ಅಂತರ್ಜಲ ಅಭಾವದಲ್ಲೂ ಎಂಟು ಎಕರೆ ಪ್ರದೇಶದಲ್ಲಿ ಪಪ್ಪಾಯ, ಬಂಪರ್ ಬೆಳೆ
ರಾಯಚೂರು ಮಾರ್ಚ್ 4: ಬೇಸಿಗೆ ಹಾಗೂ ಅಂತರ್ಜಲ ಅಭಾವದಲ್ಲೂ ಎಂಟು ಎಕರೆ ಪ್ರದೇಶದಲ್ಲಿ ಪಪ್ಪಾಯ ಬೆಳೆದು, ಲಾಭ ಪಡೆದುಕೊಳ್ಳುವ ಮೂಲಕ ಲಿಂಗಸುಗೂರು ತಾಲೂಕಿನ ದೇವರಭೂಪುರ ಗ್ರಾಮದ ವೀರೇಶ ಹೂಗಾರ ರೈತರಿಗೆ ಮಾದರಿಯಾಗಿದ್ದಾರೆ. ವೀರೇಶ ಅವರು ಪತ್ರಿಕೋದ್ಯಮದಲ್ಲಿ ಪದವಿ ಮುಗಿಸಿ, ಸದ್ಯ ಕಾನೂನು ಅಧ್ಯಯನ ಮುಂದುವರಿಸಿ, ಮಣ್ಣಿನ ಮೂಲಕ ಬದುಕು ಕಟ್ಟಿಕೊಂಡಿದ್ದಾರೆ.
ಉದ್ಯೋಗ ಮಾಡುವ ಇಂಗಿತ ಹೊಂದಿದ್ದರು. ಆದರೆ ಕೃಷಿಯಲ್ಲಿನ ಅವರ ಆಸಕ್ತಿಯಿಂದ ಕೃಷಿ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಇವರ ನಿರ್ಧಾರಕ್ಕೆ ಕುಟುಂಬದವರು ಸಾಥ್ ನೀಡಿದ್ದಾರೆ. ಈಗ ಯಶಸ್ವಿ ಕೃಷಿಕರಾಗಿದ್ದಾರೆ. ಶ್ರಮಕ್ಕೆ ತಕ್ಕ ಫಲ ಪಡೆಯುತ್ತಿದ್ದಾರೆ. ಅಲ್ಪ ಸ್ವಲ್ಪ ಜಮೀನಿನಲ್ಲಿ ಕೃಷಿ ಮಾಡಿದ್ರೆ ಹಣ ಸಂಪಾದನೆ ಮಾಡಿ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬಹುದು ಎಂಬ ಸತ್ಯ ಅರಿತು.

ಇದಕ್ಕೆ ಚಿಕ್ಕಪ್ಪರಾದ ರವಿ ಕುಮಾರ್ ಹಾಗೂ ಶರಣಬಸವ ಅವರ ಸಹಕಾರದೊಂದಿಗೆ 8 ಎಕರೆ ಪ್ರದೇಶದಲ್ಲಿ ಪಪ್ಪಾಯ ಬೆಳೆದಿದ್ದಾರೆ. ರೈತ ವೀರೇಶ ಅವರದು ದೊಡ್ಡ ಕುಟುಂಬ. ಒಟ್ಟು 14 ಎಕರೆ ಜಮೀನು ಇದೆ. ಅದರದಲ್ಲಿ ವೀರೇಶ ಅವರ ಪಾಲಿಗೆ 8 ಎಕರೆ ಬಂದಿದೆ. ಇದರಲ್ಲಿ ಪಪ್ಪಾಯ ಬೆಳೆದಿದ್ದಾರೆ. ಬೆಳೆಗಾಗಿ ಬಾವಿ ಹಾಗೂ ಬೋರ್‌ವೆಲ್ ನೀರು ಬಳಕೆ ಮಾಡುತ್ತಾರೆ.
