ಶಾಂತಿಗಾಗಿ ಉಪವಾಸ ಆರಂಭಿಸಿದ ಶಿವರಾಜ್ ಸಿಂಗ್ ಚೌಹಾಣ್
ಭೂಪಾಲ್, ಜೂನ್ 10: ರೈತರ ಹೋರಾಟದ ಕಿಚ್ಚು ಮುಗಿಲುಮುಟ್ಟಿರುವ ಮಧ್ಯಪ್ರದೇಶದ ಭೂಪಾಲ್ ನಲ್ಲಿ ಶಾಂತಿ ನೆಲೆಸಬೇಕೆಂಬ ಕಾರಣಕ್ಕೆ ಇಲ್ಲಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇಂದಿನಿಂದ(ಜೂನ್ 10) ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆಚರಿಸುತ್ತಿದಾರೆ.
ನಾನು ರೈತರ ಸಮಸ್ಯೆಗಳನ್ನು ನೋಡಿಯೂ ಸುಮ್ಮನಾಗುವಷ್ಟು ನಿರ್ದಯಿಯಲ್ಲ. ನನಗೆ ನಿಮ್ಮೆಲ್ಲರ ಮೇಲೆ ಅತೀವ ಕಾಳಜಿ ಇದೆ. ದಯವಿಟ್ಟು ನಿಮ್ಮ ಸಮಸ್ಯೆಗಳನ್ನು ನನ್ನ ಜೊತೆ ಮುಕ್ತವಾಗಿ ಹೇಳಿಕೊಳ್ಳಿ.

ಮಾತುಕತೆ ಮಾತ್ರವೇ ಎಲ್ಲ ಸಮಸ್ಯೆಗಳಿಗೂ ಪರಿಹಾರ ನೀಡಬಹುದು ಎಂದು ಉಪವಾಸ ಸತ್ಯಾಗ್ರಹ ಆರಂಭಿಸುವ ಮೊದಲು ಮುಖ್ಯಮಂತ್ರಿ ಚೌಹಾಣ್ ಟ್ವೀಟ್ ಮಾಡಿದ್ದಾರೆ.
ಮುಖ್ಯಮಂತ್ರಿಗಳ ಉಪವಾಸವಾದರೂ ಮಧ್ಯಪ್ರದೇಶದ ರೈತರ ಆಕ್ರೋಶವನ್ನು ತಣ್ಣಗಾಗಿಸುತ್ತದೆಯೇ ಎಂದು ಕಾದುನೋಡಬೇಕಿದೆ.












Click it and Unblock the Notifications