಯಾಷ್‍ಟ್ಯಾಗ್ ಹೊಂದಿರುವ ಸಾಮಾಜಿಕ ಕಳಕಳಿಯ ಅಂಗವಾಗಿ ರಾಷ್ಟ್ರೀಯ ರೈತರ ದಿನವನ್ನು ಆಚರಿಸುತ್ತಿದೆ.
ಈ ಕಾರ್ಯಕ್ರಮ ಬೆಂಗಳೂರು ನಗರದ ನಾಗರಿಕರಿಗೆ ಒಂದು ದಿವಸದ ಮಟ್ಟಿಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಲು, ರೈತ ಸಮುದಾಯದೊಂದಿಗೆ ಮಾತುಕತೆ ನಡೆಸಲು ಮತ್ತು ಒಂದು ದಿನದ ಮಟ್ಟಿಗೆ ರೈತಾಪಿ ಜೀವನ ನಡೆಸಲು ಅವಕಾಶ ಕಲ್ಪಿಸುತ್ತದೆ.

ರೈತರ ಪರಿಶ್ರಮವೇ ನಮ್ಮೆಲ್ಲರ ಬದುಕನ್ನು ಹಸನಾಗಿಸಿರುವುದು. ಈ ಹಿನ್ನೆಲೆಯಲ್ಲಿ ಟಿಎಎಫ್‍ಇ ಸಂಸ್ಥೆಯ ಫಾರ್ಮ್ ದೋಸ್ತ್ ಉಪಕ್ರಮವು ಎಲ್ಲ ಕ್ಷೇತ್ರದ ಜನರೂ ರೈತಾಪಿ ವರ್ಗದವರಿಗೆ ತಮ್ಮ ಕೃತಜ್ಞತೆ ಸಲ್ಲಿಸಲು ಪ್ರೋತ್ಸಾಹಿಸುತ್ತದೆ.
ನಗರ ಮತ್ತು ಗ್ರಾಮೀಣ ಬದುಕುಗಳ ನಡುವೆ ಸಂಬಂಧ ಏರ್ಪಡಿಸುವ ಟಿಎಎಫ್‍ಇಯ ಈ ವಿಶೇಷ ಉಪಕ್ರಮವು ನಗರ ಪ್ರದೇಶದ ಮಹಿಳೆಯರು ಹಾಗೂ ಪುರುಷರು ಮಣ್ಣಿಗೆ ಸಮೀಪದಲ್ಲಿ ಬದುಕಲು ಅವಕಾಶ ಕಲ್ಪಿಸುತ್ತದೆ.
ನಗರ-ಗ್ರಾಮೀಣ ಪ್ರದೇಶದವರು ಪರಸ್ಪರರನ್ನು ಅರ್ಥ ಮಾಡಿಕೊಂಡು ಪರಸ್ಪರರಿಗೆ ನೆರವಾಗಲು ಹಾಗೂ ರೈತಸಮುದಾಯ ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳಲು ನೆರವಾಗುತ್ತದೆ.
ಇಡೀ ದಿವಸ ನಡೆಯುವ ಈ ಕಾರ್ಯಕ್ರಮದಲ್ಲಿ ಸಸಿ ನಡುವಿಕೆ, ಸಾವಯವ ಗೊಬ್ಬರದ ತಯಾರಿಕೆ, ವ್ಯವಸಾಯ ಮತ್ತು ತಮ್ಮ ತಂಡದ ಸದಸ್ಯರು ಹಾಗೂ ಮಾರ್ಗದರ್ಶಕರಾದ ರೈತರೊಂದಿಗೆ ತಮ್ಮದೇ ಮಿನಿ ಫಾರಂ ನಿರ್ಮಾಣ ಮುಂತಾದ ಚಟುವಟಿಕೆಗಳು ನಡೆಯಲಿವೆ.
ಆ ದಿವಸ ಸ್ಥಳೀಯರು ಹಾಗೂ ಹಳ್ಳಿಯ ರೈತ ಸಮುದಾಯ ಸ್ಥಳದಲ್ಲಿ ಹಾಜರಿದ್ದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಮಾರ್ಗದರ್ಶನ ನೀಡುತ್ತಾರೆ, ತಮ್ಮ ಪರಿಶ್ರಮವನ್ನು ಮತ್ತು ಅನುಭವವನ್ನು ವಿವರಿಸಿ ಪ್ರೋತ್ಸಾಹ ತುಂಬುತ್ತಾರೆ.
ಬೆಂಗಳೂರು ನಗರದ ನೋಂದಾಯಿತ ಅತಿಥಿಗಳನ್ನು ನಿಗದಿತ ಪಿಕಪ್ ಪಾಯಿಂಟ್‍ಗಳಿಂದ ಮುಂಜಾನೆ ಪಿಕಪ್ ಮಾಡಲಾಗುವುದು ಮತ್ತು ಸಂಜೆ ಅದೇ ಸ್ಥಳದಲ್ಲಿ ಬಿಡಲಾಗುವುದು. ಪಾಲ್ಗೊಳ್ಳುವವರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ಚಹಾ ಒದಗಿಸಲಾಗುವುದು. ಇದಕ್ಕೆಲ್ಲ ಯಾವುದೇ ಶುಲ್ಕ ಇರುವುದಿಲ್ಲ.












Click it and Unblock the Notifications