ಸಿಎಂ ಕರೆದ ಸಭೆಯಲ್ಲಿ ಸತೀಶ್ ಜಾರಕಿಹೊಳಿ ಕೇಳಲಿದ್ದಾರೆ 16 ಪ್ರಶ್ನೆ

Recommended Video

      ಸತೀಶ್ ಜಾರಕಿಹೊಳಿ ಕೇಳುವ 16 ಪ್ರಶ್ನೆಗಳ ಎಚ್ ಡಿ ಕುಮಾರಸ್ವಾಮಿ ಉತ್ತರ ಕೊಡುತ್ತಾರಾ? | Oneindia Kannada

      ಬೆಂಗಳೂರು, ನವೆಂಬರ್ 21: ಸಿಎಂ ಕುಮಾರಸ್ವಾಮಿ ಅವರು ನಾಳೆ (ನವೆಂಬರ್ 22)ಕ್ಕೆ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಕರೆದಿದ್ದು ಸಭೆಯಲ್ಲಿ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಭಾಗವಹಿಸಲಿದ್ದಾರೆ.

      ನಿನ್ನೆ ಸಹ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಸಿಎಂ ಸಭೆ ನಡೆಸಿದ್ದಾರಾದರೂ ಪ್ರಮುಖ ಸಕ್ಕರೆ ಕಾರ್ಖಾನೆಗಳ ಮಾಲೀಕರು ಅದರಲ್ಲಿ ಭಾಗವಹಿಸಿರಲಿಲ್ಲ ಹಾಗಾಗಿ ನಾಳೆ ಮತ್ತೊಮ್ಮೆ ಸಭೆ ಕರೆಯಲಾಗಿದೆ.

      ನಾಳೆ ಸಿಎಂ ಕರೆದಿರುವ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯಲ್ಲಿ ಸತೀಶ್ ಜಾರಕಿಹೊಳಿ ಅವರು ಭಾಗವಹಿಸುತ್ತಿರುವುದಾಗಿ ತಿಳಿಸಿದ್ದು, ಸಕ್ಕರೆ ಕಾರ್ಖಾನೆ ಮಾಲೀಕರ ಪರವಾಗಿ 16 ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡುವುದಾಗಿ ಹೇಳಿದ್ದಾರೆ.

      Satish Jarkiholi attending meeting which called by CM Kumaraswamy

      ರೈತರೂ ಉಳಿಯಬೇಕು, ಸಕ್ಕರೆ ಕಾರ್ಖಾನೆಗಳೂ ಉಳಿಯಬೇಕು, ಸರ್ಕಾರವೂ ಉಳಿಯಬೇಕು ಎಂದು ಹೇಳಿದ ಅವರು, ಸಮ್ಮಿಶ್ರ ಸರ್ಕಾರವು ರೈತರ ಸಮಸ್ಯೆಗಳಿಗೆ ಸರಿಯಾಗಿಯೇ ಸ್ಪಂದಿಸುತ್ತದೆ ಎಂದು ಹೇಳಿದ್ದಾರೆ.

      ಬೆಳಗಾವಿಯಲ್ಲಿ ಬಹುತೇಕ ಸಕ್ಕರೆ ಕಾರ್ಖಾನೆಗಳು ಜಾರಕಿಹೊಳಿ ಸಹೋದರರ ಒಡೆತನದಲ್ಲಿಯೇ ಇವೆ. ಅವುಗಳಿಂದಲೂ ಸಾಕಷ್ಟು ಬಾಕಿ ರೈತರಿಗೆ ಸೇರಿಬೇಕಿದೆ ಹಾಗಾಗಿ ನಾಳೆ ಸಿಎಂ ಅವರು ತಮ್ಮದೇ ಮಿತ್ರ ಪಕ್ಷದ ಶಾಸಕರಿಗೆ ರೈತರ ಬಾಕಿ ಹಣ ಕೂಡಲೇ ವಾಪಸ್ ಮಾಡುವಂತೆ ಹೇಗೆ ಎಚ್ಚರಿಕೆ ನೀಡುತ್ತಾರೆ ಮತ್ತು ಆ ನಂತರದ ಬೆಳವಣಿಗೆಗಳು ಏನಾಗುತ್ತವೆ ಎಂಬುದು ಕುತೂಹಲ ಕೆರಳಿಸಿದೆ.

      ಸತೀಶ್ ಜಾರಕಿಹೊಳಿ, ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಶಾಮನೂರು ಶಿವಶಂಕರಪ್ಪ, ಉಮೇಶ ಕತ್ತಿ, ಮುರಗೇಶ ನಿರಾಣಿ, ಇನ್ನೂ ಹಲವು ಕಾಂಗ್ರೆಸ್-ಬಿಜೆಪಿ ಮುಖಂಡರು ಸಕ್ಕರೆ ಕಾರ್ಖಾನೆಗಳನ್ನು ಹೊಂದಿದ್ದಾರೆ. ಅವುಗಳಿಂದ ರೈತರಿಗೆ ಸಾಕಷ್ಟು ಬಾಕಿ ಹಣ ಪಾವತಿ ಆಗಬೇಕಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+