ಪಪ್ಪಾಯ ಬೆಳೆದು ಕೇವಲ 7 ತಿಂಗಳಲ್ಲಿ ಫಸಲು ಪಡೆದುಕೊಂಡಿರುವ ವೀರೇಶ ಹೂಗಾರ ಎರಡು ವರ್ಷಗಳವರೆಗೆ ಫಸಲನ್ನು ಪ್ರತಿ 8 ರಿಂದ 10 ದಿನ ಗಳಿಗೊಮ್ಮೆ ಮಾರಾಟ ಮಾಡುತ್ತಾರೆ. ಜತೆಗೆ ಮಿಶ್ರ ಬೆಳೆಯಾಗಿ ದಾಳಿಂಬೆ ಬೆಳೆದಿದ್ದು, ಬೆಳವಣಿಗೆ ಹಂತದಲ್ಲಿದೆ. ಪಪ್ಪಾಯ ನಂತರ ದಾಳಿಂಬೆ ಫಸಲು ಪಡೆಯಬಹುದು.

ಇವರಿಗೆ ಮಾರ್ಗದರ್ಶಕರಾಗಿ ಮತ್ತೊಬ್ಬ ಚಿಕ್ಕಪ್ಪ ಸಿದ್ದಣ್ಣ ಹೂಗಾರ್ ನೆರವಾಗಿದ್ದಾರೆ. ತೋಟಗಾರಿಕೆ ಇಲಾಖೆಯ ಸೌಲಭ್ಯ, ಸ್ವಂತ ಖರ್ಚಿನಲ್ಲಿಜೋಡಿ ಬೆಳೆ ಬೆಳೆದಿರುವ ವೀರೇಶ್ ಅವರು ಭೂತಾಯಿಯನ್ನೇ ನಂಬಿದರೆ ಖಂಡಿತ ಕೈ ಬಿಡೋದಿಲ್ಲಎಂಬ ಸತ್ಯ ಅರಿತಿದ್ದಾರೆ. ಅಲ್ಲಯುವ ಜನಾಂಗಕ್ಕೆ ಮಾದರಿಯಾಗಿದ್ದಾರೆ.
ಮಾರುಕಟ್ಟೆಯಲ್ಲಿ ಪಪ್ಪಾಯಗೆ ದರ ಹೆಚ್ಚಳದಿಂದ ವೀರೇಶ ಖುಷಿಯಲ್ಲಿದ್ದಾರೆ. ಪ್ರತಿ ಕೆಜಿಗೆ 2 ರಿಂದ 5 ರೂ. ವರೆಗೆ ಮಾರಾಟವಾಗುತ್ತಿದ್ದ ಪಪ್ಪಾಯಗೆ ಈಗ ಪ್ರತಿ ಕೆಜಿಗೆ 10 ರೂ.ಗೆ ಖರೀದಿಸುತ್ತಿದ್ದಾರೆ. ಹೈದರಾಬಾದ್, ಚೆನ್ನೈ, ಮುಂಬಯಿ ಮತ್ತು ದಿಲ್ಲಿಯಿಂದ ಖರೀದಿದಾರರು ಬಂದು ಪಪ್ಪಾಯ ಖರೀದಿಸುತ್ತಾರೆ.
ಪ್ರತಿಬಾರಿ 10 ರಿಂದ 15 ಟನ್ ಪಪ್ಪಾಯ ಮಾರಾಟ ಮಾಡುತ್ತಿದ್ದು, ಸದ್ಯ 8 ತಿಂಗಳಲ್ಲಿ6 ಲಕ್ಷ ರೂ. ಮೌಲ್ಯದ ಪಪ್ಪಾಯ ಬೆಳೆದಿದ್ದು, ಮಾರುಕಟ್ಟೆಯಲ್ಲಿಉತ್ತಮ ಬೆಲೆ ದೊರೆತರೆ 30 ರಿಂದ 40 ಲಕ್ಷ ರೂ.ಸಿಗುತ್ತದೆ ಎಂದು ಕೃಷಿಕ, ವೀರೇಶ ಹೂಗಾರ ದೇವರಭೂಪೂರ ಹೇಳಿದರು.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications