ಅಕಾಲಿಕ ಮಳೆ, ಅತಿವೃಷ್ಟಿಯಿಂದ ತೇವಾಂಶ ಹೆಚ್ಚಳ, ಬೆಳೆ ನಿರ್ವಹಣೆಗೆ ಹೇಗೆ?
ಧಾರವಾಡ, ಜೂನ್ 17: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನೈಋತ್ಯ ಮುಂಗಾರು ಮಳೆ ಆರಂಭವಾಗಿದೆ. ಕೃಷಿ ಚಟುವಟಿಕೆಗಳು ಸಹ ಬಿರುಸುಗೊಂಡಿವೆ. ಧಾರವಾಡದ ಕೃಷಿ ಇಲಾಖೆ ಅಕಾಲಿಕ ಮಳೆ ಮತ್ತು ಅತಿವೃಷ್ಟಿಯಿಂದ ತೇವಾಂಶ ಹೆಚ್ಚಾದ ಅಥವಾ ನೀರು ನಿಂತ ಹೊಲದಲ್ಲಿ ಬೆಳೆಗಳ ನಿರ್ವಹಣೆ ಕುರಿತು ರೈತರಿಗೆ ಸಲಹೆಗಳನ್ನು ನೀಡಿದೆ.
ಮೆಕ್ಕೆಜೋಳ, ಸೋಯಾಅವರೆ, ಹೆಸರು, ಶೇಂಗಾ, ಭತ್ತ ಮತ್ತು ಹತ್ತಿ ಬೆಳೆಗಳ ಬಿತ್ತನೆ ಕೈಗೊಂಡ ಹೊಲಗಳಲ್ಲಿ ಮುಂಜಾಗೃತ ಕ್ರಮವಾಗಿ ಇಳಿಜಾರಿಗೆ ಅಡ್ಡವಾಗಿ ಬೇಸಾಯ ಕ್ರಮಗಳನ್ನು ಕೈಗೊಳ್ಳುವುದು ಮತ್ತು ತಕ್ಷಣದ ಕ್ರಮವಾಗಿ ಹೆಚ್ಚಿನ ನೀರು ಬಸಿದು ಹೋಗಲು ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಕಿರಣಕುಮಾರ ತಿಳಿಸಿದ್ದಾರೆ.

ಮಣ್ಣು ಹದ ಬಂದ ಕೂಡಲೇ ಬೆಳೆಗೆ ಅನುಸಾರವಾಗಿ ಸೂಕ್ತವಾದ ಕುಂಟೆಯಿಂದ ಅಂತರ ಬೇಸಾಯ ಮಾಡಿ ಕಳೆಗಳನ್ನು ನಿಯಂತ್ರಿಸಬೇಕು. ನೀರು ನಿಂತ ಸನ್ನಿವೇಶದಲ್ಲಿ ಯೂರಿಯಾ ಗೊಬ್ಬರ ಬಳಕೆ ಮಾಡಬಾರದು. ಇದರಿಂದ ರೋಗಗಳ ಭಾಧೆ ತೀವ್ರವಾಗುವುದು. ಇಂತಹ ಸನ್ನಿವೇಶದಲ್ಲಿ ಬೆಳೆಗಳ ಬೆಳವಣಿಗೆ ಚೇತರಿಸಲು ಪ್ರತಿ ಲೀಟರ್ ನೀರಿಗೆ 2 ರಿಂದ 3 ಗ್ರಾಂ 17:44:00 ಅಥವಾ 13:00:45 ಅಥವಾ 19:19:19 ನೀರಿನಲ್ಲಿ ಕರಗುವ ಗೊಬ್ಬರಗಳನ್ನು ಬೆರೆಸಿ ಸಿಂಪರಣೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.
