ಕೃಷಿಭೂಮಿ ಕೈಗಾರಿಕೆಗೆ :ರೈತರ ವಿರೋಧ
ಬೆಂಗಳೂರು,
ಜೂ.3: ಹಸಿರು ಶಾಲುಗಳನ್ನು ಎತ್ತಿ ತಿರುಗಿಸುತ್ತಾ, ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದ ಮುಖ್ಯ ವೇದಿಕೆಯತ್ತ ಸಾಗುತ್ತಿದ್ದ ಮೂವರು ರೈತ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ. id="toptextpromo">ಹಸಿರು
ಬಾವುಟಗಳನ್ನು ಹಿಡಿದು ಘೋಷಣೆ ಕೂಗುತ್ತಾ ಪ್ರತಿಭಟಿಸಿದ ಮೂವರು ರೈತ ನಾಯಕರನ್ನುಸದಾಶಿವ ನಗರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತರನ್ನು ಶಿವಮೊಗ್ಗ ಮೂಲದ ರೈತ ಸಂಘಟನೆ ಮುಖಂಡರಾದ ನಿಟ್ಟೂರ್ ರಾಜು, ಮಲಿಕಾರ್ಜುನ ಹಾಗೂ ಯೋಗೇಶ್ ಎಂದು ಗುರುತಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ಕೃಷಿ
ಯೋಗ್ಯ ಭೂಮಿಯಲ್ಲಿ ಕೈಗಾರಿಕೆಗೆ ನಡೆಸಲು ಸರ್ಕಾರ ಅನುಮತಿ ನೀಡಿರುವುದಕ್ಕೆ ನಮ್ಮ ವಿರೋಧವಿದೆ. ನಮ್ಮ ಭೂಮಿಯ ಒಂದಿಂಚು ನೀಡುವುದಿಲ್ಲ. ನಾವು ಕೈಗಾರಿಕೆ ವಿರೋಧಿಗಳಲ್ಲ. ಆದರೆ, ಅಭಿವೃದ್ಧಿ ಹೆಸರಿನಲ್ಲಿ ಕೃಷಿ ಭೂಮಿ ಕಬಳಿಸಿದರೆ ಉಗ್ರ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ರೈತ ಮುಖಂಡರು ಗುಡುಗಿದರು.











Click it and Unblock the Notifications