ಮುಂಗಾರು ಬೆಳೆಗೆ ಬಿತ್ತನೆ ಬೀಜದ ಕೊರತೆ
ರಾಯಚೂರು,
ಮೇ 31: ಮುಂಗಾರು ಬೆಳೆಗೆ ಬಿತ್ತನೆ ಬೀಜದ ಕೊರತೆಯನ್ನು ಜಿಲ್ಲೆಯ ಕೃಷಿಕರು ಅನುಭವಿಸುವ ನಿರೀಕ್ಷೆಯಿದೆ. ಬಿಟಿ ಹತ್ತಿ ಬೆಳೆಗೆ ಬಿತ್ತನೆ ಬೀಜದ ಕೊರತೆ ಹೆಚ್ಚು ಕಾಡುವ ಆತಂಕವನ್ನು ಕೃಷಿಕರು ವ್ಯಕ್ತಪಡಿಸಿದ್ದಾರೆ. id="toptextpromo">ಸುಮಾರು
ಮೂರು ಲಕ್ಷ ಹೆಕ್ಟೆರ್ ಕೃಷಿಯ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ಇದಕ್ಕೆ ಸುಮಾರು 30 ಸಾವಿರ ಕ್ವಿಂಟಾಲ್ ಬಿತ್ತನೆ ಬೀಜದ ಅಗತ್ಯವಿದೆ. ಆದರೆ ಈಗ ಕೇವಲ 7,350 ಕ್ವಿಂಟಾಲ್ ಬಿತ್ತನೆ ಬೀಜ ಇಲಾಖೆ ಸಂಗ್ರಹದಲ್ಲಿದೆ. ಇದರಿಂದಾಗಿ ಕೃಷಿಕರು ತೊಂದರೆ ಅನುಭವಿಸುವ ಸಾಧ್ಯತೆಯಿದೆ. id='are-slot-1' class='oiad oi-axt oiadv'> id='top-searched-articles'>ಮುಕ್ತ
ಮಾರುಕಟ್ಟೆಯಲ್ಲಿ ಬಿಟಿ ಹತ್ತಿ ಬೀಜಗಳ ದರ ಪ್ಯಾಕೇಟ್ ಗೆ 1,200 ರು ಇದೆ. ಆದರೆ ಸಬ್ಸಿಡಿ ಇರುವ ಹತ್ತಿ ಬೀಜಗಳು 930 ರು.ಗೆ ದೊರಕುತ್ತದೆ. ಆದರೆ ರಾಯಚೂರಿನಲ್ಲಿ ಕೇವಲ ಒಂದೇ ಒಂದು ಸಬ್ಸಿಡಿ ಬೀಜ ಮಾರಾಟ ಡೀಲರ್ ಕೇಂದ್ರವಿದೆ.











Click it and Unblock the Notifications