ರೈತರಿಗೆ ನೀಡಿರುವ ಸಲಹೆಗಳು: ಅತಿ ತೇವಾಂಶದಿಂದ ರೋಗದ ಬಾಧೆ ಕಂಡು ಬಂದಲ್ಲಿ ರೋಗಕ್ಕೆ ಮತ್ತು ಬೆಳೆಗೆ ಅನುಗುಣವಾಗಿ ಶಿಫಾರಿತ ಶಿಲೀಂದ್ರ ನಾಶಕಗಳ ಬಳಕೆ ಮಾಡಬೇಕು. ಮೆಕ್ಕೆಜೋಳದಲ್ಲಿ ಟರ್ಸಿಕಮ್ ಎಲೆ ಅಂಗಮಾರಿ ರೋಗ (TLB) ಮತ್ತು ಹೆಸರು ಬೆಳೆಯಲ್ಲಿ ಬೂದುರೋಗ ಕಂಡುಬಂದಲ್ಲಿ 2.5 ಗ್ರಾಂ ಪ್ರತಿ ಲೀಟರ್ ನೀರಿಗೆ ಮ್ಯಾಂಕೋಜೆಬ್ 75% ಡಬ್ಲ್ಯು.ಪಿ. ಸಿಂಪರಣೆ ಮಾಡಬೇಕು. ಮೆಕ್ಕೆಜೋಳದಲ್ಲಿ ಕಾಂಡಕೊರೆಯುವ ರೋಗ ಅಥವಾ ಸೊಯಾಅವರೆಯಲ್ಲಿ ಎಲೆ ಚುಕ್ಕೆ ರೋಗ, ತುಕ್ಕು ರೋಗ ಕಂಡುಬಂದಲ್ಲಿ 1 ಮಿ.ಲೀ. ಪ್ರತಿ ಲೀ. ನೀರಿಗೆ ಹೆಕ್ಸಾಕೋನೋಜೋಲ್ ಶೇ. 5 ಎಸ್.ಸಿ. ಬೆರೆಸಿ ಸಿಂಪರಣೆ ಮಾಡಬೇಕು ಎಂದು ತಿಳಿಸಲಾಗಿದೆ.
ಹತ್ತಿ ಬೆಳೆಯಲ್ಲಿ ಮಿರಿಡ್ ತಿಗಣೆ ಕಂಡು ಬಂದಲ್ಲಿ ಒಂದು ಗ್ರಾಂ ಪ್ರತಿ ಲೀ. ನೀರಿಗೆ ಅಸಿಫೇಟ್ ರಾಸಾಯನಿಕವನ್ನು ಬೆರೆಸಿ ಸಿಂಪರಣೆ ಮಾಡಬೇಕು ಮತ್ತು ಹತ್ತಿ ಎಲೆಗಳು ಕೆಂಪಾದಲ್ಲಿ 10 ಗ್ರಾಂ ಪ್ರತಿ ಲೀ. ನೀರಿಗೆ, ಮೆಗ್ನೀಶಿಯಂ ಸಲ್ಫೇಟ್ ಅನ್ನು ಬೆರೆಸಿ ಸಿಂಪಡಿಸಬೇಕು.
ಶೇಂಗಾ ಬೆಳೆಯಲ್ಲಿ ಎಲೆ ಚುಕ್ಕೆ ರೋಗ ಅಥವಾ ಸೊರಗುರೋಗ ಬಂದಲ್ಲಿ 2 ಗ್ರಾಂ ಪ್ರತಿ ಲೀ. ನೀರಿಗೆ, ಕ್ಲೋರೊಥಲೋನಿಲ್ ಬೆರೆಸಿ ಸಿಂಪರಣೆ ಮಾಡಬೇಕು ಎಂದು ಅವರು ತಿಳಿಸಿದ್ದಾರೆ. ಹೆಸರು ಮತ್ತು ಸೋಯಾಅವರೆ ಬೆಳೆಯಲ್ಲಿ ಎಲೆ ತಿನ್ನುವ ಹುಳುಗಳ ಕೀಟ ಬಾಧೆ ಕಂಡುಬಂದಲ್ಲಿ 1 ಮಿ.ಲಿ. ಪ್ರತಿ ಲೀ. ನೀರಿಗೆ, ಮೊನೊಕ್ರೊಟೊಫಾಸ್ ಅಥವಾ 2 ಮಿ.ಲಿ. ಪ್ರತಿ ಲೀ. ನೀರಿಗೆ, ಕ್ವಿನಾಲ್ಫಾಸ್ ಬೆರೆಸಿ ಸಿಂಪರಣೆ ಮಾಡಬೇಕು. ರಸಹೀರುವ ಕೀಟ ಬಾಧೆ ಕಂಡು ಬಂದಲ್ಲಿ ಇಮಿಡಾಕ್ಲೋಪ್ರಿಡ್ ಶೇ. 17.8 ಎಸ್. ಎಲ್. ಪ್ರತಿ ಲೀ. ನೀರಿಗೆ 1 ಮಿ.ಲೀ. ಅಥವಾ ಥೈಯೋಮಿಥಾಕ್ಸಾಮ್ ಶೇ. 25 ಡಬ್ಲ್ಯು.ಜಿ. ಪ್ರತಿ ಲೀ. ನೀರಿಗೆ 0.5 ಗ್ರಾಂ ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು.
