ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಹಣಿಗಾಗಿ ರೈತರು ಇನ್ನು ತಹಶೀಲ್ದಾರ್ ಕಚೇರಿಗೆ ಅಲೆಯಬೇಕಿಲ್ಲ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 9: ಇನ್ನುಮುಂದೆ ಮಹಣಿಗಾಗಿ ರೈತರು ತಹಶೀಲ್ದಾರ್ ಕಚೇರಿಗೆ ಅಲೆಯಬೇಕಿಲ್ಲ ಬದಲಾಗಿ ರೈತರ ಮನೆಗೇ ನೇರವಾಗಿ ಪಹಣಿ ಬರಲಿದೆ ಅದು ಹೇಗಂತೀರಾ..

ಆನ್‌ಲೈನ್ ಮೂಲಕ ಅಥವಾ ನೇರವಾಗಿ ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ ರೈತರು ಪಹಣಿ ಶುಲ್ಕದ ಜತೆ ಅಂಚೆ ವೆಚ್ಚ ಪಾವತಿಸಿದರೆ ಅಧಿಕೃತ ವಿಳಾಸಕ್ಕೆ ಬಂದು ತಲುಪಲಿದೆ.

ಆಗಸ್ಟ್‌ 10ರಿಂದ ಸಿಎಂ ರಾಜ್ಯ ಪ್ರವಾಸ, ಇಸ್ರೇಲ್ ಮಾದರಿ ಕೃಷಿಗೆ ಚಾಲನೆ ಆಗಸ್ಟ್‌ 10ರಿಂದ ಸಿಎಂ ರಾಜ್ಯ ಪ್ರವಾಸ, ಇಸ್ರೇಲ್ ಮಾದರಿ ಕೃಷಿಗೆ ಚಾಲನೆ

ಕಂದಾಯ ಇಲಾಖೆಯು ಇಂಥದ್ದೊಂದು ಯೋಜನೆಯನ್ನು ಜಾರಿಗೊಳಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅಂಚೆ ಮೂಲಕ ಪಹಣಿ ಪತ್ರ ತಲುಪಿಸುವ ವ್ಯವಸ್ಥೆ ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಪರಿಚಯಿಸಲಾಗುತ್ತಿದೆ. ರೈತರು ಮ್ಯುಟೇಶನ್‌ ಆಧರಿತ ಪಹಣಿ ಪತ್ರ ಬೇಕೆಂದು ಸಲ್ಲಿಸುವ ಅರ್ಜಿ ಜತೆಗೆ ವೆಚ್ಚ ಪಾವತಿಸಿದರೆ ಪಹಣಿ ಪತ್ರದಲ್ಲಿ ದಾಖಲಾದ ವಿಳಾಸ ಆಧರಿಸಿ ಪಹಣಿ ಮನೆಗೆ ಬಂದು ತಲುಪಲಿದೆ.

RTC will send to door step of farmers soon

ಪಹಣಿ ಪತ್ರದ ವೆಚ್ಚ 15 ರೂ. ಜತೆಗೆ ರಿಜಿಸ್ಟರ್ಡ್‌ ಅಂಚೆ ವೆಚ್ಚ 20 ರೂ. ಸೇರಿ ಒಟ್ಟು 35 ರೂ. ಪಾವತಿಸಿದರೆ ರಿಜಿಸ್ಟರ್ಡ್ ಅಂಚೆ ಮೂಲಕ ಪಹಣಿ ಪಡೆಯಬಹುದಾಗಿದೆ. ಇದರಿಂದ ರೈತರು ಪದೇ ಪದೇ ತಹಸೀಲ್ದಾರ್‌ ಕಚೇರಿಗೆ ಅಲೆಯುವುದು ತಪ್ಪಲಿದೆ.

English summary
The state government is introducing a new program that the farmers can get their land records that is RTC ( Rights, Tenancy Crops) to their door steps for only Rs. 35. Revenue department has sent proposal to government..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X