ದರ ಕುಸಿತ: ಹೊಲದಲ್ಲೇ ಕೊಳೆಯುತ್ತಿರುವ ಟೊಮೆಟೊ ಬೆಳೆ

ಕಳೆದ ಎರಡು ತಿಂಗಳಿದ ಟೊಮೆಟೊ ಬೆಲೆ ದಿಢೀರನೆ ಕುಸಿತ ಕಂಡಿದ್ದು, ಟೊಮೆಟೊ ಬೆಳೆದ ರೈತರು ಸಂಕಷ್ಟದಲ್ಲಿದ್ದಾರೆ. ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ರೈತ ಕಂಗಲಾಗಿ ಬೀದಿಗೆ ಬಂದಿದ್ದಾನೆ.

ರಾಯಚೂರು ಜನವರಿ 28: ಕಳೆದ ಎರಡು ತಿಂಗಳಿದ ಟೊಮೆಟೊ ಬೆಲೆ ದಿಢೀರನೆ ಕುಸಿತ ಕಂಡಿದ್ದು, ಟೊಮೆಟೊ ಬೆಳೆದ ರೈತರು ಸಂಕಷ್ಟದಲ್ಲಿದ್ದಾರೆ. ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೇ ರೈತ ಕಂಗಲಾಗಿದ್ದಾರೆ.

ರಾಯಚೂರು ತಾಲೂಕಿನಲ್ಲಿ ಹೆಚ್ಚಾಗಿ ತರಕಾರಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಆದರೆ ಫಸಲು ಕೈಗೆ ಬಂದು ಮಾರುಕಟ್ಟೆಗೆ ಹೋಗುವಷ್ಟರಲ್ಲಿ ಮಾರುಕಟ್ಟೆಯಲ್ಲಿ ಬೆಲೆ ಕುಸಿಯುತ್ತದೆ. ಇದರಿಂದ ತಾನು ಮಾಡಿದ ಖರ್ಚು ಕೂಡ ರೈತರಿಗೆ ಸಿಗದೆ ಇರುವುದರಿಂದ ಅನ್ನದಾತರು ಕಂಗಲಾಗಿ ಬೆಳೆದ ಬೆಳೆಗಳನ್ನು ಗಿಡದಿಂದ ಕೀಳದೇ ಬಿಟ್ಟಿದ್ದರಿಂದ ಟೊಮೆಟೊ ಹೊಲದಲ್ಲಿಯೇ ಕೊಳೆಯುತ್ತಿವೆ.

ರಾಯಚೂರು ತಾಲೂಕಿನಲ್ಲಿ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳೆಯಲಾಗಿದೆ. ರೈತರಿಗೆ ಮಾರುಕಟ್ಟೆಯಲ್ಲಿ ಒಂದು 25 ಕೆ.ಜಿ ಮಾರಾಟವಾಗುತ್ತಿದೆ. ಇದರಿಂದ ರೈತರಿಗೆ ತುಂಬಾ ನಷ್ಟವಾಗುತ್ತಿದ್ದು, ಟೊಮೆಟೊ ಮಾರುಕಟ್ಟೆಗೆ ತಂದು ಮಾರಿದರೂ, ಕೂಲಿ ಮತ್ತು ಸಾಗಾಣಿಕೆ ವೆಚ್ಚ ಕೂಡ ರೈತರಿಗೆ ಸಿಗುತ್ತಿಲ್ಲ.

Raichur Farmers In Trouble For Tomato Prices Drop

ಇದರಿಂದ ಬೇಸತ್ತ ತಾಲೂಕಿನ ಕಡ್ಗಂದೊಡ್ಡಿ ಸುಧಾಕರ್‌ ಎನ್ನುವ ರೈತ ಎರಡೂವರೆ ಎಕರೆಯಲ್ಲಿ ಬೆಳೆದ ಟೊಮೆಟೊ ಬೆಳೆಯನ್ನು ಗಿಡದಿಂದ ಕೀಳದೇ ಹೊಲದಲ್ಲಿ ಹಾಗೆ ಬಿಟ್ಟಿದ್ದು ಗಿಡದಲ್ಲಿ ಕೊಳೆಯತ್ತಿವೆ. ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ದರ ದುಬಾರಿಯಾಗಿದ್ದು, ಒಂದು ಎಕರೆಗೆ 40ಸಾವಿರ ರೂಪಾಯಿ ಖರ್ಚು ಬರುತ್ತಿದ್ದು, ಹಾಕಿದ ಬಂಡವಾಳ ಕೂಡ ರೈತರಿಗೆ ಸಿಗುತ್ತಿಲ್ಲ.

ಚುನಾವಣೆ ಬಂದಾಗ ರಾಜಕೀಯ ಪಕ್ಷಗಳು ರೈತ ದೇಶದ ಬೆನ್ನೆಲುಬು ಅವರ ಪರವಾಗಿ ನಿಲ್ಲುತ್ತೇವೆ ಎಂದು ಹೇಳುತ್ತಾರೆ ಅದರೆ ರೈತರ ಕಷ್ಟ ಕೇಳುವವರಾರು ಇಲ್ಲ. ತಮಿಳುನಾಡಿನಲ್ಲಿ ಟೊಮೆಟೊ ಜ್ಯೂಸ್ ಕಂಪನಿ ಹಾಕಿದ್ದಾರೆ. ಅದರಂತೆ ರಾಯಚೂರಿನಲ್ಲಿ ಟೊಮೆಟೊ ಜ್ಯೂಸ್ ಕಂಪನಿ ತೆರೆಯುವಂತೆ ಸರ್ಕಾರಕ್ಕೆ ರೈತರು ಒತ್ತಾಯ ಮಾಡಿದ್ದಾರೆ.

ಜ್ಯೂಸ್ ಕಂಪನಿ ಆದರೆ ಫಸ್ಟ್ ಕ್ವಾಲಿಟಿ ಹಣ್ಣು ಮಾರುಕಟ್ಟೆಗೆ ಹೋದರೆ ಸೆಕೆಂಡ್ ಕ್ವಾಲಿಟಿ ಹಣ್ಣುಗಳು ಕಂಪನಿಗೆ ಮಾರಾಟವಾಗುತ್ತದೆ. ಇದರಿಂದ ರೈತರಿಗೆ ಉತ್ತಮ ಬೆಲೆ ಸಿಗುತ್ತದೆ. ಅದಕ್ಕಾಗಿ ಜಿಲ್ಲೆಯಲ್ಲಿ ಜ್ಯೂಸ್ ಕಂಪನಿ ತೆರೆಯಬೇಕು, ಟೊಮೆಟೊಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕೇಂದು ರೈತ ಲಕ್ಷ್ಮಣಗೌಡ ಕಡಗಂದೊಡ್ಡಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+