ಥೈಯೋಮಿಥಾಕ್ಸಾಮ್ ಶೇ. 25 ಡಬ್ಲ್ಯು.ಜಿ. ಯು ಕಾಂಡ ಕೊರಕ, ಎಲೆ ಮಡಚುವ ಕೀಟ, ಜಿಗಿ ಹುಳು, ಬಿಳಿ ನೊಣ, ನುಸಿ, ಹಾರುವ ಕೀಟಗಳ ನಿರ್ವಹಣೆಗೂ ಬಳಸಬಹುದು. ಸರಿಯಾದ ಮೊಳಕೆಯಾಗದೇ ಸಾಮಾನ್ಯವಾಗಿ ಸಸಿ ಸಂಖ್ಯೆ ಶೇ.60ಕ್ಕಿಂತಲೂ ಕಡಿಮೆ ಇದ್ದಲ್ಲಿ ದ್ವಿ-ಹಂಗಾಮಿನ ಬೆಳೆಗಳಾದ ಹತ್ತಿ, ತೊಗರಿ ಮತ್ತು ಮೆಣಸಿನಗಿಡದಲ್ಲಿ ಮರು ಬಿತ್ತನೆ ಅಥವಾ ನಾಟಿ ಮಾಡುವುದು ಉತ್ತಮ. ಇತರ ಬೆಳೆಗಳಾದಲ್ಲಿ ತಕ್ಷಣ ಹುಸಿ ಹೋದ ಜಾಗದಲ್ಲಿ ಕಾಳು ಹಾಕಬೇಕು ಎಂದು ತಿಳಿಸಿದ್ದಾರೆ.
ಮುಂದೆ ಬಿತ್ತನೆ ಕೈಗೊಳ್ಳಬೇಕಾದ ಹೊಲಗಳಲ್ಲಿ ಮೇಲಿನ ಮುಂಜಾಗ್ರತಾ ಕ್ರಮದೊಂದಿಗೆ ತಡವಾದಂತೆ ಶೇಕಡಾ 5 ರಿಂದ 10 ರಷ್ಟು ಬಿತ್ತನೆ ಬೀಜದ ಪ್ರಮಾಣದಲ್ಲಿ ಹೆಚ್ಚಳ ಮಾಡುವುದರ ಜೊತೆಗೆ ಶಿಲೀಂಧ್ರನಾಶಕವಾದ ಕಾರ್ಬಾಕ್ಸಿನ್ ಇಲ್ಲವೇ ಕಾರ್ಬಾಕ್ಷಿನ್ ಒಳಗೊಂಡ ಯಾವುದೇ ಸಂಯುಕ್ತ ರಾಸಾಯನಿಕದಿಂದ ಪ್ರತಿ ಕೆ.ಜಿ. ಬೀಜಕ್ಕೆ 4 ಗ್ರಾಂ.ನಂತೆ ಬೀಜೋಪಚಾರವನ್ನು ತಪ್ಪದೇ ಮಾಡಬೇಕು.
ಬೀಜ ಮತ್ತು ರಾಸಾಯನಿಕ ಗೊಬ್ಬರ ಬಿತ್ತುವ ಕೂರಿಗೆಯಿಂದ ಬಿತ್ತನೆ ಮಾಡಬೇಕು. ಬಿತ್ತನೆ ಸಮಯದಲ್ಲಿ ಬೆಳೆವಾರು ಉದಯಪೂರ್ವ ಕಳೆನಾಶಕಗಳಿಗೆ ಆದ್ಯತೆ ಕೋಡಬೇಕು. ಏಕದಳ ಬೆಳೆಗಳಾದಲ್ಲಿ ಆಟ್ರಾಜಿನ ಶೇ.50 ಡಬ್ಲ್ಯು.ಪಿ. ಕಳೆನಾಶವನ್ನು ಪ್ರತಿ ಲೀಟರ ನೀರಿಗೆ 2 ರಿಂದ 2.5 ಗ್ರಾಂ ನಷ್ಟು ಮತ್ತು ದ್ವಿದಳ ಮತ್ತು ಎಣ್ಣೆಕಾಳು ಬೆಳೆಯಾದಲ್ಲಿ ಪೆಂಡಿಮಿಥಾಲಿನ ಶೇ. 30 ಇ.ಸಿ.ಯನ್ನು ಪ್ರತಿ ಲೀಟರ್ ನೀರಿಗೆ 3.3 ಮಿ.ಲೀ. ನಂತೆ ಬೆರೆಸಿ ಎಕರೆಗೆ ಕನಿಷ್ಠ 200 ಲೀಟರ್ ದ್ರಾವಣವನ್ನು ಹಿಂಬದಿಯಲ್ಲಿ ಚಲಿಸಿ ಸಿಂಪಡಿಸಬೇಕು.
-
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು












Click it and Unblock the Notifications