ರೈತ ಹಕ್ಕುಗಳ ದಿನವಾಗಿ ರಾಹುಲ್ ಹುಟ್ಟುಹಬ್ಬ ಆಚರಣೆ
ಲಕ್ನೋ
ಜೂ 17: ಗ್ರಾಮೀಣ ಭಾರತದಲ್ಲಿ ತನ್ನ ಪ್ರಭಾವವನ್ನು ಪುನಃ ಸ್ಥಾಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಮಹತ್ವದ ಯೋಜನೆ ರೂಪಿಸಿದೆ. ಯುವ ನೇತಾರ ರಾಹುಲ್ ಗಾಂಧಿ ಅವರಿಗಿರುವ ಜನಪ್ರಿಯತೆಯನ್ನು ಸಮರ್ಥವಾಗಿ ಬಳಸಿಕೊಳ್ಳಲು ಪಕ್ಷ ಚಿಂತಿಸಿದೆ. ರಾಹುಲ್ ಗಾಂಧಿ ಅವರ ಹುಟ್ಟುಹಬ್ಬ(ಜೂನ್ 19)ವನ್ನು ರೈತರ ಹಕ್ಕುಗಳ ದಿನವಾಗಿ ಆಚರಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ. id="toptextpromo">ಕಿಸಾನ್
ಅಧಿಕಾರ್ ದಿವಸ್ ಎಂಬ ಹೆಸರಿನಲ್ಲಿ ಕಾಂಗ್ರೆಸ್ ಯುವರಾಜನನ್ನು ಮುಂದಿಟ್ಟುಕೊಂಡು ಗ್ರಾಮಗಳಲ್ಲಿ ಸಭೆಗಳನ್ನು ನಡೆಸಿ, ಕುಂದುಕೊರತೆಗಳನ್ನು ನೀಗಿಸುವ ಭರವಸೆ ನೀಡುವ ಯೋಜನೆ ಕಾಂಗ್ರೆಸ್ ಹಾಕಿಕೊಂಡಿದೆ. ಉತ್ತರ ಪ್ರದೇಶ ರಾಜ್ಯವೊಂದರಲ್ಲೇ ಸುಮಾರು 4000ಕ್ಕೂ ಅಧಿಕ ಗ್ರಾಮಸಭೆಗಳನ್ನು ಹಮ್ಮಿಕೊಂಡು ಪಂಚಾಯಿತಿ ಕಟ್ಟೆಯಲ್ಲಿ ಕೂತು ಶ್ರೀಸಾಮಾನ್ಯನ ಸಮಸ್ಯೆಗಳನ್ನು ಕಾಂಗ್ರೆಸ್ ಆಲಿಸುತ್ತದೆ. id='are-slot-1' class='oiad oi-axt oiadv'> id='top-searched-articles'>ಭೂ
ಕಬಳಿಕೆ ಇಲ್ಲಿ ಚರ್ಚೆಯಾಗುವ ಮಹತ್ವದ ಅಂಶ ಉಳಿದಂತೆ ರೈತರ ದೈನಂದಿನ ಆಗು ಹೋಗುಗಳು, ಸಮಸ್ಯೆಗಳು, ಸ್ಥಳೀಯ ಆಡಳಿತದ ನೆರವು ಮುಂತಾದ ವಿಷಯಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಯಲಿದೆ. ಕಿಸಾನ್ ಅಧಿಕಾರ್ ದಿವಸ್ ಗೆ ಮುನ್ನುಡಿ ಎಂಬಂತೆ ಕಳೆದ ವಾರ ಗ್ರೇಟರ್ ನೋಯ್ಡಾದ ಭಟಾ ಪರ್ ಸೌಲ್ ನಲ್ಲಿ ಕಿಸಾನ್ ಪಂಚಾಯತ್ ಅನ್ನು ಯಶಸ್ವಿಯಾಗಿ ಕಾಂಗ್ರೆಸ್ ನಡೆಸಿದೆ. ರಾಹುಲ್ ಗ್ರಾಮ ವಾಸ್ತವ್ಯದ ಫಲವಾಗಿ ಬಂದಿರುವ ಕಿಸಾನ್ ದಿನಾಚರಣೆ ರೈತರ ಪಾಲಿಗೆ ಒಂದು ದಿನದ ಹುಟ್ಟುಹಬ್ಬದ ಆಚರಣೆಯಾಗದೆ ಹಕ್ಕುಗಳನ್ನು ಚಲಾಯಿಸುವ ದಿನವಾದರೆ ಸಾರ್ಥಕವಾಗುತ್ತದೆ.











Click it and Unblock the Notifications