ಭಾರತದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಈ ವರ್ಷ ಶೇ.5.1ರಷ್ಟು ಪ್ರಗತಿ
ಬೆಂಗಳೂರು, ಡಿಸೆಂಬರ್ 20: ಭಾರತದಲ್ಲಿ ಈ ವರ್ಷ ಸಕ್ಕರೆ ಉತ್ಪಾದನೆಯೂ ನಿರೀಕ್ಷೆಗೂ ಮೀರಿ ಹೆಚ್ಚಾಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಶೇ. 5.1ರಷ್ಟು ಸಕ್ಕರೆ ಉತ್ಪಾದನೆಯಲ್ಲಿ ಏರಿಕೆ ಆಗಿದೆ.
ಪ್ರಸಕ್ತ 2022-23 ಸಾಲಿನ ಡಿಸೆಂಬರ್ 15 ರವರೆಗೆ ಭಾರತದ ಸಕ್ಕರೆ ಉತ್ಪಾದನೆಯು 82.1 ಲಕ್ಷ ಟನ್‌ಗಳಷ್ಟು ಆಗಿದೆ. ಇದು ಹಿಂದಿನ ವರ್ಷಕ್ಕಿಂತ (ಶೇ.5.1) ಅಧಿಕವಾಗಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ 77.9 ಲಕ್ಷ ಟನ್‌ಗಳಷ್ಟು ಸಕ್ಕರೆ ಉತ್ಪಾದನೆ ಆಗಿತ್ತು.
ಇದರಿಂದ ಭಾರತ ಒಟ್ಟು ಸುಮಾರು 4 ಲಕ್ಷ ಟನ್‌ಗಳಷ್ಟು ಉತ್ಪಾದನೆ ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸಕ್ಕರೆ ಉತ್ಪಾದನೆಯ ಅಂಕಿಅಂಶಗಳು ಎಥೆನಾಲ್ ಉತ್ಪಾದನೆಗೆ ಪೂರಕವಾಗಿರಲಿದೆ ಎಂದು ಕೈಗಾರಿಕಾ ಸಂಸ್ಥೆ ಇಂಡಿಯನ್ ಶುಗರ್ ಮಿಲ್ಸ್ ಅಸೋಸಿಯೇಷನ್ (ಐಎಸ್‌ಎಂಎ) ತಿಳಿಸಿದೆ.

ದೇಶದ ಸಕ್ಕರೆ ಉತ್ಪಾದನೆಯ ರಾಜ್ಯಗಳ ಪೈಕಿ ಮಹಾರಾಷ್ಟ್ರ ಅಗ್ರಸ್ಥಾನದಲ್ಲಿದೆ. ಅಲ್ಲಿ 33 ಲಕ್ಷ ಟನ್ ಸಕ್ಕರೆ ಉತ್ಪಾದಿಸುವ ಮೂಲಕ ಮಹಾರಾಷ್ಟ್ರ ದೇಶದಲ್ಲೇ ಮುಂಚೂಣಿ ರಾಜ್ಯವಾಗಿದೆ. ಎರಡನೇ ಸ್ಥಾನದಲ್ಲಿ ಉತ್ತರ ಪ್ರದೇಶವಿದ್ದು, ಆ ರಾಜ್ಯದಲ್ಲಿ 20.3 ಲಕ್ಷ ಟನ್ ಸಕ್ಕರೆ ಉತ್ಪಾದಿಸಲಾಗಿದೆ. ದೇಶದಲ್ಲಿ ಕಬ್ಬಿನಿಂದ ಸಕ್ಕರೆ ತೆಗೆಯುವ ಕಾರ್ಖಾನೆಗಳ ಸಂಖ್ಯೆ ಹೆಚ್ಚಾಗಿದೆ. ಒಟ್ಟು 479 ರಷ್ಟಿದ್ದ ಕಾರ್ಖಾನೆಗಳು 497ಕ್ಕೆ ಹೆಚ್ಚಾಗಿವೆ ಎಂದು ಐಎಸ್‌ಎಂಎ ಮಾಹಿತಿ ನೀಡಿದೆ.
ಬಂದರು ಮಾಹಿತಿ ಮತ್ತು ಮಾರುಕಟ್ಟೆ ವರದಿಗಳ ಆಧಾರದಲ್ಲಿ ನೋಡುವುದಾದರೆ ಐಎಸ್‌ಎಂಎ ಭಾರತದ ರಫ್ತು ಒಪ್ಪಂದಗಳನ್ನು 45ರಿಂದ 50 ಲಕ್ಷ ಟನ್‌ಗಳಿಗೆ ನಿಗದಿಪಡಿಸಿದೆ. 60 ಲಕ್ಷ ಟನ್‌ಗಳ ಕೋಟಾದ ವಿರುದ್ಧ, ಅದರಲ್ಲಿ 6 ಲಕ್ಷ ಟನ್ ಸಕ್ಕರೆಯನ್ನು ನವೆಂಬರ್ 30 ರವರೆಗೆ ದೇಶದಿಂದ ರವಾನಿಸಲಾಗಿದೆ. ಈ ವರ್ಷ ಕಬ್ಬು ಉತ್ಪಾದನೆಯಲ್ಲಿ ದೇಶದಲ್ಲಿ ಉತ್ತಮ ಪ್ರಗತಿ ಸಾಧಿಸಿದ್ದರಿಂದ ಸಕ್ಕರೆ ಉತ್ಪಾದನೆ ಏರಿಕೆ ಆಗಿದೆ. ಅಲ್ಲದೇ ಇದು ಎಥೆನಾಲ್ ಉತ್ಪಾದನೆ ಮೇಲೂ ಸಕಾರಾತ್ಮಕ ಪರಿಣಾಮ ಬೀರಲಿದೆ.
ಇನ್ನೂ ಸುಮಾರು 8ರಿಂದ 9 ಲಕ್ಷ ಟನ್ ಸಕ್ಕರೆಯನ್ನು ಡಿಸೆಂಬರ್‌ನಲ್ಲಿ ರಫ್ತು ಮಾಡಲು ನಿರ್ಧರಿಸಲಾಗಿದೆ. ಆ ಕುರಿತು ಕಾರ್ಯ ನಡೆಯುತ್ತಿದೆ. ಈ ತಿಂಗಳಾಂತ್ಯಕ್ಕೆ ಒಟ್ಟು ರಫ್ತು ಸುಮಾರು 15 ಲಕ್ಷ ಟನ್‌ಗಳಾಗಬಹುದು ಎಂದು ಕೈಗಾರಿಕಾ ಸಂಸ್ಥೆ ಇಂಡಿಯನ್ ಶುಗರ್ ಮಿಲ್ಸ್ ಅಸೋಸಿಯೇಷನ್ (ಐಎಸ್‌ಎಂಎ) ಅಂದಾಜು ಮಾಡಿದೆ.












Click it and Unblock the Notifications