ಕೇಂದ್ರ ಬಜೆಟ್ ಗೆ ರೈತ, ದಲಿತ ವಿರೋಧಿ ಪಟ್ಟ, ಮೈಸೂರಲ್ಲಿ ಪ್ರತಿಭಟನೆ
ಮೈಸೂರು, ಫೆಬ್ರವರಿ 20: ದಲಿತ ಮತ್ತು ರೈತ ವಿರೋಧಿ ಕೇಂದ್ರ ಸರಕಾರದ 'ಬಜೆಟ್' ಎಂದು ಆರೋಪಿಸಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಮಾತನಾಡಿ, ಶೋಷಿತ ಸಮುದಾಯಗಳ ಅಭ್ಯುದಯಕ್ಕಾಗಿ ಆಗ್ರಹಿಸಿದರು. ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಸಂವಿಧಾನಬದ್ಧ ಮೂಲಭೂತ ಹಕ್ಕಾಗಿಸಲು ಒತ್ತಾಯಿಸಿದರು. ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ರೈತರ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು. ರಾಜ್ಯದಲ್ಲಿ ಸಮಾನ ಶಿಕ್ಷಣ ನೀತಿಯನ್ನು ರೂಪಿಸಲು ಡಾ.ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಶಿಕ್ಷಣ ಸಮಿತಿ ರಚಿಸಬೇಕು. ರಾಜ್ಯಗಳಲ್ಲಿ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಮೀಸಲು ಹಕ್ಕುಗಳನ್ನು ದೊರಕಿಸಿಕೊಡಬೇಕು. ಬ್ಯಾಕ್ ಲಾಗ್ ಹುದ್ದೆಗಳನ್ನು ಈ ಕೂಡಲೇ ತುಂಬಬೇಕು ಎಂಬುದು ಸೇರಿ ಹಲವು ಬೇಡಿಕೆಗಳು ಒಳಗೊಂಡ ಮನವಿಯನ್ನು ಜಿಲ್ಲಾಧಿಕಾರಿ ಮೂಲಕ ಸರಕಾರಕ್ಕೆ ಸಲ್ಲಿಸಿದರು.[2 ಲಕ್ಷ ರುಪಾಯಿ ಮೇಲಿನ ಆಭರಣದ ನಗದು ಖರೀದಿಗೆ ಶೇ 1ರಷ್ಟು ತೆರಿಗೆ]
ಸಮಿತಿಯ ಜಿಲ್ಲಾ ಸಂಚಾಲಕ ಸೋಸಲೆ ರಾಜಶೇಖರಮೂರ್ತಿ, ತಾಲೂಕು ಸಂಚಾಲಕ ಬನ್ನಹಳ್ಳಿ ಚಂದ್ರಶೇಖರ್, ಸ್ವಾಮಿ ಬೆಳತ್ತೂರು, ಜವರಾಯಿ, ಆಯತನಹಳ್ಳಿ ಮಂಜು, ಕೆ.ರಾಮಯ್ಯಕರಡಿಪುರ, ಸೋಮಶೇಖರ್ ಅಬಟೂರು, ದೇವರಾಜ್, ರಮೇಶ್, ಎಂ.ಮಹದೇವ ಅಕ್ಕೂರು, ಮರಿಕಾಳನ ಕೆಂಪಯ್ಯ ಇನ್ನೂ ಅನೇಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.












Click it and Unblock the Notifications