ಶಿವಮೊಗ್ಗದಲ್ಲಿ ಅಡಿಕೆ ಮಾರಾಟ ಮೇ 11 ರಿಂದ ಪುನಾರಂಭ

ಶಿವಮೊಗ್ಗ, ಮೇ 5: ಕೊರೊನಾ ವೈರಸ್‌ ಲಾಕ್‌ಡೌನ್ ಇದ್ದ ಕಾರಣ ಅಡಿಕೆ ಮಾರಾಟಕ್ಕೂ ನಿರ್ಬಂಧ ಇತ್ತು. ಆದರೆ, ಮೇ 11 ರಿಂದ ಅಡಿಕೆ ಮಾರಾಟ ಪುನಾರಂಭವಾಗಿದೆ. ಈ ವಿಷಯವನ್ನು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಅಡಕೆ ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷರು ಆಗಿರುವ ಆರಗ ಜ್ಞಾನೇಂದ್ರ ಇಂದು ಅಡಿಕೆ ವಹಿವಾಟಿನ ಬಗ್ಗೆ ಮ್ಯಾಮ್ ಕೋಸ್ ಕಚೇರಿಯಲ್ಲಿ ಮಾತನಾಡಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಅಡಿಕೆ ಮಾರಾಟ ಮತ್ತೆ ಶುರು ಆಗಲಿದೆ ಎಂದು ರೈತರಿಗೆ ಭರವಸೆ ನೀಡಿದ್ದಾರೆ.

ಲಾಕ್‌ಡೌನ್ ಇರುವ ಕಾರಣ ಉತ್ತರ ಭಾರತದಲ್ಲಿನ ಪಾನ್ ಮಸಾಲ ಕಾರ್ಖಾನೆಗಳು ಸ್ಥಗಿತಗೊಂಡಿವೆ. ಈ ಕಾರಣದಿಂದ ಅಡಕೆ ರಫ್ತು ಸಾಧ್ಯವಾಗಿರಲಿಲ್ಲ ಎಂದಿದ್ದಾರೆ. ಸದ್ಯ ಕಾರ್ಮಿಕರ ಸಮಸ್ಯೆ ಸಹ ಇದ್ದು, ಇದರಿಂದ ಅಡಿಕೆ ಮಾರಾಟ ಆಗುತ್ತಿರಲಿಲ್ಲ ಎಂದು ತಿಳಿಸಿದ್ದಾರೆ.

Areca Selling Will Begin From May 5

ವಹಿವಾಟು ಇಲ್ಲದೆ ಇದ್ದರೂ, ಯಾವುದೇ ಕಾರಣಕ್ಕೂ ಅಡಕೆ ಧಾರಣೆ ಕುಸಿಯಲು ಬಿಡುವುದಿಲ್ಲ. ಹೀಗಾಗಿ, ರೈತರು ಮಧ್ಯವರ್ತಿಗಳಿಗೆ ಕಡಿಮೆ ಬೆಲೆಗೆ ಅಡಿಕೆ ಮಾರಾಟ ಮಾಡಬಾರದು ಎಂದಿದ್ದಾರೆ. ರೈತರು ಧಾರಣೆ ಕುಸಿಯಬಹುದು ಎಂದು ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

ಲಾಕ್‌ಡೌನ್ ಘೋಷಣೆ ಆದ ದಿನದಿಂದ ಶಿವಮೊಗ್ಗದ ಮಾರುಕಟ್ಟೆಗಳಲ್ಲಿ ಅಡಿಕೆ ಮಾರಾಟ ಆಗುತ್ತಿಲ್ಲ. ಆದರೆ, ಮೇ 11 ರಿಂದ ಎಂದಿನಂತೆ ವ್ಯಾಪಾರ ನಡೆಯಲಿದೆ ಎಂದು ಆರಗ ಜ್ಞಾನೇಂದ್ರ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+